Viral Video: ಕ್ಯಾಬ್ ಅಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ! ಓಲಾ ಕ್ಯಾಬ್ ಚಾಲಕನ ʼಆತ್ಮಹತ್ಯೆʼ ಸ್ಕ್ಯಾಮ್ ಬಗ್ಗೆ ಹಂಚಿಕೊಂಡ ಪ್ರಖ್ಯಾತ ಯೂಟ್ಯೂಬರ್

ಪ್ರತಿನಿತ್ಯ ಕೆಲವೊಬ್ಬರು ಜನರಿಂದ ಹಣ ದೋಚಲು ಹಲವಾರು ರೀತಿಯ ಸ್ಕ್ಯಾಮ್ ಗಳನ್ನು ನಡೆಸುತ್ತಿರುತ್ತಾರೆ. ಇದೀಗ ಅದೇ ರೀತಿಯ ಸ್ಕ್ಯಾಮ್ ಒಂದರ ಬಗ್ಗೆ ಪ್ರಖ್ಯಾತ ಯೂಟ್ಯೂಬರ್ ಒಬ್ಬರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ಯಾಬ್ ಗಳಲ್ಲಿ ಪ್ರಯಾಣಿಸುವವರು ತುಂಬಾ ಜಾಗರೂಕರಾಗಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಆ ಸ್ಕ್ಯಾಮ್ ಏನು? ಈ ಎಲ್ಲದರ ಕುರಿತ ಮಾಹಿತಿ ಇಲ್ಲಿದೆ.

Viral Video: ಕ್ಯಾಬ್ ಅಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ! ಓಲಾ ಕ್ಯಾಬ್  ಚಾಲಕನ ʼಆತ್ಮಹತ್ಯೆʼ ಸ್ಕ್ಯಾಮ್ ಬಗ್ಗೆ ಹಂಚಿಕೊಂಡ ಪ್ರಖ್ಯಾತ ಯೂಟ್ಯೂಬರ್
Follow us
| Updated By: ಅಕ್ಷತಾ ವರ್ಕಾಡಿ

Updated on: Feb 29, 2024 | 3:52 PM

ನಗರಗಳಲ್ಲಿ ಹೆಚ್ಚಿನ ಜನರು ಆಫೀಸಿಗೆ ಹೋಗಲು, ಮಾರುಕಟ್ಟೆಗೆ ಹೋಗಲು ಅಥವಾ ಬೇರೆಲ್ಲಾದರೂ ಪ್ರಯಾಣಿಸಲು ಹೆಚ್ಚಾಗಿ ಕ್ಯಾಬ್ ಸೇವೆಗಳನ್ನು ಅವಲಂಬಿಸುತ್ತಾರೆ. ಏಕೆಂದರೆ ಕ್ಯಾಬ್ಗಳಲ್ಲಿ ಹೋಗುವುದರಿಂದ ಸಮಯಕ್ಕೆ ಸರಿಯಾಗಿ ತಲುಪಬಹುದು ಎಂಬ ಕಾರಣಕ್ಕೆ ಹೆಚ್ಚಿನವರು ಕ್ಯಾಬ್ ಗಳಲ್ಲೇ ಪ್ರಯಾಣಿಸುತ್ತಾರೆ. ಅಷ್ಟೇ ಅಲ್ಲದೇ ಕ್ಯಾಬ್ ಗಳಲ್ಲಿ ಪ್ರಯಾಣಿಸುವುದು ಸುರಕ್ಷಿತವೂ ಹೌದು ಎಂದು ಹಲವರು ಹೇಳುತ್ತಾರೆ. ಕ್ಯಾಬ್ ಸೇವೆಗಳು ಸುರಕ್ಷಿತವಗಿದ್ದರೂ, ಇಲ್ಲಿಯೂ ಕೂಡಾ ಕೆಲವೊಂದು ಸ್ಕ್ಯಾಮ್ ಗಳು ನಡೆಯುತ್ತವೆ. ಈ ಬಗ್ಗೆ ಗ್ರಾಹಕರು ತುಂಬಾನೇ ಜಾಗರೂಕರಾಗಿರಬೇಕೆಂದು ಪ್ರಖ್ಯಾತ ಯೂಟ್ಯೂಬರ್ ಒಬ್ಬರು ಹೇಳಿದ್ದಾರೆ.

ಹೌದು ಮುಂಬೈನ ಪ್ರಖ್ಯಾತ ಕಂಟೆಂಟ್ ಕ್ರಿಯೇಟರ್ ಅನೀಶಾ ದೀಕ್ಷಿತ್ ಈ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದು, ಕ್ಯಾಬ್ ಡ್ರೈವರ್ ಗಳು ನಮ್ಮನ್ನು ಎಮೋಷನಲ್ ಬ್ಲ್ಯಾಕ್ಮೇಲ್ ಮಾಡಿ ಹಣ ಪೀಕಿಸಲು ಹೇಗಲ್ಲಾ ಸ್ಕ್ಯಾಮ್ ಗಳನ್ನು ನಡೆಸುತ್ತಾರೆ ಎಂಬುದನ್ನು ಹೇಳಿದ್ದಾರೆ.

View this post on Instagram

A post shared by Anisha Dixit (@anishadixit)

ಈ ಕುರಿತ ಪೋಸ್ಟ್ ಒಂದನ್ನು ಅನೀಶಾ ದೀಕ್ಷಿತ್ (@anishadixit) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು ಈ ವಿಚಾರವನ್ನು ಆನ್ಲೈನ್ ಅಲ್ಲಿ ಪೋಸ್ಟ್ ಮಾಡಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದೆ. ಆದರೂ ಪೋಸ್ಟ್ ಮಾಡುತ್ತಿದ್ದೇನೆ. ಈ ಒಂದು ವಿಚಾರ ನಿಜವಾಗಿಯೂ ಆಘಾತವನ್ನು ಉಂಟುಮಾಡಿದೆ. ಮತ್ತು ಇದೊಂದು ಜನರಿಂದ ಹಣವನ್ನು ಪೀಕುವ ದೊಡ್ಡ ಸ್ಕ್ಯಾಮ್ ಆಗಿದೆ. ಕ್ಯಾಬ್ ಗಳಲ್ಲಿ ಪ್ರಯಾಣಿಸುವಾಗ ಈ ರೀತಿಯ ಅನುಭವ ನಿಮಗೂ ಆಗಿದೆಯೇ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಅನೀಶಾ ದೀಕ್ಷಿತ್ ಮುಂಬೈನ ಬಾಂದ್ರಾದಿಂದ ಕ್ಯಾಬ್ ಅಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಆದಂತಹ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಅದೇನೆಂದರೆ, ಅನೀಶಾ ಕ್ಯಾಬ್ ಒಳಗೆ ಕುಳಿತುಕೊಳ್ಳುತ್ತಿದ್ದಂತೆ ಚಾಲಕ ಜೋರಾಗಿ ಅಳಲು ಪ್ರಾರಂಭಿಸುತ್ತಾನೆ, ನನ್ನ ತಂದೆಯು ತೀರಿ ಹೋಗಿದ್ದಾರೆ. ನನಗೇನು ಮಾಡಬೇಕೆಂದು ತಿಳಿಯುತ್ತಿಲ್ಲ. ಅಷ್ಟೇ ಅಲ್ಲದೆ ಇದೀಗ ಬರುವಾಗ ನನ್ನ ಪರ್ಸ್ ಅನ್ನು ಕೂಡಾ ಯಾರೋ ಕಳವು ಮಾಡಿದ್ದಾರೆ. ನನಗೇನು ದೋಚುತ್ತಿಲ್ಲ. ನನಂತೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಅಳುತ್ತಾನೆ. ಈತನ ಅಳುವನ್ನು ನೋಡಲಾರದೆ ಅನೀಶಾ ಅವರು ಏನು ಆಗಲ್ಲ ಅಣ್ಣ, ನೀವು ದುಡುಕಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಸಾಂತ್ವನ ಹೇಳುತ್ತಾರೆ.

ಇದನ್ನೂ ಓದಿ: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

ಈ ಸಂದರ್ಭದಲ್ಲಿ ಅವರು ಒಂದು ವಿಚಾರವನ್ನು ನೋಟೀಸ್ ಮಾಡ್ತಾರೆ, ಅದೇನಂದ್ರೆ, ಆತ ಅಳುತ್ತಾ ಮಾತನಾಡುವಾಗ ಕಾರಿನ ಕನ್ನಡಿಯನ್ನು ನೋಡುತ್ತಾ ಅನೀಶಾ ಅವರು ಹಣ ಕೊಡಬಹುದೇ ಎಂಬುದನ್ನು ಗಮನಿಸುತ್ತಿರುತ್ತಾನೆ. ಈ ವಿಚಾರವನ್ನು ಗಮನಿಸಿದಂತಹ ಅನೀಶಾ ಇರಿ ಅಣ್ಣ ಸ್ವಲ್ಪ ಗಾಡಿಯನ್ನು ಸೈಡ್ ಹಾಕಿ ನನಗೆ ನನ್ನ ಗಂಡನ ಜೊತೆ ಸ್ವಲ್ಪ ಮಾತನಾಡಲು ಇದೆ ಎಂದು ಹೇಳಿ, ಕಾರಿನಿಂದ ಇಳಿಯುತ್ತಿದ್ದಂತೆ, ಕ್ಯಾಬ್ ಡ್ರೈವರ್ ಕಾರಿನ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಶಾಕ್ ಆದಂತಹ ಅನೀಶಾ, ಇಂತಹ ಸ್ಕ್ಯಾಮ್ ಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಹುಷಾರಾಗಿರಿ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇಂತಹ ವಂಚಕರಿಂದ ನಿಜವಾಗಿಯೂ ಅವಶ್ಯಕತೆಯಿರುವವರಿಗೆ ಸಹಾಯ ಮಾಡಲು ಜನ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೇ ಕ್ಯಾಬ್ ಚಾಲಕ ನನ್ನ ಬಳಿಯೂ ಇದೇ ರೀತಿಯ ಕಥೆಯನ್ನು ಹೇಳಿದ್ದʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈತ ಅಳುತ್ತಾ ಮಗನಿಗೆ ಆಪರೇಷನ್ ಮಾಡಲು ದುಡ್ಡು ಕೊಡಿ ಎಂದು ನನ್ನ ಬಳಿಯಿಂದ ಎಂಟು ಸಾವಿರ ರೂಪಾಯಿ ಹಣವನ್ನು ಪೀಕಿದ್ದಾನೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?