ಕೊಡಗು: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ. ಇನ್ನೊಂದೆಡೆ, ವಿಜಯಪುರ ಕೋರ್ಟ್ ಸಂಕೀರ್ಣ ಬಳಿ ಯುವಕನ ಮೇಲೆ ತಲ್ವಾರ್ನಿಂದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಡಿಕೇರಿ, ಫೆ.5: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ (Murder) ಅಂತ್ಯಗೊಂಡ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರದಲ್ಲಿ (Kushalnagar) ನಡೆದಿದೆ. ಸಾಜಿದ್ (22) ಕೊಲೆಯಾದ ಯುವಕನಾಗಿದ್ದಾನೆ. ಮೈಸೂರು ರಸ್ತೆಯಲ್ಲಿರುವ ಸಾಜಿದ್ ಶ್ರೀನಿಧಿ ಎಂಬವರ ಸರ್ವಿಸ್ ಸ್ಟೇಷನ್ಗೆ ಬೈಕ್ ಸರ್ವಿಸ್ ಮಾಡಲೆಂದು ಸಾಜೀದ್ ಆಗಮಿಸಿದ್ದನು. ಈ ವೇಳೆ ಇಬ್ಬರ ನುಡವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ.
ಜಗಳದ ವೇಳೆ ಶ್ರೀನಿಧಿ ಹರಿತವಾದ ಆಯುಧದಿಂದ ಸಾಜಿದ್ಗೆ ಇರಿದಿದ್ದಾನೆ. ಕೂಡಲೇ ಸಾಜಿದ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕೃತ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಶಾಲನಗರ ಟೌನ್ ಠಾಣಾ ಪೊಲೀಸರು ಆರೋಪಿ ಶ್ರೀನಿಧಿನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಕೇಸ್: ಆರೋಪಪಟ್ಟಿ ಸಲ್ಲಿಕೆ, 8 ನಿಮಿಷದಲ್ಲಿ ನಡೆದಿತ್ತು ಹತ್ಯೆ
ವಿಜಯಪುರ ಕೋರ್ಟ್ ಸಂಕೀರ್ಣ ಬಳಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ವಿಜಯಪುರ: ಕೋರ್ಟ್ ಸಂಕೀರ್ಣ ಬಳಿ ಯುವಕನ ಮೇಲೆ ತಲ್ವಾರ್ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹೂವಿನ ವ್ಯಾಪಾರ ಮಾಡುತ್ತಿದ್ದ ಶಿವಶಕ್ತಿ ನಗರದ ನಿವಾಸಿ ಫಿರೋಜ್ ಹಲ್ಲೆಗೊಳಗಾದ ಯುವಕ. ಫಿರೋಜ್ ಮೇಲೆ ಹಲ್ಲೆ ಮಾಡಿದ ಯುವಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳು ಫಿರೋಜ್ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ