AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊರೆವ ಹಿಮದ ನಡುವೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ ಹಕ್ಕಿ

ಮದುವೆ ಸೀಸನ್ ಶುರುವಾಗಿಬಿಟ್ಟಿದೆ. ಎಲ್ಲಿ ನೋಡಿದರೂ ವಿವಾಹ ಸಮಾರಂಭಗಳದ್ದೇ ಸುದ್ದಿ. ಈ ನಡುವೆ ಇಲ್ಲೊಂದು ವಿಶೇಷ ಮದುವೆ ಸಮಾರಂಭವೊಂದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಹೌದು ಗುಜರಾತ್ ಮೂಲದ ಜೋಡಿ ಹಕ್ಕಿಯೊಂದು ಕೊರೆವ ಹಿಮ ಮತ್ತು ಚಳಿಯ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶಿಷ್ಟ ವಿವಾಹದ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral Video: ಕೊರೆವ ಹಿಮದ ನಡುವೆ ಹೊಸ ಜೀವನಕ್ಕೆ ಕಾಲಿಟ್ಟ  ಜೋಡಿ ಹಕ್ಕಿ
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Feb 28, 2024 | 6:56 PM

Share

ವಿವಾಹವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಈ ಒಂದು ವಿಶೇಷ ಕ್ಷಣವನ್ನು ಜೀವನಪರ್ಯಂತ ಸ್ಮರಣೀಯವಾಗಿರಿಸಲು ಹೆಚ್ಚಿನವರು ತಮ್ಮ ವಿವಾಹವನ್ನು ಬಹಳ ವಿಶೇಷವಾಗಿ ನಡೆಸಬೇಕೆಂದು ಬಯಸುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಬಹಳ ಜನಪ್ರಿಯವಾಗುತ್ತಿದೆ. ಜೋಡಿ ಹಕ್ಕಿಗಳು ವಿದೇಶದಲ್ಲಿನ ತಮ್ಮ ಡ್ರೀಮ್ ಪ್ಲೇಸ್ ಅಥವಾ ಹತ್ತಿರದಲ್ಲಿನ ಬೀಚ್ ಇತ್ಯಾದಿ ಸುಂದರ ಸ್ಥಳಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ಈ ಡೆಸ್ಟಿನೇಷನ್ ವೆಡ್ಡಿಂಗ್ ಈಗೀನ ಟ್ರೆಂಡ್ ಆಗಿಬಿಡ್ಡಿದೆ. ಹೌದು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಹೆಚ್ಚಿನವರು ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಇದೀಗ ಇಲ್ಲೊಂದು ಜೋಡಿ ಕೂಡ ತಮ್ಮ ಮದುವೆಯ ಕ್ಷಣವನ್ನು ಜೀವನಪರ್ಯಂತ ಸ್ಮರಣೀಯವಾಗಿರಿಸುವ ಸಲುವಾಗಿ ಕೊರೆವ ಹಿಮದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶಿಷ್ಟ ಡೆಸ್ಟಿನೇಷನ್ ವೆಡ್ಡಿಂಗ್ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೊರೆವ ಹಿಮದ ನಡುವೆ ವಿವಾಹ ಕಾರ್ಯಕ್ರಮ ಜರಗುತ್ತಿರುವ ದೃಶ್ಯವನ್ನು ಕಾಣಬಹುದು. ವಧುವಿನ ಆಸೆಯಂತೆ ಗುಜರಾತ್ ಮೂಲದ ಈ ಜೋಡಿ ಹಕ್ಕಿ ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ಕಣಿವೆಯಲ್ಲಿ ಕೊರೆವ ಹಿಮದ ನಡುವೆ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ವಿಶೇಷ ವಿವಾಹದ ಕುರಿತ ವಿಡಿಯೋ ತುಣುಕೊಂದನ್ನು ಅಜಯ್ ಬನ್ಯಾಲ್ (@iAjay_Banyal) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ವಿಶೇಷ ಮದುವೆ! ವಧುವಿನ ಆಸೆಯ ಮೇರೆಗೆ ಗುಜರಾತಿನ ಜೋಡಿ ಹಕ್ಕಿಯೊಂದು ಹಿಮಾಚಲ ಪ್ರದೇಶದ ಸ್ಪಿತಿಯಲ್ಲಿ 25 ಡಿಗ್ರಿ ಸೆಲ್ಸಿಯಸ್ ತಪಮಾನದಿಂದ ಕೂಡಿದ ಕೊರೆವ ಚಳಿಯ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಡೆಸ್ಟಿನೇಷನ್ ವೆಡ್ಡಿಂಗ್ ಗೆ ಉತ್ತಮ ಉದಾಹರಣೆಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಬಿಳಿ ಹಿಮದ ರಾಶಿಯ ನಡುವೆ ಜೋಡಿ ಹಕ್ಕಿಯೊಂದು ವೈವಾಹಿಕ ಜೀವನಕ್ಕೆ ಕಾಲಿಡುವಂತಹ ಸುಂದರವಾದ ದೃಶ್ಯವನ್ನು ಕಾಣಬಹುದು. ಮಧುವಿನ ಆಸೆಯಂತೆ ಒಂದಷ್ಟು ಆತ್ಮೀಯರ ಸಮ್ಮುಖದಲ್ಲಿ ಸಿಂಪಲ್ ಆಗಿ ಜೋಡಿ ಹಕ್ಕಿಯೊಂದು ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ಕಣಿವೆಯಲ್ಲಿ ಕೊರೆಯುವ ಚಳಿಯಲ್ಲಿ ಹಿಮದ ರಾಶಿಯ ನಡುವೆ ವಿಶಿಷ್ಟವಾಗಿ ವಿವಾಹವಾಗಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

ಫೆಬ್ರವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 24 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಸ್ಪಿತಿಯಲ್ಲಿ ಮದುವೆಯಾಗಬೇಕೆಂಬುವುದು ನನ್ನ ಕನಸು ಕೂಡಾ ಹೌದುʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಿರಿವಂತರು ಹಣವನ್ನು ಖರ್ಚು ಮಾಡಲು ಇಂತಹ ಟ್ರಿಕ್ಸ್ಗಳನ್ನು ಅನುಸರಿಸುತ್ತಿರುತ್ತಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼದಯವಿಟ್ಟು ಸುಂದರವಾದ ಸ್ಥಳಗಳಲ್ಲಿ ಈ ರೀತಿ ನಿಮ್ಮ ಮೋಜಿಗಾಗಿ ಬಂದು ಅಲ್ಲಿ ಕಸ ಕಡ್ಡಿಗಳನ್ನು ಹಾಕಿ ಆ ಸುಂದರ ಸ್ಥಳದ ಸೌಂದರ್ಯವನ್ನು ಹಾಳು ಮಾಡಬೇಡಿʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ