AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಮಧ್ಯರಾತ್ರಿ ತನ್ನನ್ನು ಸೇಫ್ ಆಗಿ ಮನೆಗೆ ತಲುಪುವಂತೆ ಮಾಡಿದ ಕ್ಯಾಬ್ ಚಾಲಕಿಯನ್ನು ಶ್ಲಾಘಿಸಿದ ಮಹಿಳೆ

ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆಟೋ ಓಡಿಸುವುದರಿಂದ ಹಿಡಿದು ಉನ್ನತ ಹುದ್ದೆಗಳವರೆಗೆ ಇಂದು ಮಹಿಳೆಯು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದಾಳೆ. ಇದೀಗ ಮಹಿಳಾ ಸಬಲೀಕರಣಕ್ಕೆ ಸೂಕ್ತ ನಿದರ್ಶನದಂತಿರುವ ಪೋಸ್ಟ್ ಒಂದು ವೈರಲ್ ಆಗಿದ್ದು, ಮಧ್ಯರಾತ್ರಿಯಲ್ಲಿ ತನ್ನನ್ನು ಸೇಫ್ ಆಗಿ ಮನೆಗೆ ಡ್ರಾಪ್ ಮಾಡಿದ ಗೋ ಪಿಂಕ್ ಕ್ಯಾಬ್ ಚಾಲಕಿಯನ್ನು ಬೆಂಗಳೂರಿನ ಮಹಿಳೆಯೊಬ್ಬರು ಶ್ಲಾಘಿಸಿದ್ದಾರೆ.

Viral Post: ಮಧ್ಯರಾತ್ರಿ ತನ್ನನ್ನು ಸೇಫ್ ಆಗಿ ಮನೆಗೆ ತಲುಪುವಂತೆ ಮಾಡಿದ ಕ್ಯಾಬ್ ಚಾಲಕಿಯನ್ನು ಶ್ಲಾಘಿಸಿದ ಮಹಿಳೆ
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Feb 29, 2024 | 3:23 PM

Share

ಪುರುಷರು ಮಹಿಳೆಯರಿಗಿಂತ ಮಿಗಿಲು ಎನ್ನುವ ಕಾಲ ಈಗಿಲ್ಲ. ಇಂದಿನ ಸಮಾಜದಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮಂಚೂಣಿಯಲ್ಲಿದ್ದಾಳೆ. ಹೌದು ಉದ್ಯೋಗ ಮತ್ತು ಕುಟುಂಬ ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಾ ಪುರುಷರಷ್ಟೇ ಮಹಿಳೆಯರು ಕೂಡಾ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆಟೋವನ್ನು ಓಡಿಸುವುದರಿಂದ ಹಿಡಿದು ಪೈಲೆಟ್ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಪುರುಷನಿಗೆ ಸರಿಸಮಾನವಾಗಿ ನಿಂತಿದ್ದಾಳೆ. ಇಂತಹ ದಿಟ್ಟ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳನ್ನು ನೀವೆಲ್ಲರೂ ಕೇಳಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ದಿಟ್ಟ ಮಹಿಳೆಯೊಬ್ಬರ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಧ್ಯರಾತ್ರಿ ವಿಮಾನ ನಿಲ್ದಾಣದಿಂದ ಮನೆಗೆ ಸೇಫ್ ಆಗಿ ಡ್ರಾಪ್ ಮಾಡಿದಂತಹ ಗೋ ಪಿಂಕ್ ಕ್ಯಾಬ್ ಚಾಲಕಿಯನ್ನು ಮಹಿಳೆಯೊಬ್ಬರು ಶ್ಲಾಘಿಸಿದ್ದಾರೆ.

ಗೋ ಪಿಂಕ್ ಕ್ಯಾಬ್ ಸೇವೆಗಳ ಬಗ್ಗೆ ನೀವು ಕೇಳಿರಬಹುದಲ್ವಾ. ಬೆಂಗಳೂರಿನಲ್ಲಿ 2015 ರಿಂದ ಶುರುವಾದ ಗೋ ಪಿಂಕ್ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರಿಂದಲೇ ಮಹಿಳೆಯರಿಗಾಗಿ ಚಾಲ್ತಿಯಲ್ಲಿರುವ ಕ್ಯಾಬ್ ಸರ್ವಿಸ್ ಆಗಿದೆ. ಅನೇಕ ಮಹಿಳೆಯರು ಈ ಕ್ಯಾಬ್ ಸರ್ವಿಸ್ ನ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಮಧ್ಯರಾತ್ರಿಯಲ್ಲೂ ಮಹಿಳೆಯರಾದ ನಮ್ಮನ್ನು ಸೇಫ್ ಆಗಿ ಮನೆಗೆ ತಲುಪಿಸುವ ಕೆಲಸ ಮಾಡುತ್ತಿರುವ ಕ್ಯಾಬ್ ಚಾಲಕಿಯನ್ನು ಪೂರ್ಣಿಮ ಪ್ರಭು ಎಂಬವರು ಶ್ಲಾಘಿಸಿದ್ದಾರೆ.

ಹೌದು ಮಧ್ಯರಾತ್ರಿಯ ಸಮಯದಲ್ಲಿ ಬೆಂಗಳೂರಿನ ಕೆಂಪೇಗೌಡ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಇಳಿದಂತಹ ಪೂರ್ಣಿಮಾ ಪ್ರಭು ರಾತ್ರಿಯ ವೇಳೆ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಗೋ ಪಿಂಕ್ ಕ್ಯಾಬ್ ಅನ್ನು ಬುಕ್ ಮಾಡುತ್ತಾರೆ. ಹಾಗೂ ತನ್ನನ್ನು ಮಧ್ಯರಾತ್ರಿಯಲ್ಲಿ ಯಾವುದೇ ಭಯವಿಲ್ಲದೆ ಸುರಕ್ಷಿತವಾಗಿ ಮನೆಗೆ ಡ್ರಾಪ್ ಮಾಡಿದ್ದಕ್ಕಾಗಿ ಬೆಂಗಳೂರಿನ ಗೋ ಪಿಂಕ್ ಕ್ಯಾಬ್ಸ್ ನ ಚಾಲಕಿಯಾಗಿರುವ ರಾಜೇಶ್ವರಿಯವರನ್ನು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

ಈ ಕುರಿತ ಪೋಸ್ಟ್ ಒಂದನ್ನು ಪೂರ್ಣಿಮಾ ಪ್ರಭು (@reader_wanderer) ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು ಮಧ್ಯರಾತ್ರಿ @BLRRirport ನಲ್ಲಿ ಇಳಿದಾಗ @GOPink_Cabs ನ ರಾಜೇಶ್ವರಿ ನನನ್ನು ಸುರಕ್ಷಿತವಾಗಿ ಮನೆಗೆ ಮರಳಿಸುವುದಾಗಿ ಭರವಸೆ ನೀಡಿದ್ದರು. ಈ ಮಧ್ಯರಾತ್ರಿಯಲ್ಲೂ ಆತ್ಮವಿಶ್ವಾಸದೊಂದಿಗೆ ಪರಿಣಿತವಾಗಿ ಆಕೆ ವಾಹನವನ್ನು ಚಲಾಯಿಸಿದರು. ಇದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಪೂರ್ಣಿಮಾ ಅವರು ಹಂಚಿಕೊಂಡಿರುವ ಪೋಸ್ಟ್ ಅಲ್ಲಿ ರಾಜೇಶ್ವರಿಯವರು ಮಧ್ಯರಾತ್ರಿಯಲ್ಲಿ ಯಾವುದೇ ಭಯವಿಲ್ಲದೆ ದಿಟ್ಟತನದಿಂದ ಕ್ಯಾಬ್ ಓಡಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಅದ್ಭುತ! ಇನ್ನೂ ನಾನು ಕೂಡಾ ಮಹಿಳಾ ಚಾಲಕಿಯರಿರುವ ಕ್ಯಾಬ್ ಗಳಲ್ಲಿಯೇ ಓಡಾಡುತ್ತೇನೆʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಕೆಯನ್ನು ಯಾರು ಕಾಪಾಡುತ್ತಾರೆ?ʼ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪೂರ್ಣಿಮಾ ʼಒಳ್ಳೆಯ ಪ್ರಶ್ನೆ, ನನಗೂ ಅದೇ ಪ್ರಶ್ನೆ ಮೂಡಿತ್ತು… ಆದರೆ ಆಕೆಯ ಆತ್ಮವಿಶ್ವಾನ ಮತ್ತು ಆಕೆ ನನ್ನ ಬ್ಯಾಗ್ ಗಳನ್ನು ಎತ್ತಿದ ರೀತಿಯನ್ನು ಕಂಡು ಆಕೆ ಯಾರಿಗೂ ಕಮ್ಮಿಯಿಲ್ಲ ಎಂದು ಅರಿವಾಯಿತುʼ ಎಂಬ ಉತ್ತರವನ್ನು ನೀಡಿದ್ದಾರೆ. ಇನ್ನೂ ಅನೇಕರು ಈ ದಿಟ್ಟ ಮಹಿಳೆಯನ್ನು ಪ್ರಶಂಸಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ