ಹುಬ್ಬಳ್ಳಿ: ದಂಪತಿಗಳ ನಡುವೆ ಬಿರುಕು, ನಕಲಿ ಕ್ರೈಸ್ತ ಪಾದ್ರಿಗೆ ಥಳಿತ
ಹುಬ್ಬಳ್ಳಿಯ ಹೆಗ್ಗೆರಿಯ ಮಿಷನ್ ಕಾಪೌಂಡ್ನಲ್ಲಿ ನವೀನ್ ಒಳಗುಂದಿ ಹಾಗೂ ಫ್ರೆನಿ ಒಳಗುಂದಿ ದಂಪತಿಗಳು ವಾಸವಾಗಿದ್ದಾರೆ. ನವೀನ್ ಮತ್ತು ಫೆನ್ರಿ ವಿವಾಹವಾಗಿ 16 ವರ್ಷ ಕಳೆದಿವೆ. ಆರು ವರ್ಷದ ಹಿಂದೆ ಒಳಗುಂದಿ ಕುಟುಂಬಕ್ಕೆ ನಕಲಿ ಪಾದ್ರಿ ಸಂತೋಷ ಪರಿಚಯವಾಗಿದ್ದಾನೆ. ಕಳೆದ ಎರೆಡು ವರ್ಷಗಳಿಂದ ಸಂತೋಷ ಫ್ರೆನಿಯೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದಾನೆ ಮುಂದೇನಾಯ್ತು ಈ ಸ್ಟೋರಿ ಓದಿ...
ಹುಬ್ಬಳ್ಳಿ, ಫೆಬ್ರವರಿ 04: ಮಹಿಳೆಯ ಬ್ರೇನ್ ವಾಶ್ ಮಾಡಿ, ತನ್ನ ಬುಟ್ಟಿಗೆ ಬೀಳಿಸಿಕೊಂಡಿದ್ದ ನಕಲಿ ಕ್ರೈಸ್ತ ಪಾದ್ರಿಗೆ (Christian priest) ಥಳಿಸಿರುವ ಘಟನೆ ಹುಬ್ಬಳ್ಳಿಯ (Hubballi) ಹೆಗ್ಗೆರಿಯಲ್ಲಿ ನಡೆದಿದೆ. ಹೆಗ್ಗರಿ ನಿವಾಸಿ ಸಂತೋಷ ಗಂಧದ ನಕಲಿ ಕ್ರೈಸ್ತ ಪಾದ್ರಿ. ನಗರದ ಮಿಷನ್ ಕಾಪೌಂಡ್ನಲ್ಲಿ ನವೀನ್ ಒಳಗುಂದಿ ಹಾಗೂ ಫ್ರೆನಿ ಒಳಗುಂದಿ ದಂಪತಿಗಳು ವಾಸವಾಗಿದ್ದಾರೆ. ನವೀನ್ ಮತ್ತು ಫೆನ್ರಿ ವಿವಾಹವಾಗಿ 16 ವರ್ಷ ಕಳೆದಿವೆ. ಆರು ವರ್ಷದ ಹಿಂದೆ ಒಳಗುಂದಿ ಕುಟುಂಬಕ್ಕೆ ನಕಲಿ ಪಾದ್ರಿ ಸಂತೋಷ ಪರಿಚಯವಾಗಿದ್ದಾನೆ.
ಕಳೆದ ಎರೆಡು ವರ್ಷಗಳಿಂದ ಸಂತೋಷ ಫ್ರೆನಿಯೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದಾನೆ. ನಕಲಿ ಪಾದ್ರಿ ಸಂತೋಷ ಗುಟ್ಟು ಗುಟ್ಟಾಗಿ ಫ್ರೆನಿಗೆ ಭೇಟಿಯಾಗುತ್ತಿದ್ದನಂತೆ. ಕಳೆದ ಒಂದು ತಿಂಗಳನಿಂದ ಫ್ರೆನಿ ಪತಿ ನವಿನ್ ಅವರಿಂದ ದೂರವಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಶಿವಮೊಗ್ಗದ ಪಾದ್ರಿ ಅರೆಸ್ಟ್
ಇದೀಗ ಫ್ರೆನಿ ಪತಿ ನವೀನ್ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ನಕಲ ಪಾದ್ರಿ ಸಂತೋಷ ನನ್ನ ಪತ್ನಿ ಫ್ರೆನಿಯನ್ನು ಪುಸಲಾಯಿಸಿದ್ದು, ವಿಚ್ಛೇದನಕ್ಕೆ ಆತನೆ ಕಾರಣ ಎಂದು ನವೀನ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಹಿರಿಯರ ನಡುವೆ ಸಂಧಾನ ನಡೆದಿದೆ.
ಇಂದು (ಫೆ.04) ಹೆಗ್ಗೆರಿ ಚರ್ಚ್ ಬಳಿ ಸಂತೋಷ ಮತ್ತು ಫೆನ್ರಿಗೆ ನವೀನ್ ಹಾಗೂ ನವೀನ್ ಸಹೋದರ ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಆಗ ನವೀನ್ ಮತ್ತು ನವೀನ್ ಸಹೋದರ ನಕಲಿ ಪಾದ್ರಿ ಸಂತೋಷಗೆ ಥಳಿಸಿದ್ದಾರೆ. ಇದೀಗ ನಕಲಿ ಪಾದ್ರಿ ಸಂತೋಷ ಹಳೆಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ