ಚಳಿಗಾಲದಲ್ಲಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದೀರಾ? ಇಲ್ಲಿದೆ ಸುಲಭ ಪರಿಹಾರ

ಚಳಿಗಾಲ ಅಥವಾ ಇನ್ನಿತರ ಸಂದರ್ಭಗಳಲ್ಲಿ ನಿಮ್ಮ ಆರೋಗ್ಯ ಕೆಟ್ಟು ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ಒಂದು ತುಂಡು ಪೀಸ್ ಬೆಲ್ಲವನ್ನು ಸೇವನೆ ಮಾಡಿ ಇದು ನಿಮ್ಮ ಆರೋಗ್ಯಕ್ಕೆ ಮತ್ತು ಶ್ವಾಸಕೋಶಗಳಿಗೆ ತುಂಬಾ ಒಳ್ಳೆಯದು ಅಲ್ಲದೆ ಇವು ನಿಮ್ಮನ್ನು ರಕ್ಷಿಸುತ್ತದೆ. ಇದರ ಪ್ರಯೋಜನಗಳ ಬಗ್ಗೆ ಹೆಲ್ತ್ ಶಾಟ್ಸ್ ಮುಂಬೈನ ರೆಜುವಾ ಎನರ್ಜಿ ಸೆಂಟರ್ನ ಪೌಷ್ಟಿಕತಜ್ಞ ಡಾ. ನಿರುಪಮಾ ರಾವ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಚಳಿಗಾಲದಲ್ಲಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದೀರಾ? ಇಲ್ಲಿದೆ ಸುಲಭ ಪರಿಹಾರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 11, 2024 | 11:23 AM

ಚಳಿಗಾಲದಲ್ಲಿ ಅಲರ್ಜಿ, ಶೀತ ಮತ್ತು ಜ್ವರ ಬರುವುದು ಸಾಮಾನ್ಯ. ಕೆಲವರಿಗೆ ಈ ಸಮಯದಲ್ಲಿ ಉಸಿರಾಟದ ತೊಂದರೆಯು ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ನಮ್ಮ ಆರೋಗ್ಯವನ್ನು ಆದಷ್ಟು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಅದು ಅಲ್ಲದೆ ಪರಿಸರ ಮಾಲಿನ್ಯದ ಅಡ್ಡಪರಿಣಾಮಗಳು ಕೂಡ ನಿಮ್ಮನ್ನು ಭಾದಿಸಬಹುದು. ಆದರೆ ಇಂತಹ ಎಲ್ಲಾ ಸಮಸ್ಯೆಗಳಿಗೂ ಮನೆಯಲ್ಲಿಯೇ ಪರಿಹಾರವಿದೆ. ಇದು ಹಿಂದಿನ ಕಾಲದಿಂದಲೂ ನಮ್ಮ ಪೂರ್ವಜರು ಮಾಡುವುದಂತಹ ಪದ್ಧತಿ. ಇದು ಕೆಲವರ ಮನೆಗಳಲ್ಲಿ ಪಾಲನೆಯಾಗುತ್ತಿದೆ. ಇನ್ನು ಕೆಲವರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಚಳಿಗಾಲ ಅಥವಾ ಇನ್ನಿತರ ಸಂದರ್ಭಗಳಲ್ಲಿ ನಿಮ್ಮ ಆರೋಗ್ಯ ಕೆಟ್ಟು ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ಒಂದು ತುಂಡು ಅಥವಾ ಒಂದು ಪೀಸ್ ಬೆಲ್ಲವನ್ನು ಸೇವನೆ ಮಾಡಿ ಇದು ನಿಮ್ಮ ಆರೋಗ್ಯಕ್ಕೆ ಮತ್ತು ಶ್ವಾಸಕೋಶಗಳಿಗೆ ತುಂಬಾ ಒಳ್ಳೆಯದು ಅಲ್ಲದೆ ಇವು ನಿಮ್ಮನ್ನು ರಕ್ಷಿಸುತ್ತದೆ. ಇದರ ಪ್ರಯೋಜನಗಳ ಬಗ್ಗೆ ಹೆಲ್ತ್ ಶಾಟ್ಸ್ ಮುಂಬೈನ ರೆಜುವಾ ಎನರ್ಜಿ ಸೆಂಟರ್ನ ಪೌಷ್ಟಿಕತಜ್ಞ ಡಾ. ನಿರುಪಮಾ ರಾವ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಆರೋಗ್ಯಕರ ಶ್ವಾಸಕೋಶಕ್ಕೆ ಬೆಲ್ಲದ ಪ್ರಯೋಜನಗಳೇನು ಗೊತ್ತಾ?

ಕಬ್ಬಿನ ರಸ ಅಥವಾ ತಾಳೆ ರಸದಿಂದ ಪಡೆದ ಸಾಂಪ್ರದಾಯಿಕ ಸಿಹಿಕಾರಕವಾದ ಬೆಲ್ಲವು ಶತಮಾನಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನ ಆಹಾರವಾಗಿದೆ. ಅದರ ರುಚಿಯ ಹೊರತಾಗಿ, ಬೆಲ್ಲವು ಕೆಲವು ಸಂಭಾವ್ಯ ಆರೋಗ್ಯ ಪ್ರಯೋಜನಗಳಿಂದ ಹೆಸರುವಾಸಿಯಾಗಿದೆ. ಮಾಲಿನ್ಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ವಿಶೇಷವಾಗಿ ಉಸಿರಾಟದ ತೊಂದರೆಗೆ ಸಂಬಂಧಿಸಿದಂತೆ ಬೆಲ್ಲವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

1. ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

“ಬೆಲ್ಲವು ಆರೋಗ್ಯಕರ ಉಸಿರಾಟಕ್ಕೆ ಒಳ್ಳೆಯದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಬೆಲ್ಲದಲ್ಲಿ ಆಂಟಿಆಕ್ಸಿಡೆಂಟ್ ಗಳಿದ್ದು, ಇದು ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಬರುವ ಉಸಿರಾಟದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ಅತ್ಯಗತ್ಯ ಹಾಗಾಗಿ ಬೆಲ್ಲ ಸೇವನೆ ಮಾಡಬಹುದು ” ಎಂದು ಡಾ. ರಾವ್ ಹೇಳುತ್ತಾರೆ.

2. ಕೆಮ್ಮು ಮತ್ತು ಶೀತವನ್ನು ಶಮನಗೊಳಿಸುತ್ತದೆ

ಕೆಮ್ಮು ಮತ್ತು ಶೀತಕ್ಕೆ ಸಾಂಪ್ರದಾಯಿಕ ಪರಿಹಾರಗಳಲ್ಲಿ ಬೆಲ್ಲವು ಸಾಮಾನ್ಯ ಘಟಕಾಂಶವಾಗಿದೆ. ಇದು ನೈಸರ್ಗಿಕ ಮದ್ದಾಗಿದ್ದು ಗಂಟಲು ನೋವನ್ನು ಶಮನಗೊಳಿಸಲು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ. ಬೆಲ್ಲವನ್ನು ಬೆಚ್ಚಗಿನ ನೀರು ಅಥವಾ ಗಿಡಮೂಲಿಕೆ ಚಹಾದೊಂದಿಗೆ ಬೆರೆಸುವುದರಿಂದ ಶೀತ ರೋಗಲಕ್ಷಣಗಳಿಂದ ಪರಿಹಾರ ಸಿಗುತ್ತದೆ.

3. ಕಬ್ಬಿಣದ ಅಂಶವಿದೆ

“ರಕ್ತಹೀನತೆಯು ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ ಕೊರತೆಯಿಂದ ಉಂಟಾಗುವ ಸ್ಥಿತಿಯಾಗಿದೆ. ಇದು ದಣಿವಿಗೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರ ಎಂಬಂತೆ, ಬೆಲ್ಲವು ಕಬ್ಬಿಣದ ಉತ್ತಮ ಮೂಲವಾಗಿದೆ. ಇದು ರಕ್ತದಲ್ಲಿ ಆಮ್ಲಜನಕವನ್ನು ಸಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ಖನಿಜವಾಗಿದೆ ” ಎಂದು ತಜ್ಞರು ಹೇಳುತ್ತಾರೆ. ರಕ್ತಹೀನತೆಯನ್ನು ತಡೆಗಟ್ಟುವ ಮೂಲಕ, ಬೆಲ್ಲವು ಒಟ್ಟಾರೆ ಶ್ವಾಸಕೋಶದ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ದೇಹದಲ್ಲಿ ಆರೋಗ್ಯಕರ ಆಮ್ಲಜನಕದ ಮಟ್ಟವನ್ನು ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.

4. ಬೆಲ್ಲದಲ್ಲಿ ಅಲರ್ಜಿ ವಿರೋಧಿ ಗುಣಗಳಿವೆ

ಆಸ್ತಮಾ ಮತ್ತು ಉಸಿರಾಟದ ಸಮಸ್ಯೆ ನಿಮಗೆ ಅಧಿಕ ತೊಂದರೆ ನೀಡಬಹುದು. ಆದರೆ ಬೆಲ್ಲವನ್ನು ಸೇವಿಸುವ ಮೂಲಕ ಈ ಅಲರ್ಜಿಗಳಿಂದ ಪರಿಹಾರವನ್ನು ಕಂಡು ಕೊಳ್ಳಬಹುದು. ಇದರ ಅಲರ್ಜಿ ವಿರೋಧಿ ಗುಣಲಕ್ಷಣಗಳು ನಿಮ್ಮ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ಅಲರ್ಜಿಯ ಪ್ರತಿಕ್ರಿಯೆಗಳ ಆವರ್ತನ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5. ನಿರ್ವಿಷೀಕರಣ

ಬೆಲ್ಲವು ದೇಹದಿಂದ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಈ ಶುದ್ಧೀಕರಣ ಪ್ರಕ್ರಿಯೆಯು ಆರೋಗ್ಯಕರ ಶ್ವಾಸಕೋಶಕ್ಕೆ ಕಾರಣವಾಗಬಹುದು.

ಬೆಲ್ಲವು ಉಸಿರಾಟದ ಸಮಸ್ಯೆಯಿಂದ ಮುಕ್ತಿ ಹೊಂದಲು ವಿವಿಧ ಸಂಭಾವ್ಯ ಪ್ರಯೋಜನಗಳನ್ನು ನೀಡುತ್ತದೆಯಾದರೂ, ಅದನ್ನು ಮಿತವಾಗಿ ಸೇವಿಸುವುದು ಮುಖ್ಯ. ಬೆಲ್ಲವು ಸಕ್ಕರೆ ಮತ್ತು ಕ್ಯಾಲೊರಿಗಳ ಮೂಲವಾಗಿದೆ, ಆದ್ದರಿಂದ ಅತಿಯಾದ ಸೇವನೆಯು ಒಟ್ಟಾರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು.

ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ