Viral Video: ವಿದೇಶಿ ಪ್ರಜೆಯ ಕಂಠದಲ್ಲಿ ಮೂಡಿಬಂದ ʼಕರಿಮಣಿ ಮಾಲೀಕ ರಾಹುಲ್ಲಾʼ ಸಾಂಗ್, ಹೇಗಿದೆ ನೋಡಿ 

ಕಳೆದ ಹಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಓ ನಲ್ಲ… ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ…. ಹಾಡು ಸಖತ್ ಟ್ರೆಂಡ್ ಸೃಷ್ಟಿ ಮಾಡಿತ್ತು. ಈ ಹಾಡು ವೈರಲ್ ಆಗುತ್ತಿದ್ದಂತೆ ಕರಿಮಣಿ ಮಾಲೀಕನ ಅಪ್ಡೇಟೆಡ್ ವರ್ಷನ್ ಸಾಂಗ್ ಆಗಿರುವಂತಹ ಕರಿಮಣಿ ಮಾಲೀಕ ರಾಹುಲ್ಲಾ ಸಾಂಗ್ ಕೂಡಾ ಬಹಳ ಸದ್ದು ಮಾಡಿತ್ತು. ಈಗಂತೂ ಎಲ್ಲೆಲ್ಲೂ ಈ ಹಾಡಿನದ್ದೇ ಹವಾ. ಯಾರು ನೋಡಿದ್ರೂ  ಇದೇ ಹಾಡಿಗೆ ರೀಲ್ಸ್ ಮಾಡ್ತಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ,  ವಿದೇಶಿ ಪ್ರಜೆಯೊಬ್ಬರೂ ಕೂಡಾ ಕರಿಮಣಿ ಮಾಲೀಕ ರಾಹುಲ್ಲಾ ಹಾಡನ್ನು ಬಹಳ ಸೊಗಸಾಗಿ ಹಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. 

Viral Video: ವಿದೇಶಿ ಪ್ರಜೆಯ ಕಂಠದಲ್ಲಿ ಮೂಡಿಬಂದ ʼಕರಿಮಣಿ ಮಾಲೀಕ ರಾಹುಲ್ಲಾʼ ಸಾಂಗ್, ಹೇಗಿದೆ ನೋಡಿ 
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 28, 2024 | 5:48 PM

ಸಾಮಾಜಿಕ ಜಾಲತಾಣದಲ್ಲಿ ಕಳೆದ ಹಲವು ದಿನಗಳಿಂದ 1999 ರಲ್ಲಿ ತೆರೆ ಕಂಡಿದ್ದ ಉಪೇಂದ್ರ ಚಿತ್ರದ ಕರಿಮಣಿ ಮಾಲೀಕ ನೀನಲ್ಲ ಹಾಡು ಬಹಳ ವೈರಲ್ ಆಗಿತ್ತು. ಬಹುಶಃ ಇತ್ತೀಚಿನ ದಿನಗಳಲ್ಲಿ ಈ ಹಾಡನ್ನು ಕೇಳದ ಕಿವಿಗಳಿಲ್ಲ ಅಂತಾನೇ ಹೇಳಬಹುದು. ಕರಿಮಣಿ ಮಾಲೀಕ ಹಾಡಿನ ಜೊತೆ ಜೊತೆಗೆ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ರಾಹುಲ್ಲಾ ಕೂಡಾ ಸುದ್ದಿಯಲ್ಲಿದ್ದಾರೆ.  ಈ ಎರಡೂ ಕಂಟೆಟ್ ಸೋಷಿಯಲ್ ಮೀಡಿಯಾದಲ್ಲಿ ಹಿಟ್ ಆಗುತ್ತಿದ್ದಂತೆ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ (ವಿಕಾಸ್) ಮತ್ತು ಟೀಮ್ ತಮ್ಮದೇ ಶೈಲಿಯ ಕರಿಮಣಿ ಮಾಲೀಕನ ಅಪ್ಡೇಟೆಡ್ ವರ್ಷನ್ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದರು. ಈ ಕರಿಮಣಿ ಮಾಲೀಕ ರಾಹುಲ್ಲಾ ಹಾಡಂತೂ ಸಖತ್ ಹವಾ ಸೃಷ್ಟಿಸಿತ್ತು. ಜನರು ಈ ಹಾಡಿಗೆ ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿದ್ದಾರೆ ಎಂದ್ರೆ, ದೊಡ್ಡವರು ಚಿಕ್ಕವರು ಎನ್ನದೆ ಈ ಹಾಡಿಗೆ ಪ್ರತಿಯೊಬ್ಬರೂ ಕೂಡಾ ರೀಲ್ಸ್ ಮಾಡುತ್ತಿದ್ದಾರೆ.  ಕನ್ನಡಿಗರಾದ ನಾವು ಮಾತ್ರವಲ್ಲದೆ  ವಿದೇಶಿ ಪ್ರಜೆಯೊಬ್ಬರೂ ಕೂಡಾ ಈ ಹಿಟ್ ಸಾಂಗ್ ಅನ್ನು ಬಹಳ ಸೊಗಸಾಗಿ ಹಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿದೇಶಿ ಹಾಡುಗಾರರೊಬ್ಬರು ಕೈಯಲ್ಲಿ ಗಿಟಾರ್ ಹಿಡಿದುಕೊಂಡು ಕರಿಮಣಿ ಮಾಲೀಕ ರಾಹುಲ್ಲ ಎಂಬ ಟ್ರೆಂಡಿ ಹಾಡನ್ನು ಹಾಡುತ್ತಿರು ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @kushka.hakla ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ವಿದೇಶ ತಲುಪಿದ ಕರಿಮಣಿ ಮಾಲೀಕ ರಾಹುಲ್ಲ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by KUSHKA HAKLA (@kushka.hakla)

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗೋಕರ್ಣಕ್ಕೆ ಪ್ರವಾಸ ಬಂದಿದ್ದಂತಹ ವಿದೇಶಿ ಪ್ರಜೆಯೊಬ್ಬರು, ಅಲ್ಲಿನ ಪ್ರವಾಸಿಗರ ಒತ್ತಾಯದ ಮೇರೆಗೆ  ಕೈಯಲ್ಲಿ ಗಿಟಾರು  ಹಿಡಿದುಕೊಂಡು ಓ ನಲ್ಲ… ನೀನಲ್ಲ ಕರಿಮಣಿ ಮಾಲೀಕ ನೀನಲ್ಲ…. ಮತ್ಯಾರು,  ಕರಮಣಿ ಮಾಲೀಕ ರಾಹುಲ್ಲ… ರಾಹುಲ್ಲ ರಾಹುಲ್ಲ ಕರಿಮಣಿ ಮಾಲೀಕ ರಾಹುಲ್ಲ ಎಂಬ ಹಾಡನ್ನು ಬಹಳ ಸೊಗಸಾಗಿ ಹಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 39 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ತರಹೇವಾರಿ ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ.  ಒಬ್ಬ ಬಳಕೆದಾರರು ʼಯಾವ ದೇಶನೂ ತಲುಪಿಲ್ಲ ಗೋಕರ್ಣದಲ್ಲಿ ಬಂದಿದ್ದ ವಿದೇಶಿ ಪ್ರಜೆಗಳು ಹಾಡಿದ್ದು ಅಷ್ಟೇʼ  ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಒನ್ ಮೋರ್ ಒನ್ ಮೋರ್ ಅಂತಿರ್ಬೇಕುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಚೆನ್ನಾಗಿದೆ ಹಾಡು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ