Viral Video: ಜಾಗತಿಕ ಮಟ್ಟದಲ್ಲಿ ಭಾರತ ಶೈನ್ ಆಗುತ್ತಿದೆ; ಹೆಮ್ಮೆಯ ವಿಚಾರ ಹಂಚಿಕೊಂಡ ಪುತ್ತೂರಿನ ಟ್ರಾವೆಲರ್ ಮಹಮ್ಮದ್ ಸಿನಾನ್ 

ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ ಭಾರತದಲ್ಲಿ ಹೊಸ ಹೊಸ ಆವಿಷ್ಕಾರ, ಉತ್ಪನ್ನಗಳ ತಯಾರಿಕೆ ಭರದಿಂದ ಸಾಗುತ್ತಿವೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ದೇಶದೆಲ್ಲೆಡೆ ಭಾರಿ  ಬೇಡಿಕೆಯೂ ಹೆಚ್ಚಾಗಿದೆ. ಭಾರತದಲ್ಲಿ ಮಾತ್ರವಲ್ಲ ಕಣ್ರೀ ವಿಶ್ವದೆಲ್ಲೆಡೆ  ನಮ್ಮ ದೇಶದ ಉತ್ಪನ್ನಗಳಿಗೆ ಬೇಡಿಕೆ ಇದೆ. ನಾನು ಭೇಟಿ ನೀಡಿದಂತಹ ದೇಶಗಳಲ್ಲಿ  ಚರಂಡಿ ಮುಚ್ಚಳದಿಂದ ಹಿಡಿದು ಔಷಧಿಗಳವರೆಗೆ ಮೇಡ್ ಇಂಡಿಯಾ ಉತ್ಪನ್ನಗಳು ಕಾಣಸಿಗುತ್ತಿವೆ ಎಂಬ ಹೆಮ್ಮೆಯ ವಿಚಾರವನ್ನು  ಇನ್ಸ್ಟಾಗ್ರಾಮ್ ಮೂಲಕ ಜನರಿಗೆ ದೇಶ ವಿದೇಶವನ್ನು ಪರಿಚಯ ಮಾಡುತ್ತಿರುವ ಪುತ್ತೂರಿನ ಯುವಕ ಮಹಮ್ಮದ್ ಸಿನಾನ್ ತಿಳಿಸಿಕೊಟ್ಟಿದ್ದಾರೆ. ಈ ಕುರಿತ  ವಿಶೇಷ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  

Viral Video: ಜಾಗತಿಕ ಮಟ್ಟದಲ್ಲಿ ಭಾರತ ಶೈನ್ ಆಗುತ್ತಿದೆ; ಹೆಮ್ಮೆಯ ವಿಚಾರ ಹಂಚಿಕೊಂಡ ಪುತ್ತೂರಿನ ಟ್ರಾವೆಲರ್ ಮಹಮ್ಮದ್ ಸಿನಾನ್ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 01, 2024 | 12:28 PM

ಪ್ರಧಾನಿ ನರೇಂದ್ರ ಮೋದಿಯವರು ಯುವಕರಿಗೆ ʼಕನಸನ್ನು ಕಾಣಿʼ ಎಂದು ಹೇಳಿದ ಮಾತಿನಂತೆ  ಕಾರಿನಲ್ಲಿಯೇ ವಿಶ್ವವನ್ನು  ಸುತ್ತವ ಕನಸನ್ನು ಕಂಡಂತಹ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕ ಮಹಮ್ಮದ್ ಸಿನಾನ್ ಇದಾಗಲೇ 12 ತಿಂಗಳಲ್ಲಿ 50,000 ಕಿ.ಮೀ ಕ್ರಮಿಸಿ 50 ದೇಶಗಳನ್ನು ಸುತ್ತಿದ್ದಾರೆ.  ಭಾರತೀಯ ಆಟೋಮೊಬೈಲ್ ಉತ್ಪನ್ನಗಳನ್ನು ಜಗತ್ತಿಗೆ ಪರಿಚಯಿಸುವ, ಭಾರತೀಯ ಪ್ರವಾಸೋದ್ಯಮವನ್ನು ವಿಶ್ವ ಮಟ್ಟದಲ್ಲಿ ಉತ್ತೇಜಿಸುವ  ಹಾಗೂ ಜನರೊಂದಿಗೆ ಬೆರೆತು ಮಾತನಾಡುವ ನಿಟ್ಟಿನಲ್ಲಿ ಮಹೇಂದ್ರಾ ಸ್ಕಾರ್ಪಿಯೋ ಕಾರಿನಲ್ಲಿಯೇ ವಿಶ್ವ  ಪರ್ಯಟನೆ ಮಾಡುತ್ತಿರುವ ಸಿನಾನ್, ತಾವು ಭೇಟಿ ನೀಡಿದಂತಹ ದೇಶಗಳಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಕಂಡು ಭಾರತವು ಜಾಗತೀಕ ಮಟ್ಟದಲ್ಲಿ ಅತೀ  ಎತ್ತರಕ್ಕೆ ಬೆಳೆಯುತ್ತಿದೆ ಎಂಬ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.  ಈ ಕುರಿತ ವಿಶೇಷ ವಿಡಿಯೋವೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ.

ಮಹಮ್ಮದ್ ಸಿನಾನ್ (@united.wander) ಈ ಒಂದು ವಿಶೇಷ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ  ಹಂಚಿಕೊಂಡಿದ್ದು, ಇಂಡಿಯಾ ಟೂ ಗ್ಲೋಬ್” ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

View this post on Instagram

A post shared by M sinan (@united.wander)

ವೈರಲ್ ಆಗಿರುವ ವಿಡಿಯೋದಲ್ಲಿ ಮಹಮ್ಮದ್ ಸಿನಾನ್ ತಮ್ಮ ಕಿರು ಪರಿಚಯವನ್ನು ಮಾಡಿ ಕೊಟ್ಟು, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯುವಕರೇ ಕನಸನ್ನು ಕಾಣಿ ಎಂದು ಹೇಳಿದ ಮಾತಿನಂತೆ ನಾನು ಕೂಡಾ ನಮ್ಮ ದೇಶದ ಪ್ರವಾಸೋದ್ಯಮವನ್ನು, ಆಟೋ ಮೊಬೈಲ್ ಉತ್ಪನ್ನಗಳ ಬಗ್ಗೆ ಪ್ರಮೋಟ್ ಮಾಡಲು ಮಹೇಂದ್ರಾ ಸ್ಕಾರ್ಪಿಯೋ ಕಾರಿನಲ್ಲಿಯೇ ವಿಶ್ವ ಪರ್ಯಟನೆ ಮಾಡುವ ಕನಸನ್ನು ಕಂಡು 12 ತಿಂಗಳಲ್ಲಿ 50,000 ಕಿ.ಮೀ ಕ್ರಮಿಸಿ 50 ದೇಶಗಳಿಗೆ ಭೇಟಿ ನೀಡಿದ್ದೇನೆ. ನಾನು ಭೇಟಿ ನೀಡಿದಂತಹ ಪ್ರತಿಯೊಂದು ದೇಶದಲ್ಲೂ ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಕಾಣಸಿಗುತ್ತಿವೆ. ಚರಂಡಿಯ ಮುಚ್ಚಳದಿಂದ ಹಿಡಿದು ಔಷಧಿಗಳವರೆಗೂ ಎಲ್ಲೆಲ್ಲೂ ಮೇಡ್ ಇನ್ ಇಂಡಿಯಾ ಉತ್ಪನ್ನಗಳೇ ಇವೆ. ಹೀಗೆ ಭಾರತವು ಇಡೀ ಜಗತ್ತಿನಲ್ಲಿ ಶೈನ್ ಆಗುತ್ತಿರುವುದನ್ನು ಕಂಡು ನನಗೆ ಹೆಮ್ಮೆಯಾಗುತ್ತಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಶ್ವಾಸಕೋಶದಲ್ಲಿ ಜಿರಳೆ ಪತ್ತೆ

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಐದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 66 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಸಹೋದರ ನಿಮ್ಮನ್ನು ಕಂಡು ನನಗೆ ಹೆಮ್ಮೆಯಾಗುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಮ್ಮ ಮಾತನ್ನು ಕೇಳಿ ಬಹಳ ಹೆಮ್ಮೆಯ ಭಾವನೆ ಮೂಡಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ  ಬಳಕೆದಾರರು ʼವಿಶ್ವ ಸುತ್ತುವ ನಿಮ್ಮ ಕಾರ್ಯ ಹೀಗೆ ಮುಂದುವರೆಯುತ್ತಾ ಹೋಗಲಿʼ ಎಂದು ಆಶಿರ್ವಾದಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?