ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಶ್ವಾಸಕೋಶದಲ್ಲಿ ಜಿರಳೆ ಪತ್ತೆ
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವೈದ್ಯರ ತಂಡವು ರೋಗಿಯ ಶ್ವಾಸಕೋಶದಿಂದ ಜಿರಳೆಯನ್ನು ತೆಗೆದುಹಾಕಲು ಎಂಟು ಗಂಟೆಗಳ ಕಾಲ ಹರಸಾಹಸವನ್ನು ಮಾಡಿದ್ದಾರೆ. ಅದಾಗಲೇ ಸತ್ತಿದ್ದ ಜಿರಳೆ ಒಂದು ಸಣ್ಣ ಭಾಗವು ದೇಹದ ಒಳಗೆ ಉಳಿಯದಂತೆ ತೆಗೆದು ಹಾಕಿದ್ದಾರೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಸೋಂಕಿಗೆ ಕಾರಣವಾಗಬಹುದು ಎಂದು ಎಂಟು ಗಂಟೆಗಳ ಕಾಲ ಹರಸಾಹಸ ಮಾಡಿ 4 ಸೆಂಟಿ ಮೀಟರ್ ಉದ್ದದ ಜಿರಳೆಯನ್ನು ಸಂಪೂರ್ಣವಾಗಿ ಹೊರತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.
ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಶ್ವಾಸಕೋಶದಲ್ಲಿ ಜಿರಳೆ ಪತ್ತೆಯಾಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. 55 ವರ್ಷದ ವ್ಯಕ್ತಿ ಗುರುವಾರ (ಫೆ.29) ತನ್ನ ಶ್ವಾಸಕೋಶದಲ್ಲಿ ಏನೋ ಸಿಲುಕಿಕೊಂಡಿದ್ದ ಕಾರಣ ಉಸಿರಾಡಲ ಸಾಧ್ಯವಾಗುತ್ತಿಲ್ಲ ಎಂದು ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಎಕ್ಸ್ ರೇ ವೇಳೆ ಶ್ವಾಸಕೋಶದಲ್ಲಿ ಏನೋ ವಸ್ತು ಇರುವುದು ತಿಳಿದುಬಂದಿದೆ. ಇದಾದ ಬಳಿಕ ಬ್ರಾಂಕೋಸ್ಕೋಪಿ ಪರೀಕ್ಷೆಯಿಂದ ಶ್ವಾಸಕೋಶದಲ್ಲಿ ಜಿರಳೆ ಇರುವುದು ಪತ್ತೆಯಾಗಿದೆ. ಸುಮಾರು 8ಗಂಟೆಗಳ ಸತತ ಪ್ರಯತ್ನದ ನಂತರ ವೈದ್ಯರು ರೋಗಿಯ ಶ್ವಾಸಕೋಶದಲ್ಲಿದ್ದ 4 ಸೆಂಟಿ ಮೀಟರ್ ಉದ್ದದ ಜಿರಳೆಯನ್ನು ಹೊರತೆಗೆದಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವೈದ್ಯರ ತಂಡವು ರೋಗಿಯ ಶ್ವಾಸಕೋಶದಿಂದ ಜಿರಳೆಯನ್ನು ತೆಗೆದುಹಾಕಲು ಎಂಟು ಗಂಟೆಗಳ ಕಾಲ ಹರಸಾಹಸವನ್ನು ಮಾಡಿದ್ದಾರೆ. ಅದಾಗಲೇ ಸತ್ತಿದ್ದ ಜಿರಳೆ ಒಂದು ಸಣ್ಣ ಭಾಗವು ದೇಹದ ಒಳಗೆ ಉಳಿಯದಂತೆ ತೆಗೆದು ಹಾಕಿದ್ದಾರೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಸೋಂಕಿಗೆ ಕಾರಣವಾಗಬಹುದು ಎಂದು ಎಂಟು ಗಂಟೆಗಳ ಕಾಲ ಹರಸಾಹಸ ಮಾಡಿ 4 ಸೆಂಟಿ ಮೀಟರ್ ಉದ್ದದ ಜಿರಳೆಯನ್ನು ಸಂಪೂರ್ಣವಾಗಿ ಹೊರತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.
ಇದನ್ನೂ ಓದಿ: ಮೊದ್ಲು ಮದುವೆ ಆಮೇಲೆ ಓದು, 13 ವರ್ಷಕ್ಕೆ ಮದುವೆಗೆ ರೆಡಿಯಾದ ಬಾಲಕ;ವಿಡಿಯೋ ವೈರಲ್
ರೋಗಿಯು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ.ಟಿಂಕು ಜೋಸೆಫ್ ತಿಳಿಸಿದ್ದಾರೆ. ಈ ಹಿಂದಿನಿಂದಲೂ ಈ ವ್ಯಕ್ತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಕುತ್ತಿಗೆಯ ಮೂಲಕ ಉಸಿರಾಟದ ಕೊಳವೆಯನ್ನು ಸೇರಿಸಲಾಗಿತ್ತು. ಆದ್ದರಿಂದ ಈ ಕೊಳವೆಯ ಮೂಲಕ ಜಿರಳೆ ಶ್ವಾಸಕೋಶವನ್ನು ಪ್ರವೇಶಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ