ಮಾಜಿ ರೂಪದರ್ಶಿ ದಿವ್ಯಾ ಅಹುಜಾ ಹತ್ಯೆ ಪ್ರಕರಣ: ಶವವನ್ನು ನದಿಗೆ ಎಸೆದಿದ್ದ ಆರೋಪಿಯ ಬಂಧನ
ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಜಿ ಮಾಡೆಲ್‌ನ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ ಜತೆ ವಿಲೇವಾರಿ ಮಾಡಿದ್ದ ಬಾಲ್ರಾಜ್ ಗಿಲ್ ಗುರುವಾರ ಸಂಜೆ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.
ಮಾಜಿ ರೂಪದರ್ಶಿ ದಿವ್ಯಾ ಪಹುಜಾ(Divya Pahuja) ಕೊಲೆ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಜಿ ಮಾಡೆಲ್‌ನ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ ಜತೆ ವಿಲೇವಾರಿ ಮಾಡಿದ್ದ ಬಾಲ್ರಾಜ್ ಗಿಲ್ ಗುರುವಾರ ಸಂಜೆ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.
ರವಿ ಬಾಂದ್ರಾ ಪರಾರಿಯಾಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 2 ರಂದು ದಿವ್ಯಾ ಅವರನ್ನು ಐದು ಜನರು ಹೋಟೆಲ್ ಸಿಟಿ ಪಾಯಿಂಟ್‌ಗೆ ಕರೆದೊಯ್ದು ಕೊಠಡಿ ಸಂಖ್ಯೆ 111 ರೊಳಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮಾಜಿ ಮಾಡೆಲ್‌ನ ದೇಹ ಇನ್ನೂ ಪತ್ತೆಯಾಗಿಲ್ಲ.
ಬಿಎಂಡಬ್ಲ್ಯು ಕಾರಿನಲ್ಲಿ ಶವವನ್ನು ಕೊಂಡೊಯ್ದಿದ್ದ ಬಾಲರಾಜ್ ಸಿಂಗ್ ಮತ್ತು ರವಿ ಬಂಗಾ ಅದನ್ನು ಘಗ್ಗರ್ ನದಿಯಲ್ಲಿ ಎಸೆದಿರಬಹುದು ಎಂಬ ಅನುಮಾನ ಪೊಲೀಸರಿಗೆ ಇದೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ತಂಡವು ಡೈವರ್‌ಗಳ ಸಹಾಯದಿಂದ ಮೃತದೇಹವನ್ನು ನದಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಗುರ್ಗಾಂವ್ ರೂಪದರ್ಶಿಯ ದಿವ್ಯಾ ಪಹುಜಾ ಕೊಲೆ; ಮೃತದೇಹಕ್ಕಾಗಿ ಪೊಲೀಸ್ ಶೋಧ
ಪ್ರಕರಣದ ಪ್ರಮುಖ ಆರೋಪಿಗಳಾದ ಅಭಿಜಿತ್ ಸಿಂಗ್, ಹೇಮರಾಜ್ ಮತ್ತು ಓಂಪ್ರಕಾಶ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಲಾಗಿದೆ.
ಮೂಲಗಳ ಪ್ರಕಾರ ಪಹುಜಾ ತನ್ನ ಫೋನ್‌ನಲ್ಲಿ ಅಭಿಜಿತ್ ಸಿಂಗ್ ಅವರ ಕೆಲವು ಅಶ್ಲೀಲ ವೀಡಿಯೊಗಳನ್ನು ಹೊಂದಿದ್ದರು, ಅದನ್ನು ಅಳಿಸಲು ಅವರು ಕೇಳಿದರು, ಆದರೆ ಆಕೆ ನಿರಾಕರಿಸಿದ್ದಳು.
ಅಭಿಜೀತ್ ಸಿಂಗ್ ಶವದೊಂದಿಗೆ ಕಾರನ್ನು ಹೋಟೆಲ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿ ಬಲರಾಜ್ ಗಿಲ್‌ಗೆ ನೀಡಿದ್ದ, ಪಂಜಾಬ್‌ನ ಪಟಿಯಾಲಾದ ಬಸ್ ನಿಲ್ದಾಣದಲ್ಲಿ ಗುರ್ಗಾಂವ್ ಪೊಲೀಸರು ಜನವರಿ 5 ರಂದು ಬಿಎಂಡಬ್ಲ್ಯು ಕಾರನ್ನು ಪತ್ತೆ ಮಾಡಿದ್ದರು.
ಗುರುಗ್ರಾಮದ ಭೂಗತ ಪಾತಕಿ ಸಂದೀಪ್ ಗಡೋಲಿ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ದಿವ್ಯಾ ಪಹುಜಾಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಸ್ವಲ್ಪ ದಿನಗಳ ಹಿಂದಷ್ಟೇ ಜಾಮೀನಿನ ಮೂಲಕ ಹೊರಬಂದಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಹೋಟೆಲ್ ಮಾಲೀಕ ಅಭಿಜಿತ್, ಕೆಲಸಗಾರರಾದ ಹೇಮರಾಜ್, ಓಂ ಪ್ರಕಾಶ್ನನ್ನು ಬಂಧಿಸಲಾಗಿದೆ.
ಗುರುಗ್ರಾಮದ ಭೂಗತ ಪಾತಕಿ ಗಡೋಲಿಯನ್ನು 2016 ಫೆಬ್ರವರಿ 6 ರಂದು ಗುರುಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಗೈಯಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ