AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳುವಾಗಿದ್ದ ಐಫೋನ್ ತಂದುಕೊಟ್ಟವಳಿಗೆ ಆತ ಕೊಟ್ಟ ಗಿಫ್ಟ್ ಏನು ಗೊತ್ತಾ? ಪೊಲೀಸ್ ಠಾಣೆಗೆ ಹೋಗಿದೆ ಕೇಸ್

ಮಹಿಳೆಯೊಬ್ಬಳು ತನ್ನಗೆ ಬಿದ್ದು ಸಿಕ್ಕಿದ ಐಫೋನ್ ಅನ್ನು ಅದರ ಮಾಲೀಕನಿಗೆ ಹಿಂದಿರುಗಿಸಿದ ನಂತರ, ಆಕೆಗೆ ಕವರ್​​ ಒಳಗೆ 3,100 ಯುವಾನ್ ಅಂದರೆ ಇಲ್ಲಿನ 35ಸಾವಿರದಷ್ಟು ಹಣವನ್ನು ಗಿಫ್ಟ್ ಆಗಿ​​​ ನೀಡಿದ್ದಾನೆ. ಆದರೆ ಮನೆಗೆ ಬಂದು ನೋಡಿದರೆ ಯುವತಿಗೆ ಶಾಕ್​​ ಆಗಿದೆ.

ಕಳುವಾಗಿದ್ದ ಐಫೋನ್ ತಂದುಕೊಟ್ಟವಳಿಗೆ ಆತ ಕೊಟ್ಟ ಗಿಫ್ಟ್ ಏನು ಗೊತ್ತಾ? ಪೊಲೀಸ್ ಠಾಣೆಗೆ ಹೋಗಿದೆ ಕೇಸ್
Image Credit source: Pinterest
ಅಕ್ಷತಾ ವರ್ಕಾಡಿ
|

Updated on: Mar 01, 2024 | 2:17 PM

Share

ರಸ್ತೆ ಬದಿ ಬಿದ್ದು ಸಿಕ್ಕಿದ್ದ ಬೆಲೆಬಾಳುವ ಐಫೋನ್​ ಒಂದನ್ನು ಯುವತಿಯೊಬ್ಬಳು ಪ್ರಮಾಣಿಕವಾಗಿ ಅದರ ಮಾಲೀಕನಿಗೆ ನೀಡಿದ್ದಾಳೆ. ಆದರೆ ಕಳೆದುಹೋದ ಪೋನ್​​​ ಸಿಕ್ಕಿದ ಖುಷಿಗೆ ಆತ ಯುವತಿಗೆ ಧನ್ಯವಾದ ಹೇಳಿ ಕವರ್​​​ ಒಂದನ್ನು ಗಿಫ್ಟ್​​​ ಆಗಿ ನೀಡಿದ್ದಾನೆ. ಆದರೆ ಈ ಗಿಫ್​ಟ್​​​ ಆತನನ್ನು ಪೊಲೀಸ್​​​ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಅಷ್ಟಕ್ಕೂ ಆತ ಕೊಟ್ಟ ಗಿಫ್ಟ್ ಏನು ಗೊತ್ತಾ?

ಚೀನಾದ ಗುವಾಂಗ್‌ಡಾಂಗ್‌ನಲ್ಲಿ ಮಹಿಳೆಯೊಬ್ಬಳು ತನ್ನಗೆ ಬಿದ್ದು ಸಿಕ್ಕಿದ ಐಫೋನ್ ಅನ್ನು ಅದರ ಮಾಲೀಕನಿಗೆ ಹಿಂದಿರುಗಿಸಿದ ನಂತರ, ಆಕೆಗೆ ಕವರ್​​ ಒಳಗೆ 3,100 ಯುವಾನ್ ಅಂದರೆ ಇಲ್ಲಿನ 35ಸಾವಿರದಷ್ಟು ಹಣವನ್ನು ಗಿಫ್ಟ್ ಆಗಿ​​​ ನೀಡಿದ್ದಾನೆ. ತಾನು ಮಾಡಿದ ಉಪಕಾರಕ್ಕೆ ಆತ ದುಡ್ಡು ನೀಡಿರುವುದು ಯುವತಿಗೆ ಖುಷಿ ಕೊಟ್ಟಿದೆ. ಆದರೆ ಮನೆಗೆ ಬಂದು ನೋಡಿದರೆ ಯುವತಿಗೆ ಶಾಕ್​​ ಆಗಿದೆ. ಕವರ್​ ಒಳಗೆ ಅಸಲಿ ನೋಟುಗಳ ಬದಲಿಗೆ ಖೋಟಾ ನೋಟುಗಳನ್ನು ಇಟ್ಟಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ವಿರುದ್ದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾಳೆ.

ಇದನ್ನೂ ಓದಿ:  ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಶ್ವಾಸಕೋಶದಲ್ಲಿ ಜಿರಳೆ ಪತ್ತೆ

ವಂಚನೆಯಿಂದ ಅವಮಾನಿತಳಾದ ಮಹಿಳೆ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಫೋನ್‌ನ ಮಾಲೀಕ ಉದ್ದೇಶಪೂರ್ವಕ ಈ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹುನಾನ್ ಜಿಂಜೌ ಕಾನೂನು ಸಂಸ್ಥೆಯ ವಕೀಲರಾದ ಯಿ ಕ್ಸು ಪ್ರಕಾರ, ನಕಲಿ ಹಣವನ್ನು ಬಹುಮಾನವಾಗಿ ನೀಡುವುದನ್ನು ವಂಚನೆ ಎಂದು ಪರಿಗಣಿಸಿ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್