Winter Tips: ಚಳಿಗಾಲದಲ್ಲಿ ಬೆಳಗ್ಗೆ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು?

ಬೆಳಗಿನ ನಡಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಹೃದಯ-ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ, ಚಳಿಗಾಲದಲ್ಲಿ ವಾಕ್ ಮಾಡುವಾಗ ಈ ಎಚ್ಚರಗಳನ್ನು ವಹಿಸುವುದು ಅಗತ್ಯ.

Winter Tips: ಚಳಿಗಾಲದಲ್ಲಿ ಬೆಳಗ್ಗೆ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು?
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on:Dec 26, 2023 | 2:14 PM

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಿಮ್ಮ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅನೇಕ ಜನರು ಪ್ರತಿದಿನ ವಾಕಿಂಗ್ ಮಾಡುತ್ತಾರೆ. ಇದರಿಂದ ದೇಹದ ಕೊಬ್ಬು ಕರಗುವುದು ಮಾತ್ರವಲ್ಲದೆ ಎಲ್ಲ ಅಂಗಗಳಿಗೂ ವ್ಯಾಯಾಮ ಸಿಗುತ್ತದೆ. ಆದರೆ ಬಹುತೇಕ ಜನರು ಚಳಿಗಾಲ ಬಂದ ತಕ್ಷಣ ವಾಕಿಂಗ್ ಅನ್ನು ನಿಲ್ಲಿಸುತ್ತಾರೆ. ಕೆಲವರಿಗೆ ಬೆಳಗ್ಗೆ ಎದ್ದೇಳಲು ಸೋಮಾರಿತನವಾದರೆ, ಇನ್ನು ಕೆಲವರಿಗೆ ಬೆಳಗ್ಗೆ ಏಳಲು ಆಗದಂತಹ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.

ಬೆಳಗಿನ ನಡಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಹೃದಯ-ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ, ಚಳಿಗಾಲದ ಚಳಿಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಕೂಡ ಹೆಚ್ಚಿಸುವುದರಿಂದ ವಯಸ್ಸಾದವರು, ಮಕ್ಕಳು, ರೋಗಿಗಳು ಬೆಳಗಿನ ಚಳಿಯಲ್ಲಿ ವಾಕಿಂಗ್ ಮಾಡುವಾಗ ಎಚ್ಚರ ವಹಿಸುವುದು ಅಗತ್ಯ.

ಇದನ್ನೂ ಓದಿ: ದೇಹದ ಕೊಬ್ಬು ಕರಗಲು ವಾಕಿಂಗ್ ಒಳ್ಳೆಯದಾ? ಯೋಗ ಉತ್ತಮವಾ?

ಅಧ್ಯಯನದ ಪ್ರಕಾರ, ಚಳಿಗಾಲದ ಶೀತ ತಿಂಗಳು ACSನ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ವಯಸ್ಸಾದ ರೋಗಿಗಳಲ್ಲಿ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಚಳಿಗಾಲದಲ್ಲಿ ಹೆಚ್ಚು ಹೃದಯ ವೈಫಲ್ಯ ಮತ್ತು ಎಸಿಎಸ್‌ನಿಂದ ಸಾವುಗಳು ಸಂಭವಿಸುತ್ತವೆ. ಆದ್ದರಿಂದ, ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ಹೃದಯಾಘಾತದ ಸಾಧ್ಯತೆಗಳು ಕಡಿಮೆಯಾಗುತ್ತವೆ. ಚಳಿಗಾಲದಲ್ಲಿ ನೀವು ಯಾವಾಗ ಮತ್ತು ಎಷ್ಟು ಸಮಯದವರೆಗೆ ವಾಕ್ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ವಾಕಿಂಗ್ ಹೋಗುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:

– ಸರಿಯಾದ ಬಟ್ಟೆಗಳನ್ನು ಧರಿಸಿಕೊಂಡು, ಮೈಯನ್ನು ಬೆಚ್ಚಗಾಗಿಸಿಕೊಂಡು ಮನೆಯ ಹೊರಗೆ ವಾಕಿಂಗ್ ಹೋಗಿ.

– ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ನಡೆಯಲು ಮನೆಯಿಂದ ಹೊರಗೆ ಹೋಗಬೇಕು.

– ಬೆಚ್ಚಗಿನ ಬಟ್ಟೆಗಳನ್ನು ಧರಿಸಿಕೊಂಡು ಹೊರಗೆ ಹೋಗಿ.

– ಆರಂಭದಲ್ಲಿ ವೇಗವಾಗಿ ನಡೆಯಬೇಡಿ.

ಇದನ್ನೂ ಓದಿ: ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಇಲ್ಲಿದೆ ಕಾರಣ

– ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳು, ಅಸ್ತಮಾ ಅಥವಾ ನ್ಯುಮೋನಿಯಾ ಇದ್ದರೆ ಬೆಳಿಗ್ಗೆ ವಾಕಿಂಗ್ ಮಾಡಲು ಹೋಗಬೇಡಿ.

– ವಯಸ್ಸಾದವರು ಚಳಿಗಾಲದಲ್ಲಿ ವಾಕಿಂಗ್ ಮಾಡುವುದನ್ನು ಅವಾಯ್ಡ್ ಮಾಡಿ.

– ನಿಧಾನವಾಗಿ ನಡೆಯಲು ಪ್ರಾರಂಭಿಸಿ ಮತ್ತು ನಂತರ ವೇಗವನ್ನು ಹೆಚ್ಚಿಸಿ.

– ತಂಪಾದ ವಾತಾವರಣದಲ್ಲಿ ವಾಕಿಂಗ್ ಬದಲು ನೀವು ಬೆಳಿಗ್ಗೆ 8.30ರಿಂದ 9.30ರವರೆಗೆ ಮತ್ತು ಸಂಜೆ 5ರಿಂದ 6ರವರೆಗೆ ವಾಕ್ ಮಾಡಲು ಹೋಗಬಹುದು.

ತಜ್ಞರ ಪ್ರಕಾರ ಪ್ರತಿದಿನ 10,000 ಹೆಜ್ಜೆ ನಡೆಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಚಳಿಗಾಲದಲ್ಲಿ ವಾರದಲ್ಲಿ ಕನಿಷ್ಠ 5 ದಿನಗಳು 30 ನಿಮಿಷದವರೆಗೆ ನಡೆಯಿರಿ. ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Tue, 26 December 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ