ಹಳೇ ಹುಬ್ಬಳ್ಳಿ ಗಲಭೆ ಕೇಸ್: ಅಂಜುಮನ್ ಸಂಸ್ಥೆ ಚುನಾವಣೆಗೆ ಬಂಧಿತ ಆರೋಪಿಗಳ ಪೋಷಕರಿಂದ ಅಡ್ಡಿ, ಗಲಾಟೆ
ಹುಬ್ಬಳ್ಳಿ ಅಂಜುಮನ್ ಇ ಇಸ್ಲಾಂ ಸಂಸ್ಥೆಯ ಚುನಾವಣೆ ಫೆಬ್ರವರಿ 18 ರಂದು ನಡೆಯಲಿದೆ. ಆದರೆ, ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಯುವಕರ ಪೋಕಷರು ಚುನಾವಣೆಗೆ ಅಡ್ಡಿಪಡಿಸುತ್ತಿದ್ದಾರೆ. ಬಂಧಿತ ಆರೋಪಿಗಳ ಬಿಡುಗಡೆಯ ಹೊಣೆಯನ್ನು ಈ ಸಂಸ್ಥೆ ಹೊತ್ತುಕೊಂಡಿರುವ ಹಿನ್ನೆಲೆ ಮೊದಲು ತಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸಿ ಬಳಿಕ ಚುನಾವಣೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ.
ಹುಬ್ಬಳ್ಳಿ, ಫೆ.5: ಅಂಜುಮನ್ ಇ ಇಸ್ಲಾಂ (Anjuman E Islam) ಸಂಸ್ಥೆಯ ಚುನಾವಣೆ ಫೆಬ್ರವರಿ 18 ರಂದು ನಡೆಯಲಿದೆ. ಆದರೆ, ಹಳೆ ಹುಬ್ಬಳ್ಳಿ (Hubli) ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಯುವಕರ ಪೋಕಷರು ಚುನಾವಣೆಗೆ ಅಡ್ಡಿಪಡಿಸುತ್ತಿದ್ದಾರೆ. ಬಂಧಿತ ಆರೋಪಿಗಳ ಬಿಡುಗಡೆಯ ಹೊಣೆಯನ್ನು ಈ ಸಂಸ್ಥೆ ಹೊತ್ತುಕೊಂಡಿರುವ ಹಿನ್ನೆಲೆ ಮೊದಲು ತಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸಿ ಬಳಿಕ ಚುನಾವಣೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಅಲ್ಲದೆ, ಅಭ್ಯರ್ಥಿಗಳು ಮತ್ತು ಪೋಷಕರು ಪರಸ್ಪರ ಕೈಕೈ ಮಿಸಲಾಯಿಸಿಕೊಂಡಿದ್ದಾರೆ.
ಹುಬ್ಬಳ್ಳಿ ಅಂಜುಮನ್ ಇ ಇಸ್ಲಾಂ ಸಂಸ್ಥೆಯ ಚುನಾವಣೆ ಹಿನ್ನೆಲೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹೀಗಾಗಿ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಆಗಮಿಸಿದಾಗ ಬಂಧಿತರ ಪೋಷಕರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಮೊದಲು ನಮ್ಮ ಮಕ್ಕಳನ್ನು ಜೈಲಿನಿಂದ ಮುಕ್ತಿಗೊಳಿಸಿ, ಬಳಿಕ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ದಂಪತಿಗಳ ನಡುವೆ ಬಿರುಕು, ನಕಲಿ ಕ್ರೈಸ್ತ ಪಾದ್ರಿಗೆ ಥಳಿತ
ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಆದರೂ ಪೊಲೀಸರು ನಮ್ಮ ಮಕ್ಕಳನ್ನ ಅರೆಸ್ಟ್ ಮಾಡಿದ್ದಾರೆ. ಇನ್ನೂ 2 ತಿಂಗಳು ಕಳೆದರೆ ನಮ್ಮ ಮಕ್ಕಳ ಬಂಧನವಾಗಿ ಎರಡು ವರ್ಷ ಕಳೆಯುತ್ತದೆ. ಮೊದಲು ನಮ್ಮ ಮಕ್ಕಳ ಬಿಡುಗಡೆಗೆ ಕಾನೂನು ಹೋರಾಟ ಮಾಡಿ. ಆಮೇಲೆ ಚುನಾವಣೆ ನಡೆಸಿ. ನಮ್ಮ ಮಕ್ಕಳಿಲ್ಲದೇ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಪರಸ್ಪರ ಮಾತಿನ ಚಕಮಕಿ ನಡೆದು ಅಭ್ಯರ್ಥಿಗಳು ಹಾಗೂ ಬಂಧಿತ ಆರೋಪಿಗಳ ಕುಟುಂಬಸ್ಥರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಬಂಧಿತರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಜವಾಬ್ದಾರಿಯನ್ನು ಅಂಜುಮನ್ ಸಂಸ್ಥೆ ಹೊತ್ತುಕೊಂಡಿದೆ. 152 ಬಂಧಿತರ ಪೈಕಿ 44 ಮಂದಿಗೆ ಈಗಾಗಲೇ ಜಾಮೀನು ಕೊಡಿಸಿದೆ. ಇನ್ನೂ 108 ಮಂದಿ ಜೈಲಿನಲ್ಲಿದ್ದು, ಇವರನ್ನು ಬಿಡುಗಡೆಗೊಳಿಸುವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ.
ಹಳೇ ಹುಬ್ಬಳ್ಳಿ ಠಾಣೆ ಮುಂದೆ 2022ರ ಏಪ್ರಿಲ್ 16 ರಂದು ನಡೆದಿದ್ದ ಗಲಭೆ ಇದಾಗಿದ್ದು, ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನ ಮೇಲೆ ಕಲ್ಲುತೂರಾಟ ಮಾಡಲಾಗಿತ್ತು. ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ 13 ಎಫ್‌ಐಆರ್ ದಾಖಲಾಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ