ಮೂರನೆಯದ್ದೂ ಹೆಣ್ಣು ಮಗು ಎಂದು 4 ತಿಂಗಳ ಬಾಲೆಯನ್ನು ಗೋಡೆಗೆ ಎಸೆದು ಕೊಂದ ಪೋಷಕರು

ರಿಂಟು ಮೊಂಡಲ್ ಮತ್ತು ಬೆಲುರಾ ಬೀಬಿಗೆ ಈ ಹಿಂದೆ ಇಬ್ಬರು ಹೆಣ್ಣುಮಕ್ಕಳಿದ್ದರು ಮೂರನೆಯದ್ದು ಗಂಡು ಮಗು ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾಗ ಹುಟ್ಟಿದ ಹೆಣ್ಣು. ಹೆಣ್ಣು ಮಗು ಹುಟ್ಟಿದ್ದಕ್ಕೆ ಈ ದಂಪತಿ ಕೋಪಗೊಂಡಿದ್ದರು ಎಂದು ಆರೋಪಿಸಲಾಗಿದೆ. ನಂತರ ಭಾನುವಾರ ಬೆಳಗ್ಗೆ ರಿಂಟು ಮತ್ತು ಬೆಲುರಾ ನಾಲ್ಕು ತಿಂಗಳ ಮಗುವನ್ನು ಗೋಡೆಗೆ ಎಸೆದಿದ್ದಾರೆ.

ಮೂರನೆಯದ್ದೂ ಹೆಣ್ಣು ಮಗು ಎಂದು 4 ತಿಂಗಳ ಬಾಲೆಯನ್ನು ಗೋಡೆಗೆ ಎಸೆದು ಕೊಂದ ಪೋಷಕರು
ರಿಂಟು ಮೊಂಡಲ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 05, 2024 | 3:27 PM

ಡೊಮ್ಕಲ್‌ ಫೆಬ್ರುವರಿ 05: ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನಲ್ಲಿ (Murshidabad) ನಾಲ್ಕು ತಿಂಗಳ ಮಗಳನ್ನು ಕೊಂದಿದ್ದಾರೆ ಎಂಬ ಆರೋಪ ಪೋಷಕರ ಮೇಲಿದೆ. ಮೂರನೆಯದ್ದೂ ಹೆಣ್ಣು ಮಗು ಆದ್ದರಿಂದ ಆ ನಾಲ್ಕು ತಿಂಗಳ ಮಗುವನ್ನು ಹೆತ್ತವರು ಕೊಂದಿದ್ದಾರೆ. ಮಗುವನ್ನು ಗೋಡೆಗೆ ಹೊಡೆದು ಬರ್ಬರವಾಗಿ ಸಾಯಿಸಿದ್ದು ಪ್ರಸ್ತುತ ಪ್ರಕರಣದ ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸ್ಥಳ ಮುರ್ಷಿದಾಬಾದ್‌ನ ಡೊಮ್ಕಲ್‌ನ (Domkal) ಭಟ್ಶಾಲಾ. ಮೃತ ಮಗುವಿನ ಹೆಸರು ಖದೀಜಾ ಖಾತುನ್ (4).

ರಿಂಟು ಮೊಂಡಲ್ ಮತ್ತು ಬೆಲುರಾ ಬೀಬಿಗೆ ಈ ಹಿಂದೆ ಇಬ್ಬರು ಹೆಣ್ಣುಮಕ್ಕಳಿದ್ದರು ಮೂರನೆಯದ್ದು ಗಂಡು ಮಗು ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾಗ ಹುಟ್ಟಿದ ಹೆಣ್ಣು. ಹೆಣ್ಣು ಮಗು ಹುಟ್ಟಿದ್ದಕ್ಕೆ ಈ ದಂಪತಿ ಕೋಪಗೊಂಡಿದ್ದರು ಎಂದು ಆರೋಪಿಸಲಾಗಿದೆ. ನಂತರ ಭಾನುವಾರ ಬೆಳಗ್ಗೆ ರಿಂಟು ಮತ್ತು ಬೆಲುರಾ ನಾಲ್ಕು ತಿಂಗಳ ಮಗುವನ್ನು ಗೋಡೆಗೆ ಎಸೆದಿದ್ದಾರೆ. ಸಾವನ್ನು ಖಚಿತಪಡಿಸಿಕೊಳ್ಳಲು ಅವರು ಅದನ್ನು ಮನೆಯೊಳಗೆ ಬಿಟ್ಟರು. ಇದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದೆ.

ಘಟನೆ ವೇಳೆ ಕುಟುಂಬದ ಸದಸ್ಯರೊಬ್ಬರು ಮಗುವಿನ ರಕ್ತಸಿಕ್ತ ಶವವನ್ನು ನೋಡಿದ್ದಾರೆ. ತಕ್ಷಣವೇ ಅಕ್ಕಪಕ್ಕದವಿರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಗುವಿನ ಸಾವಿನ ಬಗ್ಗೆ ಗಲಾಟೆ ಶುರುವಾಗಿದೆ. ಮೃತ ಮಗುವಿನ ಅಜ್ಜಿ ಫಿರೋಜಾ ಬೀಬಿ ಮಾತನಾಡಿ, ”ನನ್ನ ಮಗ ಮಾದಕ ವ್ಯಸನಿಯಾಗಿದ್ದಾನೆ. ಪ್ರತಿ ದಿನ ಹೆಂಡತಿ ಮತ್ತು ಮಗನ ನಡುವೆ ಜಗಳಗಳು ನಡೆಯುತ್ತಿತ್ತು. ಭಾನುವಾರವೂ ಜಗಳವಾಗಿದೆ. ಆ ವೇಳೆ ಮಗುವನ್ನು ಸಾಯಿಸಲಾಗಿದೆ ಎಂದಿದ್ದಾರೆ.

ಡೊಮ್ಕಲ್‌ನ ಪೊಲೀಸರ ಪ್ರಕಾರ, ವಿಚಾರಣೆ ವೇಳೆ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡ ಪೋಷಕರನ್ನು ಭಾನುವಾರ ಬಂಧಿಸಲಾಗಿದೆ. ದಂಪತಿ ಮಗುವನ್ನು ಗೋಡೆಗೆ ಹಲವಾರು ಬಾರಿ ಹೊಡೆದಿದ್ದು ಆಕೆಯ ಸಾವಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಮಗುವಿನ ದೇಹವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಗುವಿನ ಅಜ್ಜ ದಬೀರ್ ಶೇಖ್, ತನ್ನ ಮಗ ರಿಂಟು ತನ್ನ ಮೊಮ್ಮಗಳನ್ನು ಹೊಡೆದು ಕೊಂದಿದ್ದಾನೆ.ಮಗುವಿನ ಕೊಲೆಯಲ್ಲಿ ತನ್ನ ಸೊಸೆಯೂ ಭಾಗಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ; ಕಲ್ಪನೆ ತಿರಸ್ಕರಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಪೊಲೀಸ್ ಮೂಲಗಳ ಪ್ರಕಾರ, ಕೇರಳದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರಿಂಟು ಶೇಖ್ ವಾರದ ಹಿಂದೆ ಗ್ರಾಮಕ್ಕೆ ಮರಳಿದ್ದ. ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಪತ್ನಿಯನ್ನು ನಿಂದಿಸಲು ಆರಂಭಿಸಿದ್ದ. ದಂಪತಿಗಳು ಆರಂಭದಲ್ಲಿ ತಮ್ಮ ಮಗಳನ್ನು ಕೊಂದಿರುವುದನ್ನು ನಿರಾಕರಿಸಿದರು ಆದರೆ ನಂತರ ವಿಚಾರಣೆಯ ಸಮಯದಲ್ಲಿ ಅತ್ತು ಅಪರಾಧವನ್ನು ಒಪ್ಪಿಕೊಂಡರು ಎಂದು ಡೊಮ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಗಂಡು ಮಗು ಬಯಸಿ ಹೆಣ್ಣು ಮಗು ಹುಟ್ಟಿದ್ದಕ್ಕೆ ಪೋಷಕರು ಮಗುವನ್ನು ಕೊಂದಿದ್ದಾರೆ ಎನ್ನಲಾಗಿದೆ. ಆದರೆ ಆರ್ಥಿಕ ಅಡಚಣೆಗಳಿಂದಾಗಿ ಮಗುವನ್ನು ಸಾಕಲು ಸಾಧ್ಯವಾಗುತ್ತಿಲ್ಲ ಎಂದು ದಂಪತಿ ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ