ನಿಮ್ಮವರು ಸತ್ತಂತೆ ಕನಸು ಯಾಕೆ ಬೀಳುತ್ತದೆ?; ಈ ಕನಸು ನಿಜವಾಗುತ್ತಾ?

ಯಾರಾದರೂ ಸತ್ತಂತೆ ಕನಸು ಬಿದ್ದರೆ ಅವರ ಆಯಸ್ಸು ಜಾಸ್ತಿಯಾಗುತ್ತದೆ ಎಂದು ನಮ್ಮ ಅಜ್ಜಿ-ಮುತ್ತಜ್ಜಿಯರೆಲ್ಲ ಹೇಳುತ್ತಿದ್ದರು. ಆದರೆ, ವೈಜ್ಞಾನಿಕವಾಗಿ ಈ ರೀತಿಯ ಕನಸುಗಳಿಗೆ ಏನು ಅರ್ಥವಿದೆ? ಕನಸುಗಳಿಗೆ ನಿಜವಾಗಿಯೂ ಪ್ರಾಮುಖ್ಯತೆ ಕೊಡಬೇಕಾ? ಅದು ನಮ್ಮ ಮನಸಿನ ಗೌಪ್ಯ ಭಾವನೆಯಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

ನಿಮ್ಮವರು ಸತ್ತಂತೆ ಕನಸು ಯಾಕೆ ಬೀಳುತ್ತದೆ?; ಈ ಕನಸು ನಿಜವಾಗುತ್ತಾ?
Follow us
ಸುಷ್ಮಾ ಚಕ್ರೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 01, 2024 | 8:58 PM

ಕನಸುಗಳು ಯಾರಿಗೆ ಬೀಳುವುದಿಲ್ಲ? ಕೆಲವರು ರಾತ್ರಿ ವೇಳೆ ಕನಸು ಕಂಡರೆ ಇನ್ನು ಕೆಲವರು ಹಗಲುಗನಸು ಕಾಣುತ್ತಾರೆ. ರಾತ್ರಿ ಮಲಗಿದಾಗ ನಮಗೆ ಚಿತ್ರ-ವಿಚಿತ್ರವಾದ ಕನಸುಗಳು ಬೀಳುತ್ತವೆ. ಕೆಲವೊಮ್ಮೆ ಒಂದೇ ರೀತಿಯ ಕನಸುಗಳು ಮರುಕಳಿಸುತ್ತವೆ. ನಮಗೆ ಬೀಳುವ ಎಲ್ಲ ಕನಸಿಗೂ ಒಂದು ಅರ್ಥವಿರುತ್ತದೆ ಎಂದು ಹಿಂದಿನ ಕಾಲದವರು ಹೇಳುತ್ತಿದ್ದರು. ನಿದ್ರೆಯಲ್ಲಿದ್ದಾಗ ನಮಗೆ ತುಂಬ ಹತ್ತಿರವಾದವರು ಸತ್ತಂತೆ ಕನಸು ಬಿದ್ದರೆ ಒಂದು ಕ್ಷಣ ಗಾಬರಿಯಾಗಿ ದಢಕ್ಕೆಂದು ಎದ್ದು ಕುಳಿತುಬಿಡುತ್ತೇವೆ. ಈ ರೀತಿ ಯಾರಾದರೂ ಸತ್ತಂತೆ ಕನಸು ಬಿದ್ದರೆ ಅವರ ಆಯಸ್ಸು ಜಾಸ್ತಿಯಾಗುತ್ತದೆ ಎಂದು ನಮ್ಮ ಅಜ್ಜಿ-ಮುತ್ತಜ್ಜಿಯರೆಲ್ಲ ಹೇಳುತ್ತಿದ್ದರು. ಆದರೆ, ವೈಜ್ಞಾನಿಕವಾಗಿ ಈ ರೀತಿಯ ಕನಸುಗಳಿಗೆ ಏನು ಅರ್ಥವಿದೆ? ಕನಸುಗಳಿಗೆ ನಿಜವಾಗಿಯೂ ಪ್ರಾಮುಖ್ಯತೆ ಕೊಡಬೇಕಾ? ಅದು ನಮ್ಮ ಮನಸಿನ ಗೌಪ್ಯ ಭಾವನೆಯಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರತಿಯೊಬ್ಬರೂ ಪ್ರತಿ ರಾತ್ರಿ ಸುಮಾರು 2 ಗಂಟೆಗಳ ಕಾಲ ನಿದ್ರೆಯಲ್ಲಿ ಕನಸುಗಳನ್ನು ಕಾಣುತ್ತೇವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಕನಸುಗಳು ನಮ್ಮ ನಿದ್ರೆಯ ಒಂದು ಭಾಗ. ಹಲವರು ತಮಗೆ ಬೀಳುವ ಕನಸಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ. ಇನ್ನು ಕೆಲವರು ಅದನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ಆದರೆ, ನಮಗೆ ಯಾರಾದರೂ ಸಾಯುತ್ತಿರುವ ಕನಸು ಬಿದ್ದರೆ ಅದು ನಮ್ಮ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಯ ಸೂಚಕವಾಗಿರುತ್ತದೆ.

ಇದನ್ನೂ ಓದಿ: ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ?; ಹೃದಯದ ಬಗ್ಗೆ ಇರಲಿ ಎಚ್ಚರ

ಇನ್ಫೈನೈಟ್ ರಿಕವರಿಯಲ್ಲಿ ಕ್ಲಿನಿಕಲ್ ಮನಶ್ಶಾಸ್ತ್ರಜ್ಞರಾಗಿರುವ ಕೆರೊಲಿನಾ ಎಸ್ಟೆವೆಜ್ ಪ್ರಕಾರ, ನಮ್ಮ ಕನಸುಗಳು ಅಸ್ಥಿರವಾಗಬಹುದು. ಆದರೆ ಅದು ಅಂತಿಮವಾಗಿ ನಮ್ಮಲ್ಲಿನ ಪಾಸಿಟಿವ್ ಬದಲಾವಣೆ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ. ನಮ್ಮ ಕನಸುಗಳನ್ನು ಅರ್ಥೈಸಲು ಹಲವು ಸಿದ್ಧಾಂತಗಳಿವೆ. ಕನಸುಗಳ ವ್ಯಾಖ್ಯಾನವು ಪ್ರಾಚೀನ ಇತಿಹಾಸಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಹಿಪ್ಪೊಕ್ರೇಟ್ಸ್‌ನಂತಹ ವ್ಯಕ್ತಿಗಳು ನಮ್ಮ ಕನಸುಗಳು ನಾವು ಹೊಂದಿರಬಹುದಾದ ಕಾಯಿಲೆಯನ್ನು ಸಂಕೇತಿಸುತ್ತವೆ ಎಂದು ಹೇಳಿದ್ದರು. ಮನೋವಿಶ್ಲೇಷಣೆಯ ಸಂಸ್ಥಾಪಕ ಸಿಗ್ಮಂಡ್ ಫ್ರಾಯ್ಡ್, ಕನಸುಗಳು ನಮ್ಮ ಸುಪ್ತಾವಸ್ಥೆಯ ಪ್ರಚೋದನೆಗಳು ಮತ್ತು ಭಾವನಾತ್ಮಕ ಸಂಘರ್ಷಗಳ ಸಂಕೇತವೆಂದು ಹೇಳಿದ್ದರು. ಸಾವಿನ ಬಗ್ಗೆ ಕನಸು ಬಿದ್ದಾಗ ಆ ಕನಸು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹಾಗೂ ಆಯಾ ಸಂದರ್ಭದ ಮೇಲೆ ಆಧರಿಸಿ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾತ್ರಿ ಬಿದ್ದ ಕನಸು ಬೆಳಗ್ಗೆ ಎದ್ದಕೂಡಲೆ ಮರೆತು ಹೋಗೋದೇಕೆ?

ನಾವು ನಮ್ಮ ಆತ್ಮೀಯರು ಸಾಯುವ ಕನಸು ಕಂಡರೆ ಅದು ನಮ್ಮ ನಡುವಿನ ಸಂಬಂಧ ಅಂತ್ಯಗೊಳ್ಳುವುದರ ಸಂಕೇತವಾಗಿರಬಹುದು. ಇನ್ನು ಕೆಲವೊಮ್ಮೆ ನಿಮ್ಮ ಉದ್ಯೋಗವನ್ನು ಬದಲಾಯಿಸುವಾಗಲೂ ಸಾವಿನ ಕನಸು ಬೀಳಬಹುದು. ಕೆಲವೊಮ್ಮೆ ನಾವು ಯಾರನ್ನಾದರೂ ಕಳೆದುಕೊಳ್ಳುವ ಆತಂಕದಲ್ಲಿದ್ದಾಗ, ಯಾವುದಾದರೂ ಒಂದು ಸಂಬಂಧ ನಮ್ಮಿಂದ ದೂರವಾಗುತ್ತಿದೆ ಎಂಬ ಪರಿಸ್ಥಿತಿ ಉಂಟಾದಾಗಲೂ ಈ ರೀತಿಯ ಕನಸುಗಳು ಬೀಳುತ್ತವೆ. ಕನಸುಗಳು ಹಲವು ಸಂಕೇತಗಳನ್ನು ನಮಗೆ ಸೂಚ್ಯವಾಗಿ ನೀಡುತ್ತದೆ ಎಂಬುದು ಸುಳ್ಳಲ್ಲ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ