ಅಪರಾಧಿ ಭಾವ ನಿಮ್ಮನ್ನು ಕಾಡುತ್ತಿದೆಯೇ? ಮಾನಸಿಕ ಆರೋಗ್ಯದ ಮೇಲೆ ಹೀಗೂ ಪರಿಣಾಮ ಬೀರಬಹುದು
ಯಾವುದೋ ಕ್ಷಣದಲ್ಲಿ ಯಾವುದೋ ವಿಚಾರದಲ್ಲಿ ನಿಮಗೆ ಅಪರಾಧಿ ಭಾವ ಕಾಡಬಹುದು, ನೀವು ತಪ್ಪು ಮಾಡಿದ್ದೇನೆಂದು ನಿಮಗೆ ಅನ್ನಿಸಬಹುದು ಅಥವಾ ಯಾರಿಗೋ ಮೋಸ ಮಾಡಿದ್ದೇನೆ ಅಂತಲೂ ಅನ್ನಿಸುವುದು ಸಹಜ, ಆದರೆ ಈ ಭಾವನೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಂತೂ ಸತ್ಯ.

ಯಾವುದೋ ಕ್ಷಣದಲ್ಲಿ ಯಾವುದೋ ವಿಚಾರದಲ್ಲಿ ನಿಮಗೆ ಅಪರಾಧಿ ಭಾವ ಕಾಡಬಹುದು, ನೀವು ತಪ್ಪು ಮಾಡಿದ್ದೇನೆಂದು ನಿಮಗೆ ಅನ್ನಿಸಬಹುದು ಅಥವಾ ಯಾರಿಗೋ ಮೋಸ ಮಾಡಿದ್ದೇನೆ ಅಂತಲೂ ಅನ್ನಿಸುವುದು ಸಹಜ, ಆದರೆ ಈ ಭಾವನೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಂತೂ ಸತ್ಯ.
ಯಾವುದೋ ವಿಷಯದ ಬಗ್ಗೆ ತುಂಬಾ ದುಃಖಿತರಾಗುವುದು ಎಲ್ಲಾ ಸಮಯದಲ್ಲಿ ಅದೇ ವಿಷಯದ ಬಗ್ಗೆ ಯೋಚಿಸುವುದು ನಿದ್ರಾಹೀನತೆ ಯಾವುದೇ ಕಾರಣವಿಲ್ಲದೇ ಅಳುವುದು ಹೊಟ್ಟೆ ಉರಿ ಆತಂಕ, ದುಃಖದ ಭಾವನೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದು ಜನರೊಂದಿಗೆ ಬೆರೆಯಲು ಸಾಧ್ಯವಾಗದಿರುವುದು
ದೀರ್ಘಕಾಲ ನೀವು ತಪ್ಪಿತಸ್ಥ ಎಂಬ ಭಾವನೆ ಇದ್ದರೆ ಏನಾಗುತ್ತೆ? ನಿರಂತರವಾಗಿ ನೀವು ತಪ್ಪಿತಸ್ಥ ಎಂಬ ಭಾವನೆಯು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು. ಇದಾದ ಬಳಿಕ ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವ ರೀತಿ ಕೂಡ ಬದಲಾಗಬಹುದು.
ಅತೃಪ್ತಿ, ದುಃಖ, ಕಿರಿಕಿರಿಯ ನಡವಳಿಕೆ ಬೆಳೆಯಬಹುದು, ಇದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಇನ್ನಷ್ಟು ಋಣಾತ್ಮಕ ಪರಿಣಾಮ ಉಂಟಾಗಬಹುದು. ಯಾವುದೋ ಒಂದು ಸಂದರ್ಭದಲ್ಲಿ ನಿಮಗೆ ತಿಳಿದೋ, ತಿಳಿಯದೇ ನಡೆಯುವ ಅಪರಾಧವು ನಿಮ್ಮ ಆರೋಗ್ಯ, ಸಂಬಂಧಗಳು ಹಾಗೂ ಉತ್ಪಾದಕತೆ ಮೇಲೆ ನೇರ ಪರಿಣಾಮ ಬೀರುತ್ತದೆ.
ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಬೇಡಿ ಯಾವುದೇ ವಿಚಾರಕ್ಕೂ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಬೇಡಿ, ಎಲ್ಲವೂ ನಿಮ್ಮಿಂದಲೇ ಆಯಿತು ಎಂಬುದನ್ನು ನಿಲ್ಲಿಸಿ, ಎಲ್ಲದಕ್ಕೂ ಹಲವು ಕಾರಣಗಳಿರುತ್ತವೆ.
ನಿಮ್ಮನ್ನು ಒಪ್ಪಿಕೊಳ್ಳಿ ನೀವು ಹೇಗೆ ಎಂಬುದರ ಬಗ್ಗೆ ವಿಶ್ವಾಸವಿರಲಿ, ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡುವುದು ಸರಿ, ಆದರೆ ಬೇರೊಬ್ಬರಿಗಾಗಿ ನೀವು ಬದಲಾಗುವುದು ಅನಿವಾರ್ಯವಲ್ಲ.
ಕಾರಣಗಳನ್ನು ಅರ್ಥಮಾಡಿಕೊಳ್ಳಿ ಸನ್ನಿವೇಶವು ನಿಮ್ಮಿಂದ ತಪ್ಪು ಮಾಡಿಸಿರಬಹುದು ಆದರೆ ನೀವು ನಿಮ್ಮನ್ನು ಮಾತ್ರ ತಪ್ಪಿತಸ್ಥರೆಂದು ಭಾವಿಸುವುದು ತಪ್ಪು, ಯಾವುದೇ ಸಮಯ ತಪ್ಪಾಗಿದೆ ಅದನ್ನು ಸಾಧ್ಯವಾದರೆ ತಿದ್ದಿಕೊಳ್ಳಲು ಪ್ರಯತ್ನಿಸಿ, ಕಾರಣಗಳನ್ನು ಅರ್ಥಮಾಡಿಕೊಳ್ಳಿ.
ಬದಲಾವಣೆಯತ್ತ ಸಾಗಿ ನೀವು ಹೋಗುವ ದಾರಿಯಲ್ಲಿ ಬದಲಾವಣೆ ಸಾಧ್ಯವಾಗದಿದ್ದರೆ ವಿರುದ್ಧ ದಿಕ್ಕಿನಲ್ಲಿ ಹೋಗಿ ನೀವು ಅಂದುಕೊಂಡಿರುವ ಗುರಿ ಸಾಧಿಸಿ.
ಸಕಾರಾತ್ಮಕ ಜನರೊಂದಿಗೆ ಮಾತನಾಡಿ ನಿಮ್ಮನ್ನು ತಪ್ಪಿತಸ್ಥರೆಂದು ಭಾವಿಸುವ ಸಂದರ್ಭದಲ್ಲಿ ನಿಮ್ಮ ಹಿತೈಷಿಗಳೊಂದಿಗೆ ಪ್ರಾಮಾಣಿಕವಾಗಿ ಮಾತನಾಡಿ, ನಿಮ್ಮ ಭಾವನೆಗಳನ್ನು ಮತ್ತು ಪ್ರಸ್ತುತ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಅನೇಕ ಬಾರಿ ನೀವು ಯೋಚಿಸುತ್ತಿರುವುದು ಕೇವಲ ನಿಮ್ಮ ಕಲ್ಪನೆಯಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ