ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ: ನಾಲ್ವರು ಮಹಿಳೆಯರ ರಕ್ಷಣೆ, 10 ಪುರುಷರು ವಶಕ್ಕೆ
ಒಡನಾಡಿ ಸಂಸ್ಥೆ ಮತ್ತು ಪೊಲೀಸರ ಜಂಟಿ ಕಾರ್ಯಚರಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೊಸಪೇಟೆಯ ರಾಣಿಪೇಟೆಯ ವೆಂಕಟೇಶ್ವರ ಲಾಡ್ಜ್ ಮೇಲೆ ದಾಳಿ ಮಾಡಲಾಗಿದೆ. ನಾಲ್ವರು ಮಹಿಳೆಯರ ರಕ್ಷಣೆ ಮಾಡಿದ್ದು, 10 ಪುರುಷರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಟೌನ್ ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ.
ವಿಜಯನಗರ, ಜನವರಿ 11: ವೇಶ್ಯಾವಾಟಿಕೆ (prostitution) ನಡೆಸುತ್ತಿದ್ದ ಹೊಸಪೇಟೆಯ ರಾಣಿಪೇಟೆಯ ವೆಂಕಟೇಶ್ವರ ಲಾಡ್ಜ್ ಮೇಲೆ ಒಡನಾಡಿ ಸಂಸ್ಥೆ ಮತ್ತು ಪೊಲೀಸರ ಜಂಟಿ ದಾಳಿ ಮಾಡಿದ್ದಾರೆ. ಕೋಲ್ಕತ್ತಾ ಮೂಲದ ಇಬ್ಬರು, ಗುಂತಕಲ್, ಕೂಡ್ಲಿಗಿ ಮೂಲದ ಒಟ್ಟು ನಾಲ್ವರು ಮಹಿಳೆಯ ರಕ್ಷಣೆ ಮಾಡಿದ್ದು, ವಿಜಯನಗರ, ಕೋಲ್ಕತ್ತಾ ಮೂಲದ 10 ಪುರುಷರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಟೌನ್ ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ.
ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ: ಸಿಸಿಬಿ ದಾಳಿ
ಬೆಂಗಳೂರು: ನಗರದ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಸುಮಾರು 4 ಗಂಟೆ ಕಾಲ ನಡೆದ ಪರಿಶೀಲನೆ ವೇಳೆ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿತ್ತು. ಹೊರ ರಾಜ್ಯ, ವಿದೇಶದ ಯುವತಿಯರನ್ನು ಕರೆಸಿ ದಂಧೆ ನಡೆಸುತ್ತಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದೆಯಾ ವೇಶ್ಯಾವಾಟಿಕೆ? ಸ್ಪಾ ವಿರುದ್ಧ ಮಹಿಳಾ ಸಿಬ್ಬಂದಿಯಿಂದಲೇ ದೂರು
ಬಹುಮಹಡಿ ಕಟ್ಟಡದ 1 ಮತ್ತು 6ನೇ ಪ್ಲೋರ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಸಿಸಿಬಿ ಮಹಿಳಾ ಸಂರಕ್ಷಣಾ ದಳದ ದಾಳಿ ವೇಳೆ 44 ಮಹಿಳೆಯರು ಕಂಡುಬಂದಿದ್ದು, ಎಲ್ಲರನ್ನ ರಕ್ಷಿಸಲಾಗಿತ್ತು.
ಇನ್ನೂ 34 ಆರೋಪಿಗಳು ವಶಕ್ಕೆ ಪಡೆಯಲಾಗಿತ್ತು. ನಿರ್ವಾಣ ಸ್ಪಾ ಅನ್ನು ಅನಿಲ್ ಎಂಬಾತ ನಡೆಸುತ್ತಿದ್ದ. ಅದು ಹೊರ ರಾಜ್ಯದಿಂದ ಬಂದು ಸ್ಪಾ ನಡೆಸುತ್ತಿದ್ದನಂತೆ. ಆದರೆ ಈಗ ಆರೋಪಿ ಅನಿಲ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದ ವೇಳೆ ಸಿಕ್ತು ನಕಲಿ ದಾಖಲೆ ಸೃಷ್ಟಿಸುತ್ತಿದ್ದವರ ಸುಳಿವು !
ನಗದರ ಮತ್ತೊಂದು ಸ್ಪಾ ವಿರುದ್ಧ ಮಹಿಳಾ ಸಿಬ್ಬಂದಿಯಿಂದಲೇ ನಿನ್ನೆ ದೂರು ನೀಡಲಾಗಿದೆ. ಔಟ್ ಲೆಟ್ ಮ್ಯಾನೇಜರ್ ರಂಜಿತಾ ಎಂಬುವವರಿಂದ ವೀರಣ್ಣ ಪಾಳ್ಯದಲ್ಲಿರುವ ತತ್ವಾ ಸ್ಪಾ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಸ್ಪಾ ಸೌತ್ ಇಂಡಿಯಾ ರೀಜನಲ್ ಮುಖ್ಯಸ್ಥ ಪ್ರವೀಣ್ ಮತ್ತು ಬೆಂಗಳೂರು ಮುಖ್ಯಸ್ಥ ರಿಶೈ ವಿರುದ್ಧ ದೂರು ನೀಡಿದ್ದು, ಬರುವ ಗ್ರಾಹಕರಿಗೆ ಹೆಚ್ಚಿನ ಸರ್ವಿಸ್ ಕೊಡುವಂತೆ, ಅಲ್ಲದೆ ಹುಡುಗಿಯರನ್ನ ಕಳುಹಿಸಿಕೊಡುವಂತೆ ಒತ್ತಡ ಆರೋಪ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.