AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ? ಐಸಿಸಿ ನಿಯಮ ಏನು ಹೇಳುತ್ತದೆ?

India vs New Zealand T20 WC 2026 Final: 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಮಳೆ ಅಥವಾ ಇನ್ನಿತರ ಕಾರಣಗಳಿಂದ ಪಂದ್ಯ ರದ್ದಾದರೆ, ವಿಜೇತರು ಯಾರು ಎಂಬ ಪ್ರಶ್ನೆ ಮೂಡಿದೆ. ಐಸಿಸಿ ನಿಯಮಗಳ ಪ್ರಕಾರ ಮೀಸಲು ದಿನ ಮತ್ತು ಕನಿಷ್ಠ 10 ಓವರ್‌ಗಳ ಆಟ ಕಡ್ಡಾಯ. ಆದರೂ ಪಂದ್ಯ ಪೂರ್ಣಗೊಳ್ಳದಿದ್ದರೆ, ಐಸಿಸಿ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

T20 World Cup 2026: ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ? ಐಸಿಸಿ ನಿಯಮ ಏನು ಹೇಳುತ್ತದೆ?
India Vs New Zealand Final
ಪೃಥ್ವಿಶಂಕರ
|

Updated on: Mar 06, 2026 | 4:27 PM

Share

2026 ರ ಟಿ20 ವಿಶ್ವಕಪ್‌ನ ಫೈನಲ್ ( T20 World Cup Final 2026) ಪಂದ್ಯ ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ನಡೆಯಲಿದೆ. ಒಂದೆಡೆ ಕಿವೀಸ್, ದಕ್ಷಿಣ ಆಫ್ರಿಕಾ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಫೈನಲ್​ಗೇರಿದ್ದರೆ, ಮತ್ತೊಂದೆಡೆ ಆತಿಥೇಯ ಭಾರತ, ಇಂಗ್ಲೆಂಡ್ ತಂಡವನ್ನು ರೋಚಕ ಪಂದ್ಯದಲ್ಲಿ ಸೋಲಿಸಿ ಫೈನಲ್ ಟಿಕೆಟ್ ಪಡೆದುಕೊಂಡಿದೆ. ಟಿ20 ವಿಶ್ವಕಪ್ ಫೈನಲ್​ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಈ ಎರಡು ಬಲಿಷ್ಠ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತವೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದುಕುಳಿತಿದ್ದಾರೆ. ಆದರೆ ಒಂದು ದೊಡ್ಡ ಪ್ರಶ್ನೆಯೆಂದರೆ: ಮಳೆಯಿಂದಾಗಿ ಅಥವಾ ಇನ್ನಿತರೆ ಕಾರಣದಿಂದಾಗಿ ಪಂದ್ಯ ರದ್ದಾದರೆ, ಯಾರಿಗೆ ಚಾಂಪಿಯನ್ ಪಟ್ಟ ಸಿಗಲಿದೆ? ಭಾರತ ಚಾಂಪಿಯನ್ ಆಗುತ್ತದೆಯೇ ಅಥವಾ ನ್ಯೂಜಿಲೆಂಡ್ ಆಗುತ್ತದೆಯೇ? ಎಂಬುದಾಗಿದೆ. ಹಾಗಿದ್ದರೆ, ಈ ಬಗ್ಗೆ ಐಸಿಸಿ ನಿಯಮ ಏನು ಹೇಳುತ್ತದೆ ಎಂಬುದನ್ನು ನೋಡುವುದಾದರೆ…

ಪಂದ್ಯ ರದ್ದಾದರೆ, ಯಾರು ಚಾಂಪಿಯನ್?

ಇದು ಪ್ರಶಸ್ತಿ ಸುತ್ತಿನ ಪಂದ್ಯ ಆಗಿರುವುದರಿಂದ ಐಸಿಸಿ ಫಲಿತಾಂಶವನ್ನು ಎದುರು ನೋಡುತ್ತಿದೆ. ಪರಿಣಾಮವಾಗಿ, ಐಸಿಸಿ ಈ ಪಂದ್ಯಕ್ಕಾಗಿ ಮೀಸಲು ದಿನವನ್ನು ಕಾಯ್ದಿರಿಸಿದೆ. ಪಂದ್ಯದ ದಿನದಂದು ಪಂದ್ಯ ಪ್ರಾರಂಭವಾಗಲು ಸಾಧ್ಯವಾಗದಿದ್ದರೆ ಅಥವಾ ಮಳೆಯಿಂದಾಗಿ ಅಪೂರ್ಣವಾಗಿ ಉಳಿದರೆ, ಪಂದ್ಯವನ್ನು ಮರುದಿನ (ಮಾರ್ಚ್ 9) ಅಂದರೆ ಮೀಸಲು ದಿನದಂದು ಆಡಲಾಗುತ್ತದೆ. ಪಂದ್ಯವು ಈಗಾಗಲೇ ಮಾರ್ಚ್ 8 ರಂದು ಪ್ರಾರಂಭವಾದರೂ ಮಳೆಯಿಂದಾಗಿ ನಿಲ್ಲಿಸಲ್ಪಟ್ಟರೆ, ಮಾರ್ಚ್ 9 ರಂದು ಅದೇ ಹಂತದಿಂದ ಅದು ಮುಂದುವರಿಯುತ್ತದೆ. ಇದರ ಜೊತೆಗೆ ಫೈನಲ್‌ಗಾಗಿ, ಎರಡೂ ದಿನಗಳಲ್ಲಿ 120 ನಿಮಿಷಗಳ ಹೆಚ್ಚುವರಿ ಸಮಯವನ್ನು ಸಹ ಮೀಸಲಿಡಲಾಗಿದೆ. ಓವರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿಯಾದರೂ ಪಂದ್ಯವನ್ನು ಪೂರ್ಣಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದಾಗ್ಯೂ ಫಲಿತಾಂಶವನ್ನು ನಿರ್ಧರಿಸಬೇಕೆಂದರೆ ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಬೇಕು.

2026 T20 WC Final Prize Money: ಗೆದ್ದ ತಂಡದ ಮೇಲೆ ಹಣದ ಮಳೆ; ಸೋತ ತಂಡಕ್ಕೂ ಸಿಗಲಿದೆ ಕೋಟಿ

ಜಂಟಿ ವಿಜೇತರು ಎಂದು ಘೋಷಣೆ

ಆದಾಗ್ಯೂ ಮಾರ್ಚ್ 8 ಮತ್ತು 9 ರಂದು ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಅಥವಾ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಇದರರ್ಥ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಾವಳಿಯ ಜಂಟಿ ಚಾಂಪಿಯನ್ ಆಗಿರುತ್ತವೆ. ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯಾಗಿ ಜಂಟಿ ವಿಜೇತರನ್ನು ಘೋಷಿಸಿರುವುದು ತೀರ ವಿರಳ. ಆದರೆ ಈ ವಿರಳ ಘಟನೆಗೆ ಟೀಂ ಇಂಡಿಯಾ ಸಾಕ್ಷಿಯಾಗಿದೆ. 2003 ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಬೇಕಾಯಿತು. ಹೀಗಾಗಿ ಭಾರತ ಮತ್ತು ಶ್ರೀಲಂಕಾ ಎರಡು ತಂಡಗಳು ಚಾಂಪಿಯನ್ಸ್ ಟ್ರೋಫಿಯನ್ನು ಹಂಚಿಕೊಂಡಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us