ಮಹಿಳಾ ಸಾಫ್ಟ್​​ವೇರ್ ಇಂಜಿನಿಯರ್ ಗೆ ಭಾರೀ ಪಂಗನಾಮ ಹಾಕಿದ ಸೈಬರ್ ವಂಚಕರು

ಮಹಿಳಾ ಸಾಫ್ಟ್​​ವೇರ್ ಕಡೆಯಿಂದ ಹಣ ಇನ್ವೆಸ್ಟ್​​ ಮಾಡಿಸಿಕೊಂಡ ಸೈಬರ್ ವಂಚಕರು, ರಿಟರ್ನ್ ಹಣ ನೀಡದೆ ವಂಚಿಸಿದ್ದಾರೆ. ಇದರಿಂದ ನ್ಯಾಯ ಕೊಡಿಸುವಂತೆ ಇಂಜಿನಿಯರ್ ಶಾಲಿನಿ ಆರ್. ಅವರು ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳಾ ಸಾಫ್ಟ್​​ವೇರ್ ಇಂಜಿನಿಯರ್ ಗೆ ಭಾರೀ ಪಂಗನಾಮ ಹಾಕಿದ ಸೈಬರ್ ವಂಚಕರು
ಮಹಿಳಾ ಸಾಫ್ಟ್​​ವೇರ್ ಇಂಜಿನಿಯರ್ ಗೆ ಭಾರೀ ಪಂಗನಾಮ ಹಾಕಿದ ಸೈಬರ್ ವಂಚಕರು
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Jan 11, 2024 | 7:09 PM

ಚಿಕ್ಕಬಳ್ಳಾಪುರ, ಜನವರಿ 11: ಪ್ರತಿಷ್ಠಿತ ಸಾಫ್ಟ್​​ವೇರ್ ಕಂಪನಿಯೊಂದರಲ್ಲಿ ಸಾಫ್ಟ್​​ ವೇರ್ ಇಂಜನಿಯರ್ ಆಗಿರುವ ಮಹಿಳೆಯೊಬ್ಬರು ಸೈಬರ್ ವಂಚಕರನ್ನು ನಂಬಿ 2,32,600 ರೂ. ಹಣ ಕಳೆದುಕೊಂಡಿರುವ ಪ್ರಕರಣ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕಟಮಾಚನಹಳ್ಳಿ ಗ್ರಾಮದ ನಿವಾಸಿ ಶಾಲಿನಿ ಎನ್ನುವವರು ಟಾಟಾ ಕನ್ಸಲ್ಟೆನ್ಸಿಯಲ್ಲಿ ಸಾಫ್ಟ್​​ವೇರ್ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗೂಗಲ್‍ನಲ್ಲಿ ರಿವ್ಯೂ ಮಾಡಲು ಒಂದು ರಿವ್ಯೂಗೆ 50 ರೂ.ಗಳಂತೆ ನೀಡುತ್ತಾರೆಂದು ಅಪರಿಚಿತ ಸೈಬರ್ ವಂಚಕರು ನಂಬಿಸಿದ್ದಾರೆ. ನಂತರ ಅವರು ಕಳುಹಿಸಿದ ಲಿಂಕ್‍ ಮೂಲಕ ಪಾರ್ಟ್‍ಟೈಮ್ ಜಾಬ್ ಮಾಡಲು ಹೋಗಿ ಬರೋಬ್ಬರಿ 2,32,600 ರೂ. ಹಣ ಇನ್ವೆಸ್ಟ್​ ಮಾಡಿದ್ದಾರೆ.