Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಮಗ್ಗುಲಲ್ಲಿ ಮಲಗುವುದರಿಂದ ಕೆಟ್ಟ ಕನಸು ಬೀಳುತ್ತಾ?

'ಸ್ಲೀಪ್ ಆ್ಯಂಡ್ ಹಿಪ್ನಾಸಿಸ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೀವು ಮಲಗುವ ಭಂಗಿಯು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. 'ತಪ್ಪು' ಭಂಗಿಯಲ್ಲಿ ಮಲಗುವುದರಿಂದ ರಾತ್ರಿಯಲ್ಲಿ ನೀವು ದುಃಸ್ವಪ್ನಗಳನ್ನು ಕಾಣಬಹುದು.

ಒಂದೇ ಮಗ್ಗುಲಲ್ಲಿ ಮಲಗುವುದರಿಂದ ಕೆಟ್ಟ ಕನಸು ಬೀಳುತ್ತಾ?
ನಿದ್ರೆ
Follow us
ಸುಷ್ಮಾ ಚಕ್ರೆ
|

Updated on:Jan 10, 2024 | 6:29 PM

ನಿದ್ರೆ ಮಾಡುವಾಗ ಕನಸು ಕಾಣದವರೇ ಇಲ್ಲ. ಆದರೆ, ಕೆಲವೊಂದು ಕನಸುಗಳು ನಮಗೆ ಖುಷಿ ತಂದರೆ ಇನ್ನು ಕೆಲವು ಭಯ ಬೀಳಿಸುತ್ತವೆ. ನಾವು ಮಲಗುವ ರೀತಿಗೂ ನಮಗೆ ಬೀಳುವ ಕನಸಿಗೂ ಸಂಬಂಧವಿದೆಯೇ? ಕನಸುಗಳು ಯಾಕೆ ಬೀಳುತ್ತವೆ? ಕನಸಿನ ಅರ್ಥವೇನು? ಎಂಬ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ನಮ್ಮ ಎಡಭಾಗದಲ್ಲಿ ಮಲಗುವುದರಿಂದ ದುಃಸ್ವಪ್ನಗಳು ಹೆಚ್ಚಾಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಏಕೆಂದರೆ ಎಡಭಾಗದ ನಿದ್ರೆ ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ ಎಂದು ಕನಸಿನ ಡಿಕೋಡರ್ ಥೆರೆಸಾ ಚೆಯುಂಗ್ ಹೇಳಿದ್ದಾರೆ.

‘ಸ್ಲೀಪ್ ಆ್ಯಂಡ್ ಹಿಪ್ನಾಸಿಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೀವು ಮಲಗುವ ಭಂಗಿಯು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ‘ತಪ್ಪು’ ಭಂಗಿಯಲ್ಲಿ ಮಲಗುವುದರಿಂದ ರಾತ್ರಿಯಲ್ಲಿ ನೀವು ದುಃಸ್ವಪ್ನಗಳನ್ನು ಕಾಣಬಹುದು. ಸ್ಲೀಪ್ ಆ್ಯಂಡ್ ಹಿಪ್ನಾಸಿಸ್ ಜರ್ನಲ್ ತಮ್ಮ ಎಡ ಮಗ್ಗುಲಿನಲ್ಲಿ ಮಲಗುವ ಜನರು ಹೆಚ್ಚಾಗಿ ಕೆಟ್ಟ ಕನಸುಗಳನ್ನು ಕಾಣುತ್ತಾರೆ ಎಂದು ಕಂಡುಹಿಡಿದಿದೆ.

ಇದನ್ನೂ ಓದಿ: ರಾತ್ರಿ ಪದೇ ಪದೆ ನಿದ್ರೆಯಿಂದ ಎಚ್ಚರಗೊಳ್ಳಲು ಕಾರಣವೇನು?

ತಮ್ಮ ಬಲಭಾಗದಲ್ಲಿ ಮಲಗುವವರಲ್ಲಿ ಕೇವಲ ಶೇ. 15ರಷ್ಟು ಜನರು ರಾತ್ರಿಯಲ್ಲಿ ಕೆಟ್ಟ ಕನಸುಗಳನ್ನು ಕಾಣುತ್ತಾರೆ. ಎಡಭಾಗದಲ್ಲಿ ಮಲಗುವವರಲ್ಲಿ ಶೇ. 41ರಷ್ಟು ಜನರು ದುಃಸ್ವಪ್ನಗಳನ್ನು ಕಾಣುತ್ತಾರೆ. ಒತ್ತಡ ಇದ್ದಾಗಲೆಲ್ಲಾ ನಿದ್ರೆಯ ಗುಣಮಟ್ಟ ಕಡಿಮೆಯಾಗಿರುತ್ತದೆ. ಇದರಿಂದ ದುಃಸ್ವಪ್ನಗಳು ಬೀಳುವುದು ಖಚಿತ.

30 ಮತ್ತು 40 ವರ್ಷದಲ್ಲಿ ನಿದ್ರೆಯ ಅಡಚಣೆಗಳು ಸಾಮಾನ್ಯ. ಇದು ಜೀವನದಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ತಿಳಿಸಿದೆ. ಮೇಲ್ಮುಖವಾಗಿ ಮಲಗುವವರಿಗೆ ಹೋಲಿಸಿದರೆ ಬೆನ್ನು ಮೇಲೆ ಮಾಡಿ ಮಲಗುವವರು ಕೂಡ ದುಃಸ್ವಪ್ನಗಳಿಂದ ಬಳಲುತ್ತಿದ್ದಾರೆ ಎಂದು ಚೆಯುಂಗ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಉತ್ತಮ ನಿದ್ರೆಗೆ ರಾತ್ರಿ ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು?

ನಿಮಗೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ನಿಮ್ಮ ಮಲಗುವ ಸ್ಥಾನವನ್ನು ಬದಲಾಯಿಸುವುದು ಉತ್ತಮ. ಇದು ಕೂಡ ನಿಮ್ಮ ಕನಸುಗಳ ಮೇಲೆ ಪ್ರಭಾವ ಬೀರಬಹುದು. ಆರೋಗ್ಯಕರ ಉಸಿರಾಟಕ್ಕೆ ಸೂಕ್ತವಾದ ಸ್ಥಾನದಲ್ಲಿ ಮಲಗುವುದು ಉತ್ತಮ ಮಾರ್ಗವಾಗಿದೆ. ಹೀಗಾಗಿ, ಆದಷ್ಟೂ ಬಲ ಮಗ್ಗುಲಿನಲ್ಲಿ ಮಲಗುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Wed, 10 January 24

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್