AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ಬೆಚ್ಚಗೆ, ಆರೋಗ್ಯವಾಗಿರಲು ಏನು ಮಾಡಬೇಕು?

ಚಳಿಗಾಲದ ಕಾಯಿಲೆಗಳಲ್ಲಿ ಉಸಿರಾಟದ ಸೋಂಕುಗಳು, ಜ್ವರ, ಕೆಮ್ಮು, ಶೀತ, ಗಂಟಲು ನೋವು, ಜ್ವರ ಸಾಮಾನ್ಯವಾಗಿವೆ. ಈಗಂತೂ ಕೊವಿಡ್ ಮತ್ತೆ ಎಲ್ಲೆಡೆ ಹರಡುತ್ತಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಿದೆ.

ಚಳಿಗಾಲದಲ್ಲಿ ಬೆಚ್ಚಗೆ, ಆರೋಗ್ಯವಾಗಿರಲು ಏನು ಮಾಡಬೇಕು?
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Jan 10, 2024 | 6:50 PM

Share

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲವು ಉತ್ತುಂಗಕ್ಕೇರಿದ್ದು, ಸೋಂಕುಗಳ ಸಂಖ್ಯೆ ಮತ್ತು ಹೆಚ್ಚಿನ ಪ್ರಮಾಣದ ಅನಾರೋಗ್ಯದ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಉತ್ತರ ಭಾರತದೆಲ್ಲೆಡೆ ಚಳಿಯಿಂದ ಅನಾರೋಗ್ಯಕ್ಕೀಡಾಗುವವರ ಸಂಖ್ಯೆ ಹೆಚ್ಚಾಗಿದೆ. ಚಳಿಗಾಲದ ಕಾಯಿಲೆಗಳಲ್ಲಿ ಉಸಿರಾಟದ ಸೋಂಕುಗಳು, ಜ್ವರ, ಕೆಮ್ಮು, ಶೀತ, ಗಂಟಲು ನೋವು, ಜ್ವರ ಸಾಮಾನ್ಯವಾಗಿವೆ. ಈಗಂತೂ ಕೊವಿಡ್ ಮತ್ತೆ ಎಲ್ಲೆಡೆ ಹರಡುತ್ತಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಿದೆ. ಇದರ ಜೊತೆಗೆ ಡೆಂಗ್ಯೂ ಪ್ರಕರಣಗಳು ಕೂಡ ಆತಂಕ ಮೂಡಿಸಿವೆ.

ಚಳಿಗಾಲದಲ್ಲಿ ಹರಡುವ ಸೋಂಕುಗಳು ಸಾಮಾನ್ಯವಾಗಿದ್ದರೂ, ತೀವ್ರವಾದ ಶೀತ ಹವಾಮಾನಕ್ಕೆ ಒಡ್ಡಿಕೊಳ್ಳುವುದರಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಹಲವಾರು ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡವನ್ನು ಇನ್ನಷ್ಟು ಹದಗೆಡಿಸಬಹುದು.

ಇದನ್ನೂ ಓದಿ: Winter Tips: ಚಳಿಗಾಲದಲ್ಲಿ ಬೆಳಗ್ಗೆ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು?

ಕಳೆದ ಕೆಲವು ದಿನಗಳಿಂದ ಪಂಜಾಬ್ ಮತ್ತು ಹರಿಯಾಣ ಎರಡೂ ರಾಜ್ಯಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ ದೆಹಲಿಯ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಶೀತ ವಾತಾವರಣ ಹೆಚ್ಚಾಗಿದೆ. ಕರ್ನಾಟಕದಲ್ಲಿ ಮಳೆಯೂ ಉಂಟಾಗಿ, ವಾತಾವರಣ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಚ್ಚಗೆ ಮತ್ತು ಆರೋಗ್ಯವಾಗಿರಲು ನಾವು ಪಾಲಿಸಬೇಕಾದ 5 ಸಲಹೆಗಳು ಇಲ್ಲಿವೆ.

ಬೆಚ್ಚಗಿನ ಪಾನೀಯಗಳನ್ನು ಕುಡಿಯಿರಿ:

ಚಳಿಗಾಲದಲ್ಲಿ ಆದಷ್ಟೂ ಪ್ರಿಡ್ಜ್​ನಲ್ಲಿರುವ, ಅತಿಯಾದ ತಂಪಾದ ಆಹಾರ ಸೇವಿಸಬೇಡಿ. ಬಿಸಿ ಸೂಪ್‌ಗಳು, ಬಿಸಿ ಚಹಾ, ಅರಿಶಿನ ಹಾಕಿದ ನೀರು ಅಥವಾ ಹಾಲು ಮತ್ತು ಬಿಸಿ ನೀರಿನ ಪಾನೀಯಗಳನ್ನು ಸೇವಿಸುವುದು ಉತ್ತಮ. ಇದು ನಿಮ್ಮನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.

ವಾಕಿಂಗ್ ಹೋಗುವಾಗ ಎಚ್ಚರ ವಹಿಸಿ:

ವಯಸ್ಸಾದವರು ಮುಂಜಾನೆ ಮತ್ತು ಸಂಜೆ ತಡವಾಗಿ ವಾಕಿಂಗ್ ಹೋಗುವುದನ್ನು ಅವಾಯ್ಡ್​ ಮಾಡಿ. ಅದರ ಬದಲಿಗೆ ಬೆಳಗ್ಗೆ ಸೂರ್ಯೋದಯವಾದ ನಂತರ ಅಥವಾ ಸೂರ್ಯ ಮುಳುಗುವ ಮೊದಲು ನಡೆಯಲು ಹೋಗಬಹುದು. ವಿಶೇಷವಾಗಿ ಚಳಿಗಾಲದಲ್ಲಿ ಸೂರ್ಯನ ಬೆಳಕಿಗೆ ಸರಿಯಾಗಿ ಮೈಯನ್ನು ಒಡ್ಡಿಕೊಳ್ಳುವುದು ಬಹಳ ಮುಖ್ಯ. ಇದು ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ, ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಬೆಚ್ಚಗಿನ ಉಡುಪು ಧರಿಸಿ:

ರಾತ್ರಿಯಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಮರೆಯಬೇಡಿ. ವಯಸ್ಸಾದವರು ಮತ್ತು ಮಕ್ಕಳು ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ಆದರೆ, ಅತಿಯಾದ ದಪ್ಪನಾದ ಬಟ್ಟೆ ಉಸಿರುಗಟ್ಟುವಿಕೆ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಹೀಗಾಗಿ, ಹಗುರವಾದ ಆದರೆ ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ.

ಇದನ್ನೂ ಓದಿ: ಚಳಿಗಾಲದಲ್ಲಿ ದೇಹವನ್ನು ಹೈಡ್ರೇಟ್ ಮಾಡುವುದು ಹೇಗೆ?

ದೈಹಿಕ ಚಟುವಟಿಕೆ ಮಾಡಿ:

ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಚಳಿಗಾಲದಲ್ಲಿ ಬಿಸಿ ವಾತಾವರಣಕ್ಕೆ ಹೋಲಿಸಿದರೆ ವ್ಯಕ್ತಿಗಳು ದೈಹಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತಾರೆ ಅಥವಾ ನಿಲ್ಲಿಸುತ್ತಾರೆ. ಇದು ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಬೆಚ್ಚಗಾಗಲು ಕನಿಷ್ಠ 30-40 ನಿಮಿಷಗಳ ಚುರುಕಾದ ದೈಹಿಕ ಚಟುವಟಿಕೆ ಅಗತ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ