Watch & Earn: ವಿಡಿಯೋ ನೋಡಿ, ಮಜಾ ಮಾಡಿ; 10 ಗಂಟೆಗೆ 82,000 ರೂ ಗಳಿಸಿ; ಈ ಆಫರ್ ಸುಮ್ಮನೆ ಅಲ್ಲ, ಕಂಡೀಷನ್ಸ್ ಅಪ್ಲೈಡ್

10-Hour TikTok Watching: 10 ಗಂಟೆ ಕಾಲ ಟಿಕ್ ಟಾಕ್ ವಿಡಿಯೋಗಳನ್ನು ನೋಡಿ ಟ್ರೆಂಡಿಂಗ್ ಅನ್ನು ಗುರುತಿಸಬಲ್ಲಿರಾದರೆ ನಿಮಗೆ ಗಂಟೆಗೆ 100 ಡಾಲರ್​ನಂತೆ ಹಣ ಗಳಿಸಬಹುದು. ಈ ಮ್ಯಾರಥಾನ್ 10 ಗಂಟೆ ಟಿಕ್​ಟಾಕ್ ಸೆಷನ್​ಗೆ ಅರ್ಜಿ ಸಲ್ಲಿಸಲು ಅರ್ಜಿ ಕರೆಯಲಾಗಿದೆ.

Watch & Earn: ವಿಡಿಯೋ ನೋಡಿ, ಮಜಾ ಮಾಡಿ; 10 ಗಂಟೆಗೆ 82,000 ರೂ ಗಳಿಸಿ; ಈ ಆಫರ್ ಸುಮ್ಮನೆ ಅಲ್ಲ, ಕಂಡೀಷನ್ಸ್ ಅಪ್ಲೈಡ್
ವಿಡಿಯೋ ವೀಕ್ಷಣೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2023 | 1:01 PM

ವಾಷಿಂಗ್ಟನ್: ನಿಮಗೆ ವಿಡಿಯೋ ನೋಡುವ ಹುಚ್ಚಿದೆಯಾ? ಕೈಗೆ ಮೊಬೈಲ್ ಕೊಟ್ಟರೆ ಎಷ್ಟು ಹೊತ್ತು ಬೇಕಾದರೂ ಸೋಷಿಯಲ್ ಮೀಡಿಯಾ ವಿಡಿಯೋಗಳನ್ನು ನೋಡುವಿರಾ? ವಿಡಿಯೋ ಟ್ರೆಂಡ್​ಗಳನ್ನು ಗುರುತಿಸಬಲ್ಲಿರಾ? ನಿಮ್ಮ ವಯಸ್ಸು 18 ವರ್ಷ ದಾಟಿದೆಯಾ? ಹಾಗಿದ್ದರೆ ಇಲ್ಲೊಂದು ಭರ್ಜರಿ ಆಫರ್ ಇದೆ. 10 ಗಂಟೆ ಕಾಲ ಮ್ಯಾರಥಾನ್ ವಿಡಿಯೋ ವೀಕ್ಷಿಸುವ ಕೆಲಸ ನಿಮ್ಮದು. ಗಂಟೆಗೆ 100 ಡಾಲರ್ (8,200 ರೂ) ಸಿಗುತ್ತದೆ. 10 ಗಂಟೆಗೆ ನೀವು ಬರೋಬ್ಬರಿ 82,000 ರೂ ಗಳಿಸಬಹುದು. ಅಬ್ಬಬ್ಬಾ, ಈ ಆಫರ್ ಅನ್ನು ಯಾರಾದರೂ ಬಿಟ್ಟುಬಿಡಲು ಸಾಧ್ಯವೇ? ಒಂದಿಷ್ಟು ಕಂಡೀಷನ್ಸ್ ಇದೆ.

ಮೊದಲಿಗೆ ಇದು ಟಿಕ್ ಟಾಕ್ (TikTok) ಆಫರ್. ಭಾರತದಲ್ಲಿ ಟಿಕ್ ಟಾಕ್ ನಿಷೇಧವಾಗಿದೆ. ಅಮೆರಿಕದ ಇನ್​ಫ್ಲುಯೆನ್ಸರ್ ಮಾರ್ಕೆಟಿಂಗ್ ಏಜೆನ್ಸಿ ಯೂಬಿಕ್ವಿಟಸ್ (Ubiquitous) ಈ ಆಫರ್ ಕೊಟ್ಟಿದೆ. ನಿರಂತರವಾಗಿ ಟಿಕ್ ಟಾಕ್ ನೋಡುವ ಮತ್ತು ಆನ್​ಲೈನ್ ಟ್ರೆಂಡ್​ಗಳನ್ನು ಅರಿತುಕೊಳ್ಳುವಂತಹ ವ್ಯಕ್ತಿಗಳು ಈ 10 ಗಂಟೆ ಟಿಕ್ ಟಾಕ್ ಸೆಷನ್​ನಲ್ಲಿ ಪಾಲ್ಗೊಳ್ಳಬಹುದು ಎಂದಿದೆ. ಆದರೆ, ಈ ಆಫರ್ ಇರುವುದು ಮೂವರಿಗೆ ಮಾತ್ರ. ಆದರೆ, ಯಾರು ಬೇಕಾದರೂ ಅರ್ಜಿ ಗುಜರಾಯಿಸಬಹುದು.

ಆಯ್ದ ಅಭ್ಯರ್ಥಿಗಳು ಟಿಕ್ ಟಾಕ್ ವಿಡಿಯೋಗಳನ್ನು ನೋಡುವುದಲ್ಲದೇ, ತಾವು ವಿಡಿಯೊಗಳನ್ನು ವೀಕ್ಷಿಸುವಾಗ ಯಾವುದಾದರೂ ಟ್ರೆಂಡ್​ಗಳು ಕಂಡು ಬಂದರೆ ಅದನ್ನು ಒಂದು ಡಾಕ್ಯುಮೆಂಟ್​ನಲ್ಲಿ ಭರ್ತಿ ಮಾಡಬೇಡಬೇಕು. ಇದರೊಂದಿಗೆ ನಮಗೆ ಹೊಸ ಟ್ರೆಂಡ್​ಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಯುಬಿಕ್ವಿಟಸ್ ಸಂಸ್ಥೆ ಹೇಳಿದೆ.

ಇದನ್ನೂ ಓದಿViral Video: ನಾನ್​ ಕಲಿಯುಗದ ಕ್ಯಾಟ್​, ನಾ ಪೇಳ್ವಂತೆ ನೀ ಕೇಳ್​​ ಮಾನವಾ!

ಈ ಕೆಲಸ ಇಷ್ಟವಾಗುವವರು ಈ ಏಜೆನ್ಸಿಯ ಯೂಟ್ಯೂಬ್ ಚಾಲನ್​ಗೆ ಸಬ್​ಸ್ಕ್ರೈಬ್ ಆಗಬೇಕು. ತಾವು ಈ ಕೆಲಸಕ್ಕೆ ಯಾಕೆ ಸೂಕ್ತ ವ್ಯಕ್ತಿ ಎಂದು ಸಣ್ಣದಾಗಿ ವಿವರಿಸಿರುವ ವಿಡಿಯೋ ಮಾಡಿ ಕಳುಹಿಸಬೇಕು. 18 ವರ್ಷ ಮೇಲ್ಪಟ್ಟವರು ಮತ್ತು ಟಿಕ್ ಟಾಕ್ ಅಕೌಂಟ್ ಹೊಂದಿರುವ ಯಾರು ಬೇಕಾದರೂ ಅರ್ಜಿ ಹಾಕಬಹುದು. ಮೇ 31ರವರೆಗೂ ಕಾಲಾವಕಾಶ ಇದೆ.

ಆಯ್ಕೆಯಾದ ಅಭ್ಯರ್ಥಿಗಳು 10 ಗಂಟೆ ಟಿಕ್​ಟಾಕ್ ಸೆಷನ್​ನ ಬಳಿಕ ತಮ್ಮ ಅನುಭವವನ್ನು ಯಾವುದೇ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಳ್ಳಬೇಕಾಗಬಹುದು.

ಇದನ್ನೂ ಓದಿViral News: ಮುಸ್ಲಿಂ ಯುವಕನೊಂದಿಗಿನ ಬಿಜೆಪಿ ಮುಖಂಡನ ಮಗಳ ಮದುವೆ ರದ್ದು

ಚೀನಾ ಮೂಲದ ಟಿಕ್ ಟಾಕ್ 2017ರಲ್ಲಿ ಆರಂಭವಾಗಿತ್ತು. ಅಮೆರಿಕದಲ್ಲಿ ಬಹಳ ಜನಪ್ರಿಯವಾದ ವಿಡಿಯೋ ಶೇರಿಂಗ್ ಪ್ಲಾಟ್​ಫಾರ್ಮ್ ಇದು. 2020ರಲ್ಲಿ ಭಾರತದಲ್ಲಿ ಬ್ಯಾನ್ ಆಗುವವರೆಗೂ ಇಲ್ಲಿಯೂ ಇದು ನಂಬರ್ ಒನ್ ಆಗಿತ್ತು. ಬಹಳ ಮಂದಿ ಭಾರತೀಯರು ಈಗಲೂ ಕೂಡ ಸೋಷಿಯಲ್ ಮೀಡಿಯಾದ ಶಾರ್ಟ್ ವಿಡಿಯೋಗಳಿಗೆ ಟಿಕ್ ಟಾಕ್ ಎಂದೇ ಕರೆಯುವ ರೂಢಿ ಉಂಟು. ಅಮೆರಿಕದಲ್ಲಿ ಒಂದು ದಿನದಲ್ಲಿ ಜನರು 113 ನಿಮಿಷ ಕಾಲ ಟಿಕ್​ಟಾಕ್ ನೋಡುತ್ತಾರಂತೆ. ಅಷ್ಟರಮಟ್ಟಿಗೆ ಅವರು ಅಡಿಕ್ಟ್ ಆಗಿ ಹೋಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ