AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಶೌಚಾಲಯ ದಿನದಂದು ಬ್ರಸೆಲ್ಸ್‌ನಲ್ಲಿ ಒಳಚರಂಡಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಬಿಲ್ ಗೇಟ್ಸ್

ಒಳಚರಂಡಿಗೆ ಇಳಿದು ಬ್ರಸೆಲ್ಸ್ ನ ಒಳಚರಂಡಿ ವ್ಯವಸ್ಥೆಯ ಗುಪ್ತ ಇತಿಹಾಸವನ್ನು ಅನ್ವೇಷಿಸಿದ ಬಿಲ್​​​ ಗೇಟ್ಸ್. ನಗರದ ನೀರಿನ ತ್ಯಾಜ್ಯ ವ್ಯವಸ್ಥೆಯ ಸಂಕೀರ್ಣ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಅವರು ವಿಜ್ಞಾನಿಗಳೊಂದಿಗೆ ಭೇಟಿ ಮಾಡಿದ್ದಾರೆ.ಈ ವಿಡಿಯೊವನ್ನು ಗೇಟ್ಸ್ ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಶ್ವ ಶೌಚಾಲಯ ದಿನದಂದು ಬ್ರಸೆಲ್ಸ್‌ನಲ್ಲಿ ಒಳಚರಂಡಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಬಿಲ್ ಗೇಟ್ಸ್
ಬಿಲ್ ಗೇಟ್ಸ್
Follow us
ರಶ್ಮಿ ಕಲ್ಲಕಟ್ಟ
|

Updated on:Nov 24, 2023 | 12:59 PM

ನವೆಂಬರ್ 23, 2023: ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನದ(World Toilet Day) ಸಂದರ್ಭದಲ್ಲಿ, ಅಮೆರಿಕನ್ ಬಿಲಿಯನೇರ್ ಬಿಲ್ ಗೇಟ್ಸ್(Bill Gate) ಬ್ರಸೆಲ್ಸ್‌ನ ಒಳಚರಂಡಿ ವಸ್ತುಸಂಗ್ರಹಾಲಯಕ್ಕೆ (Sewer Museum in Brussels) ಭೇಟಿ ನೀಡಲು ಒಳಚರಂಡಿಗೆ ಇಳಿದರು. ಗೇಟ್ಸ್ ಅವರು Instagram ನಲ್ಲಿ ಹಂಚಿಕೊಂಡ ವಿಡಿಯೊವು ಅವರು ಒಳಚರಂಡಿಗೆ ಇಳಿದು ಬ್ರಸೆಲ್ಸ್ ನ ಒಳಚರಂಡಿ ವ್ಯವಸ್ಥೆಯ ಗುಪ್ತ ಇತಿಹಾಸವನ್ನು ಅನ್ವೇಷಿಸುವುದನ್ನು ತೋರಿಸಿದೆ. ನಗರದ ನೀರಿನ ತ್ಯಾಜ್ಯ ವ್ಯವಸ್ಥೆಯ ಸಂಕೀರ್ಣ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಅವರು ವಿಜ್ಞಾನಿಗಳೊಂದಿಗೆ ಭೇಟಿಯಾಗುವುದನ್ನು ವಿಡಿಯೊ ತೋರಿಸಿದೆ. ಒಳಚರಂಡಿ ಮತ್ತು ಸಂಸ್ಕರಣಾ ಘಟಕಗಳ 200 ಮೈಲಿ ಜಾಲವು ನಗರದ ತ್ಯಾಜ್ಯವನ್ನು ಸಂಸ್ಕರಿಸುತ್ತದೆ.

‘ಈ ವರ್ಷದ #WorldToiletDay ಗಾಗಿ ನಾನು ಬ್ರಸೆಲ್ಸ್‌ನ ಒಳಚರಂಡಿ ವ್ಯವಸ್ಥೆಯ ಗುಪ್ತ ಇತಿಹಾಸವನ್ನು-ಮತ್ತು ಜಾಗತಿಕ ಆರೋಗ್ಯದಲ್ಲಿ ತ್ಯಾಜ್ಯನೀರಿನ ಪಾತ್ರವನ್ನು ಅನ್ವೇಷಿಸಿದ್ದೇನೆ,’ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ನಾನು ಬ್ರಸೆಲ್ಸ್‌ನ ಭೂಗತ ವಸ್ತುಸಂಗ್ರಹಾಲಯದಲ್ಲಿ ಎಲ್ಲವನ್ನೂ ಅನುಭವಿಸಿದೆ. ನಗರದ ತ್ಯಾಜ್ಯನೀರಿನ ವ್ಯವಸ್ಥೆಯ ಇತಿಹಾಸವನ್ನು ದಾಖಲಿಸುವುದಾಗಿದೆ. 1800 ರ ದಶಕದಲ್ಲಿ ನಗರದ ಸೆನ್ನೆ ನದಿಗೆ ಒಳಚರಂಡಿಯನ್ನು ಸುರಿಯಲಾಯಿತು. ಅದು ಭಯಾನಕ ಕಾಲರಾ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಯಿತು. ಇಂದು, ಒಳಚರಂಡಿ ಮತ್ತು ಸಂಸ್ಕರಣಾ ಘಟಕಗಳ 200 ಮೈಲಿ ಜಾಲವು ನಗರದ ತ್ಯಾಜ್ಯವನ್ನು ಸಂಸ್ಕರಿಸುತ್ತದೆ.

ನೈರ್ಮಲ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಗೇಟ್ಸ್ ಅವರು 2015 ರಲ್ಲಿ “ಮಲದ ಕೆಸರು” ನಿಂದ ನೀರನ್ನು ಕುಡಿಯುವಂತಹ ವಿವಿಧ ಸಾರ್ವಜನಿಕ ಸಾಹಸಗಳಲ್ಲಿ ಭಾಗವಹಿಸಿದ್ದಾರೆ. ಒಂದು ವರ್ಷದ ನಂತರ, 2016 ರಲ್ಲಿ ಅವರು ಚಿತ್ರವೊಂದನ್ನು ಪೋಸ್ಟ್ ಮಾಡಿದ್ದ್ದು ಶೌಚಾಲಯದ ದುರ್ವಾಸನೆಯಿಂದ ಕೂಡಿತ್ತು ಎಂದಿದಾರೆ.

2018 ರಲ್ಲಿ, ಬಿಲಿಯನೇರ್ ಬೀಜಿಂಗ್‌ನಲ್ಲಿನ ರಿಇನ್ವೆಂಟೆಡ್ ಟಾಯ್ಲೆಟ್ ಎಕ್ಸ್‌ಪೋದಲ್ಲಿ ಭಾಷಣ ಮಾಡುವಾಗ ವೇದಿಕೆಗೆ ಪೂಪ್ ಬೀಕರ್‌ ತಂದಿದ್ದರು. ಬಿಲ್ ಗೇಟ್ಸ್ ತಮ್ಮ ಚಾರಿಟಿ ದಿ ಬಿಲ್ ಮತ್ತು ಮಾಜಿ ಪತ್ನಿಯ ಮೆಲಿಂಡಾ ಗೇಟ್ಸ್ ಫೌಂಡೇಶನ್ ಮೂಲಕ ವಿವಿಧ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಬದ್ಧರಾಗಿದ್ದಾರೆ.

ವಿಶ್ವ ಶೌಚಾಲಯ ದಿನವನ್ನು ವಾರ್ಷಿಕವಾಗಿ ನವೆಂಬರ್ 19 ರಂದು ಆಚರಿಸಲಾಗುತ್ತದೆ, ಇದು ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಸ್ಪೂರ್ತಿದಾಯಕ ಕ್ರಿಯೆಯಾಗಿದೆ. ಇದು 2013 ರಿಂದ ವಾರ್ಷಿಕ ವಿಶ್ವಸಂಸ್ಥೆಯ ಆಚರಣೆಯಾಗಿದೆ ಆದರೆ ಇದನ್ನು ಮೊದಲು 2001 ರಲ್ಲಿ ವಿಶ್ವ ಶೌಚಾಲಯ ಸಂಸ್ಥೆಯಿಂದ ಆಚರಿಸಲಾಯಿತು. ಈ ವರ್ಷದ ಥೀಮ್ ‘ಆಕ್ಸಿಲರೇಟಿಂಗ್ ಚೇಂಜ್’ ಆಗಿದೆ.

ಇದನ್ನೂ ಓದಿ: ವಾರದಲ್ಲಿ ಮೂರು ದಿನ ಕೆಲಸ ಸಾಧ್ಯ, ಉದ್ಯೋಗವೇ ಜೀವನದ ಉದ್ದೇಶವಲ್ಲ: ಬಿಲ್ ಗೇಟ್ಸ್

ನೀರು, ನೈರ್ಮಲ್ಯ ಮತ್ತು ನೈರ್ಮಲ್ಯದ ಅಸಮರ್ಪಕ ಲಭ್ಯತೆಯ ಪರಿಣಾಮವಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಪ್ರತಿ ವರ್ಷ 8,27,000 ಸಾವುಗಳು ಸಂಭವಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Fri, 24 November 23

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ