ಕಿವಿ ನೋವನ್ನು ನಿರ್ಲಕ್ಷಿಸಿದರೆ ಮುಂದೆ ಭಾರೀ ಬೆಲೆ ಕಟ್ಟಬೇಕಾಗುತ್ತದೆ.. ಈ ತಪ್ಪುಗಳನ್ನು ಮಾಡಬೇಡಿ
Ear Pain: ಕಿವಿನೋವು ಒಂದು ದಿನ ಅಥವಾ ಎರಡು ದಿನಗಳಿಗಿಂತ ಹೆಚ್ಚು ಇದ್ದರೆ, ಅದನ್ನು ನಿರ್ಲಕ್ಷಿಸಬಾರದು. ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಇದು ಗಂಭೀರ ಕಾಯಿಲೆಗಳ ಆರಂಭಿಕ ಸಂಕೇತವಾಗಿದೆ. ನೀವು ಕಿವಿ ನೋವಿನಿಂದ ಬಳಲುತ್ತಿದ್ದರೆ, ನೀರು, ಶಾಂಪೂ, ಸೋಪ್ ಅನ್ನು ಕಿವಿಗೆ ಹಾಕಿಕೊಳ್ಳುವುದನ್ನು ತಪ್ಪಿಸಿ
ಶೀತ ಬಂದಾಗ ಅನೇಕ ಜನರು ಕಿವಿ ನೋವನ್ನು ಅನುಭವಿಸುತ್ತಾರೆ. ಆದರೆ ಇದು ಆಗಾಗ್ಗೆ ಸಂಭವಿಸುತ್ತಿದ್ದರೆ ಜಾಗರೂಕರಾಗಿರಿ. ಇದು ಅನೇಕ ದೊಡ್ಡ ಅಪಾಯಗಳ ಸಂಕೇತವಾಗಿದೆ. ಕಿವಿ ನೋವನ್ನು ಹೋಗಲಾಡಿಸಲು, ಅನೇಕ ಜನರು ಆಯುರ್ವೇದವನ್ನು ತೆಗೆದುಕೊಳ್ಳುತ್ತಾರೆ. ಅಥವಾ ನೋವು ನಿವಾರಕ ಔಷಧಿಗಳನ್ನು ಬಳಸುತ್ತಾರೆ. ಇದರಿಂದ ಕೆಲವೊಮ್ಮೆ ಕಿವಿ ನೋವು (Ear Infection) ವಾಸಿಯಾಗುತ್ತದೆ. ಆದರೆ ಮುಂದೆ ಮತ್ತೆ ನೋವು ಉಲ್ಬಣಗೊಳ್ಳುತ್ತದೆ (Ear Pain management).
ಕಿವಿನೋವು ಒಂದು ದಿನ ಅಥವಾ ಎರಡು ದಿನಗಳಿಗಿಂತ ಹೆಚ್ಚು ಇದ್ದರೆ, ಅದನ್ನು ನಿರ್ಲಕ್ಷಿಸಬಾರದು. ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಇದು ಗಂಭೀರ ಕಾಯಿಲೆಗಳ ಆರಂಭಿಕ ಸಂಕೇತವಾಗಿದೆ. ನೀವು ಕಿವಿ ನೋವಿನಿಂದ ಬಳಲುತ್ತಿದ್ದರೆ, ನೀರು, ಶಾಂಪೂ, ಸೋಪ್ ಅನ್ನು ಕಿವಿಗೆ ಹಾಕಿಕೊಳ್ಳುವುದನ್ನು ತಪ್ಪಿಸಿ. ಕೆಲವೊಮ್ಮೆ ನೀರು ಕಿವಿಯಲ್ಲಿ ಸೇರಿಕೊಮಡರೆ ಕಿವಿಕಟ್ಟಿಕೊಂಡು ನೋವು ಪ್ರಾರಂಭವಾಗುತ್ತದೆ.
ಸ್ನಾನ ಮಾಡುವಾಗ ಹತ್ತಿ ಉಂಡೆಗಳನ್ನು ಕಿವಿಯಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ನೀರು ಒಳಗೆ ಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ. ಕೆಲವೊಮ್ಮೆ ಗಂಟಲು ನೋವಿನಿಂದಾಗಿಯೂ ಕಿವಿನೋವು ಪ್ರಾರಂಭವಾಗುತ್ತದೆ. ಕಿವಿ ನೋವು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಮಸ್ಯೆಯನ್ನು ತಡೆಗಟ್ಟಲು, ಮೊದಲನೆಯದಾಗಿ, ಸಮಯಕ್ಕೆ ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಇದನ್ನೂ ಓದಿ: ಒಣ ಕೊಬ್ಬರಿ ತಿನ್ನುವುದರಿಂದ ಆಗುವ ಲಾಭಗಳೇನು? ಮಧುಮೇಹ ನಿಯಂತ್ರಣಕ್ಕೆ ಅದು ಒಳ್ಳೆಯದಾ?
ಅದರ ನಂತರವೂ ನೋವು ಮುಂದುವರಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಈ ನೋವನ್ನು ಹೆಚ್ಚು ದಿನ ನಿರ್ಲಕ್ಷಿಸಿದರೆ ಕಿವಿಯಿಂದ ಕೀವು ಬರುವ ಅಪಾಯವಿದೆ. ಅಷ್ಟೇ ಅಲ್ಲ ಕಿವಿಯಿಂದ ಕೀವು ಜೊತೆಗೆ ರಕ್ತವೂ ಸುರಿಯಲು ಶುರುವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕಿವಿಯೊಳಗಿನ ಸೋಂಕಿನಿಂದ ಇದು ಸಂಭವಿಸುತ್ತದೆ. ಅಥವಾ ಬೇರೆ ಯಾವುದಾದರೂ ಗಂಟಲಿನ ಸಮಸ್ಯೆಯೂ ಕಾರಣವಾಗಿರಬಹುದು.
ಆರೋಗ್ಯ ಕುರಿತಾದ ಹೆಚ್ಚಿನ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Mon, 1 April 24