AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ಗೂಡ್ಸ್ ರೈಲಿನ ಕೆಳಗೆ ಸಿಲುಕಿದ ಮಹಿಳೆ ಪವಾಡ ಸದೃಶ ರೀತಿಯಲ್ಲಿ ಪಾರು

ಮಹಿಳೆಯೊಬ್ಬರು ರೈಲು ಹಳಿ ದಾಟುತ್ತಿದ್ದಾಗ ಏಕಾಏಕಿಯಾಗಿ ಗೂಡ್ಸ್​ ರೈಲು ಬಂದಿದ್ದು, ಸಮಯಪ್ರಜ್ಞೆಯಿಂದ ಹಳಿ ಮೇಲೆ ಉದ್ದವಾಗಿ ಮಲಗಿ ಪ್ರಾಣ ಉಳಿಸಿಕೊಂಡಿರುವಂತಹ ಅಚ್ಚರಿಯ ಘಟನೆಯೊಂದು ಬಿಹಾರಿಯ ಅರಾರಿಯಾದಲ್ಲಿ ಕಂಡುಬಂದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

TV9 Web
| Edited By: |

Updated on:Feb 29, 2024 | 8:55 PM

Share

ಬಿಹಾರ, ಫೆಬ್ರವರಿ 29: ಮಹಿಳೆಯೊಬ್ಬರು  (woman) ರೈಲು ಹಳಿ ದಾಟುತ್ತಿದ್ದಾಗ ಏಕಾಏಕಿಯಾಗಿ ಗೂಡ್ಸ್​ ರೈಲು ಬಂದಿದ್ದು, ಸಮಯಪ್ರಜ್ಞೆಯಿಂದ ಹಳಿ ಮೇಲೆ ಉದ್ದವಾಗಿ ಮಲಗಿ ಪ್ರಾಣ ಉಳಿಸಿಕೊಂಡಿರುವಂತಹ ಅಚ್ಚರಿಯ ಘಟನೆಯೊಂದು ಬಿಹಾರಿಯ ಅರಾರಿಯಾದಲ್ಲಿ ಕಂಡುಬಂದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ವಿಡಿಯೋ ನೋಡಿದ ಜನರು ಗಾಬರಿ ವ್ಯಕ್ತಪಡಿಸಿದ್ದಾರೆ. ಬತ್ನಾಹಾ ರೈಲು ನಿಲ್ದಾಣದಲ್ಲಿ ರೈ.ಲಿನ ಕೆಳಗಡೆ ಸಿಲುಕ್ಕಿದ್ದ ಮಹಿಳೆಗೆ ಟ್ರ್ಯಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಉದ್ದವಾಗಿ ಮಲಗಲು ಹೇಳಿದ್ದಾರೆ. ಸ್ವಲ್ವವು ಅಲುಗಾಡದಂತೆ ಎಚ್ಚರಿಕೆ ನೀಡಿದ್ದಾರೆ. ರೈಲು ಹೋದ ಬಳಿಕ ಮಹಿಳೆ ಭಯಭೀತರಾಗಿದ್ದರು. ಸದ್ಯ ಮಹಿಳೆ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆ ವೇಳೆ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು.

ಬತ್ನಾಹಾ ಸ್ಟೇಷನ್ ಯಾರ್ಡ್‌ನ ಐದನೇ ಸಾಲಿನಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ಮಹಿಳೆಯೊಬ್ಬರು ಹಳಿ ದಾಟುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ರೈಲು ಬರುತ್ತಿರುವುದನ್ನು ಕಂಡ ಮಹಿಳೆ ಕಿರುಚಿದ್ದಾರೆ. ಅಲ್ಲಿದ್ದ ಇತರೆ ಕಾರ್ಮಿಕರು ಮಹಿಳೆಯನ್ನು ರೈಲು ಹಳಿ ಮೇಲೆ ಮಲಗುವಂತೆ ಹೇಳಿದ್ದಾರೆ. ಮಹಿಳೆ ಕೂಡ ಅವರು ಮಾತನ್ನು ಕೇಳಿದ್ದಾರೆ. ನಂತರ ಕೆಲವೇ ನಿಮಿಷಗಳಲ್ಲಿ ಗೂಡ್ಸ್ ರೈಲು ಹಾದುಹೋಗಿದೆ. ಹೀಗೆ ಪ್ರಾಣಾಪಾಯದಿಂದ ಪಾರಾದ ಮಹಿಳೆಯು ಚೌಕ್ ನಿವಾಸಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Viral Video: ಕ್ಯಾಬ್ ಅಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ! ಓಲಾ ಕ್ಯಾಬ್ ಚಾಲಕನ ʼಆತ್ಮಹತ್ಯೆʼ ಸ್ಕ್ಯಾಮ್ ಬಗ್ಗೆ ಹಂಚಿಕೊಂಡ ಪ್ರಖ್ಯಾತ ಯೂಟ್ಯೂಬರ್

ಘಟನೆಯ ನಂತರ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಬತ್ನಾಹವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಗೂಡ್ಸ್ ರೈಲುಗಳು ಇಲ್ಲಿಗೆ ಬರುತ್ತವೆ ಮತ್ತು ಹೋಗುತ್ತವೆ. ಇದಾದ ಬಳಿಕವು ಯಾರ್ಡ್ ಮತ್ತು ನಿಲ್ದಾಣಕ್ಕೆ ನಾಕಾಬಂದಿ ಹಾಕಿಲ್ಲ. ಅಕ್ಕಪಕ್ಕದಲ್ಲಿ ವಾಸಿಸುವ ಜನರು ಫುಟ್‌ಓವರ್ ಸೇತುವೆಯ ಬದಲು ಹಳಿಗಳನ್ನು ದಾಟುವ ಮೂಲಕ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ನಿಲ್ದಾಣದಲ್ಲಿ ಫುಟ್‌ ಓವರ್‌ ಬ್ರಿಡ್ಜ್‌ ಇದ್ದರೂ ಜನರು ಕೆಳಗಿನ ಟ್ರ್ಯಾಕ್‌ ದಾಟಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ ಎಂದು ಠಾಣೆ ಅಧೀಕ್ಷಕ ರಾಹುಲ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Viral Post: ಮಧ್ಯರಾತ್ರಿ ತನ್ನನ್ನು ಸೇಫ್ ಆಗಿ ಮನೆಗೆ ತಲುಪುವಂತೆ ಮಾಡಿದ ಕ್ಯಾಬ್ ಚಾಲಕಿಯನ್ನು ಶ್ಲಾಘಿಸಿದ ಮಹಿಳೆ

ಘಟನೆಯ ವಿಡಿಯೋ ನೋಡಿದ ನೆಟ್ಟಿಗರು ಮಹಿಳೆ ವಿರುದ್ಧ ಕಿಡಿಕಾರಿದ್ದಾರೆ. ಕೆಲವರು ಮಹಿಳೆಯನ್ನು ಮಾನಸಿಕ ಅಸ್ವಸ್ಥೆ ಎನ್ನುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಹಿಳೆಯ ಮಗ ಮತ್ತು ಸೋದರಮಾವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:53 pm, Thu, 29 February 24