ಬಾಬರ್ ಸಮಾಧಿ ಬಳಿ ರಾಹುಲ್ ಗಾಂಧಿ; ನೀವು ಹಿಂದೂಗಳನ್ನು ಏಕೆ ಇಷ್ಟು ದ್ವೇಷಿಸುತ್ತೀರಿ ಎಂದ ಬಿಜೆಪಿ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಫೋಟೊ ಟ್ವೀಟ್ ಮಾಡಿದ್ದು,2005 ರಲ್ಲಿ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಮೂರು ತಲೆಮಾರುಗಳು , ಅಫ್ಘಾನಿಸ್ತಾನದ ಬಾಬರ್ ಸಮಾಧಿಗೆ ಭೇಟಿ ನೀಡಿದರು. ರಾಮ ಲಲ್ಲಾ ಮೇಲೆ ಏಕೆ ಇಷ್ಟೊಂದು ದ್ವೇಷ? ನೀವು ಹಿಂದೂಗಳನ್ನು ಏಕೆ ಇಷ್ಟು ದ್ವೇಷಿಸುತ್ತೀರಿ? ಎಂದು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಬರೆದಿದ್ದಾರೆ.

ಬಾಬರ್ ಸಮಾಧಿ ಬಳಿ ರಾಹುಲ್ ಗಾಂಧಿ; ನೀವು ಹಿಂದೂಗಳನ್ನು ಏಕೆ ಇಷ್ಟು ದ್ವೇಷಿಸುತ್ತೀರಿ ಎಂದ ಬಿಜೆಪಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Jan 11, 2024 | 9:00 PM

ದೆಹಲಿ ಜನವರಿ 11: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ram mandir)  ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವನ್ನು ನಿರಾಕರಿಸಿದ ಕಾಂಗ್ರೆಸ್ (Congress)  ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಇಂದು (ಗುರುವಾರ) ಬಿಜೆಪಿ ನಾಯಕರು ಅಫ್ಘಾನಿಸ್ತಾನದ ಬಾಬರ್ ಸಮಾಧಿ ಬಳಿ ರಾಹುಲ್ ಗಾಂಧಿ (Rahul Gandhi) ನಿಂತಿರುವ ಹಳೇ ಫೋಟೊ ಶೇರ್ ಮಾಡಿದ್ದು, ಗಾಂಧಿಗಳ ಮೂರು ತಲೆಮಾರಿನವರು ಆ ಸ್ಥಳಕ್ಕೆ ಭೇಟಿ ನೀಡಿದ್ದು ಅವರ ದ್ವೇಷ ಹಿಂದೂಗಳಿಗೆ ಮಾತ್ರ ಮೀಸಲಾಗಿದೆ ಎಂದಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಫೋಟೊ ಟ್ವೀಟ್ ಮಾಡಿದ್ದು,2005 ರಲ್ಲಿ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಮೂರು ತಲೆಮಾರುಗಳು , ಅಫ್ಘಾನಿಸ್ತಾನದ ಬಾಬರ್ ಸಮಾಧಿಗೆ ಭೇಟಿ ನೀಡಿದರು. ರಾಮ ಲಲ್ಲಾ ಮೇಲೆ ಏಕೆ ಇಷ್ಟೊಂದು ದ್ವೇಷ? ನೀವು ಹಿಂದೂಗಳನ್ನು ಏಕೆ ಇಷ್ಟು ದ್ವೇಷಿಸುತ್ತೀರಿ? ಎಂದು ಬರೆದಿದ್ದಾರೆ.

ಇದಕ್ಕಿಂತ ಮುಂಚೆ ಇನ್ನೊಂದು ಟ್ವೀಟ್​​ನಲ್ಲಿ  ಶರ್ಮಾ ಅವರು, ಕಾಂಗ್ರೆಸ್ ತನ್ನ ಪಾಪಗಳನ್ನು ಕಡಿಮೆ ಮಾಡಿಕೊಳ್ಳುವ ಸುವರ್ಣಾವಕಾಶವನ್ನು ಕಳೆದುಕೊಂಡಿದೆ. ಅವರು ಕಾಂಗ್ರೆಸ್ ಆಹ್ವಾನಕ್ಕೆ ಅರ್ಹರಲ್ಲ ಎಂದಿದ್ದಾರೆ.ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತಮ್ಮ ನಾಯಕತ್ವದ ಆಹ್ವಾನವನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ವಿಎಚ್‌ಪಿ ತನ್ನ ಪಾಪವನ್ನು ಕಡಿಮೆ ಮಾಡಲು ಸುವರ್ಣಾವಕಾಶವನ್ನು ನೀಡಿದೆ. ಆದಾಗ್ಯೂ, ಮೊದಲಿನಿಂದಲೂ ರಾಮಮಂದಿರದ ವಿರುದ್ಧ ತಮ್ಮ ಅಭಿಪ್ರಾಯಗಳಿಗಾಗಿ ಅವರು ಅಂತಹ ಆಹ್ವಾನಕ್ಕೆ ಅರ್ಹರಲ್ಲ ಎಂದಿದ್ದಾರೆ ಶರ್ಮಾ.

ಈ ಆಹ್ವಾನವನ್ನು ಸ್ವೀಕರಿಸುವ ಮೂಲಕ, ಅವರು ಹಿಂದೂ ಸಮಾಜಕ್ಕೆ ಸಾಂಕೇತಿಕವಾಗಿ ಕ್ಷಮೆಯಾಚಿಸಬಹುದಾಗಿತ್ತು ಎಂದಿದ್ದಾರೆ ಶರ್ಮಾ.  ಸೋಮನಾಥ ದೇವಾಲಯದ ಪುನರ್ ನಿರ್ಮಾಣದ ವಿಷಯವನ್ನೂ ಪ್ರಸ್ತಾಪಿಸಿದ ಅಸ್ಸಾಂ ಸಿಎಂ, ಆದಾಗ್ಯೂ, ಪಂಡಿತ್ ನೆಹರು ಸೋಮನಾಥ ದೇಗುಲದಲ್ಲಿ ಮಾಡಿದಂತೆ, ಕಾಂಗ್ರೆಸ್ ನಾಯಕತ್ವವು ರಾಮ ಮಂದಿರದ ವಿಷಯದಲ್ಲಿಯೂ ಮಾಡಿದೆ. ಇತಿಹಾಸವು ಅವರನ್ನು ಹಿಂದೂ ವಿರೋಧಿ ಪಕ್ಷವೆಂದು ನಿರ್ಣಯಿಸುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಆಹ್ವಾನಕ್ಕೆ ಕಾಂಗ್ರೆಸ್ ಅರ್ಹರಲ್ಲ: ಹಿಮಂತ ಬಿಸ್ವ ಶರ್ಮಾ

ಕಾಂಗ್ರೆಸ್ ಬುಧವಾರ ಅಯೋಧ್ಯೆಯಲ್ಲಿ ನಡೆಯುವ ಸಮಾರಂಭಕ್ಕೆ ತಾವು ಬರುವುದಿಲ್ಲ ಎಂದು ಹೇಳಿದ್ದಾರೆ ರಾಮಮಂದಿರ ಉದ್ಘಾಟನಾ ರ್ಯಕ್ರಮಕ್ಕೆ ಆಹ್ವಾನಿತರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರು ಇದು ‘ಸ್ಪಷ್ಟವಾಗಿ ಬಿಜೆಪಿ/ಆರ್‌ಎಸ್‌ಎಸ್ ಕಾರ್ಯಕ್ರಮ’ ಎಂಬ ಕಾರಣಕ್ಕೆ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಆಹ್ವಾನ ತಿರಸ್ಕರಿಸಿದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಗ್ದಾಳಿ ನಡೆಯುತ್ತಿದ್ದು, ಬಿಜೆಪಿಯು ಕಾಂಗ್ರೆಸ್ ಅನ್ನು ‘ಹಿಂದೂ ವಿರೋಧಿ’ ಎಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:46 pm, Thu, 11 January 24