Viral Post: ಹೆಣ್ಣು ಮಗು ಜನಿಸಿದ ಖುಷಿಗೆ ಈ ಕುಟುಂಬ ಮಾಡಿದ್ದೇನು ನೋಡಿ; ಇಡೀ ಏರಿಯಾದಲ್ಲಿ ಪಿಂಕ್  ಬಲೂನ್​​​ಗಳ ಕಲರವ

ಹೆಣ್ಣು ಈ ಸಮಾಜದ ಕಣ್ಣು ಎಂದು ಹೇಳುವ ಮಾತಿದೆ. ಹೀಗಿದ್ರೂ ಕೂಡಾ ಹೆಣ್ಣು ಮಗು ಜನಿಸಿದ್ರೆ ಸಾಕು ಯಾಕಾದ್ರೂ ಈ ಹೆಣ್ಣು ಮಗು ಏಕೆ ಜನಿಸಿತೋ ಎಂದು ಮುಖ ಸಿಂಡರಿಸಿ ಕೊಳ್ಳುತ್ತಾರೆ. ಇಂತಹ ಜನಗಳ ಮಧ್ಯೆ ನೊಯ್ಡಾದ ಕುಟುಂಬವೊಂದು, ಇತ್ತೀಚಿಗೆ ತಮ್ಮ ಕುಟುಂಬಕ್ಕೆ ಪುಟ್ಟ ರಾಜಕುಮಾರಿಯ ಆಗಮನವಾದ ಖುಷಿಯಲ್ಲಿ ಸಂಪೂರ್ಣ ಹೌಸಿಂಗ್ ಸೊಸೈಟಿಯನ್ನು ಗುಲಾಬಿ ಬಣ್ಣದ ಬಲೂನ್ ಗಳಿಂದ ಅಲಂಕರಿಸಿ ಸಂಭ್ರಮಿಸಿದ್ದಾರೆ. ಈ ಕುರಿತ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral Post: ಹೆಣ್ಣು ಮಗು ಜನಿಸಿದ ಖುಷಿಗೆ ಈ ಕುಟುಂಬ ಮಾಡಿದ್ದೇನು ನೋಡಿ; ಇಡೀ ಏರಿಯಾದಲ್ಲಿ ಪಿಂಕ್  ಬಲೂನ್​​​ಗಳ ಕಲರವ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Feb 29, 2024 | 6:49 PM

ಅದೊಂದು ಕಾಲವಿತ್ತು… ಹೆಣ್ಣು ಮಕ್ಕಳನ್ನು ಕಳಂಕ ಎಂದು ಭಾವಿಸುತ್ತಿದ್ದರು. ಮನೆಯಲ್ಲಿ ಹೆಣ್ಣು ಮಗು ಜನಿಸಿದಂತೆಂದರೆ ಮನೆಯ ಹಿರಿಯರು ಆ ಪುಟ್ಟ ಕಂದಮ್ಮನ್ನ ಪ್ರಾಣವನ್ನೇ ತೆಗೆಯುತ್ತಿದ್ದರು ಅಥವಾ ಆ ಮಗುವಿನ ಜೊತೆಗೆ ತಾಯಿಯನ್ನು ಅನಿಷ್ಠ ಎಂದು ಹೀಯಾಳಿಸುತ್ತಿದ್ದರು, ಕೆಲವರು ಹೆಣ್ಣು ಮಗು ಹುಟ್ಟಿದರೆ ಆ ಮಗುವನ್ನು ಆ ತಕ್ಷಣ ಕಸದ ತೊಟ್ಟಿಗೆ ಎಸೆದು ಬರುತ್ತಿದ್ದರು ಇಲ್ಲವೇ ಭ್ರೂಣಾವಸ್ಥೆಯಲ್ಲಿಯೇ ಹೆಣ್ಣು ಭ್ರೂಣವನ್ನು ಚಿವುಟಿಹಾಕುತ್ತಿದ್ದರು. ಇಂತಹ ಅಮಾನವೀಯ ದೃಶ್ಯಗಳನ್ನು ನೀವೆಲ್ಲರೂ ಸಿನೆಮಾ ಕಥೆಗಳಲ್ಲಿ ನೋಡಿರುತ್ತಿರಿ ಅಲ್ವಾ. ಆದರೆ ಈಗ ಕಾಲ ಬದಲಾಗಿದೆ. ಸಮಾಜದಲ್ಲಿ ಗಂಡು ಮಗುವಿನಷ್ಟೇ ಹೆಣ್ಣು ಮಗುವಿಗೂ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇನ್ನೂ ಕೆಲವರು ಹೆಣ್ಣು ಮಗು ಹುಟ್ಟಿದರೆ ಸಾಕ್ಷತ್ ಲಕ್ಷ್ಮೀ ದೇವಿಗೆ ನಮ್ಮ ಮನೆಗೆ ಆಗಮಿಸಿದ್ದಾಳೆ ಎನ್ನುವಷ್ಟು ಸಂಭ್ರಮಿಸುತ್ತಾರೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ಕುಟುಂಬವೊಂದು ಸಂಪೂರ್ಣ ಹೌಸಿಂಗ್ ಸೊಸೈಟಿಯನ್ನು ಗುಲಾಬಿ ಬಣ್ಣದ ಬಲೂನ್ ಗಳಿಂದ ಅಲಂಕರಿಸಿ ಸಂಭ್ರಮಿಸಿದೆ.

ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿತು ಎಂಬ ಖುಷಿಯಲ್ಲಿ ಆ ಕುಟುಂಬದವರು ಸಂಪೂರ್ಣ ಹೌಸಿಂಗ್ ಸೊಸೈಟಿಯನ್ನು ಗುಲಾಬಿ ಬಣ್ಣದ ಬಲೂನ್ ಗಳಿಂದ ಅಲಂಕರಿಸಿ, ಪುಟ್ಟ ರಾಜಕುಮಾರಿಯ ಆಗಮನವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಮುದ್ದಾದ ಫೋಟೋವನ್ನು ಸುಪ್ರೀಯಾ (@Supriyyaaa) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಪೋಸ್ಟ್ ಅಲ್ಲಿ ಹೆಣ್ಣುಮಗು ಹುಟ್ಟಿದ ಖುಷಿಯಲ್ಲಿ ಆ ಮಗುವನ್ನು ಸ್ವಾಗತಿಸಲು ಸಂಪೂರ್ಣ ಹೌಸಿಂಗ್ ಸೊಸೈಟಿಯನ್ನು ಕುಟುಂಬವೊಂದು ಗುಲಾಬಿ ಬಣ್ಣದ ಬಲೂನ್ ಗಳಿಂದ ಅಲಂಕರಿಸಿರುವಂತಹ ಮುದ್ದಾದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

ಫೆಬ್ರವರಿ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಇಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಮ್ಮ ಮನೆಯಲ್ಲಿ ಪುಟ್ಟ ರಾಜಕುಮಾರಿ ಹುಟ್ಟಿದಾಗ ಸಂಪೂರ್ಣ ಮನೆಯನ್ನು ಇದೇ ರೀತಿ ಅಲಂಕರಿಸಿದ್ದೆವುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೆಣ್ಣು ಮಗುವಿನ ಆಗಮನವನ್ನು ಸಂಭ್ರಮಿಸುವ ಇಂತಹ ಕುಟುಂಬವನ್ನು ನೋಡಿದಾಗ ನನಗೆ ಬಹಳ ಸಂತೋಷವಾಗುತ್ತದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವಂತೂ ತುಂಬಾನೇ ಸುಂದರವಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Thu, 29 February 24