ಗಿನ್ನೆಸ್​​ ವಿಶ್ವ ದಾಖಲೆ ಪುಟ ಸೇರಿದ ಅಮೃತಸರದಲ್ಲಿ ತಯಾರಿಸಿದ 37 ಕೆಜಿಯ ಪರಾಠ

ವಿಶೇಷವೆಂದರೆ ಈ ಪರಾಠವನ್ನು ತಯಾರಿಸಲು 510 ಅಡಿಯ ಎರಡು ಗ್ರಿಲ್‌ಗಳನ್ನು ದೆಹಲಿಯಿಂದ ವಿಶೇಷವಾಗಿ ಸಿದ್ಧಪಡಿಸಿ ತರಲಾಗಿತ್ತು. ತಾಜ್ ಹೋಟೆಲ್‌ನ ಎಂಟು ಬಾಣಸಿಗರು ಸೇರಿ 20 ಬರ್ನರ್‌ಗಳ ಗ್ಯಾಸ್ ಸ್ಟೌವ್ ಹಾಗೂ 22 ಕೆಜಿಯ ಎರಡು ಸಿಲಿಂಡರ್‌ಗಳನ್ನು ಬಳಸಿ ಈ ಪರಾಠ ತಯಾರಿಸಲಾಗಿದೆ. ಏಳು ಕ್ವಿಂಟಾಲ್‌ಗಿಂತ ಹೆಚ್ಚು ಹಿಟ್ಟನ್ನು ಬಳಸಲಾಗಿದೆ.

ಗಿನ್ನೆಸ್​​ ವಿಶ್ವ ದಾಖಲೆ ಪುಟ ಸೇರಿದ ಅಮೃತಸರದಲ್ಲಿ ತಯಾರಿಸಿದ  37 ಕೆಜಿಯ ಪರಾಠ
Guinness World Record
Follow us
|

Updated on:Feb 29, 2024 | 6:39 PM

ಪಂಜಾಬ್ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮೊದಲ ರಂಗಾ ಪಂಜಾಬ್ ಮೇಳದ ಆರನೇ ದಿನದಂದು ವಿಶ್ವದ ಅತಿ ದೊಡ್ಡ ಪರಾಠವನ್ನು ತಯಾರಿಸಲಾಯಿತು. ತಾಜ್ ಹೋಟೆಲ್‌ನ ಬಾಣಸಿಗರ ತಂಡ ಈ ಪರಾಟವನ್ನು ಸಿದ್ಧಪಡಿಸಿದ್ದು, ಇದರ ಒಟ್ಟು ತೂಕ 37.5 ಕೆ.ಜಿ. ಇದರೊಂದಿಗೆ ವಿಶ್ವದ ಅತಿ ದೊಡ್ಡ ಪರಾಠಾ ತಯಾರಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.

ವಿಶೇಷವೆಂದರೆ ಈ ಪರಾಠವನ್ನು ತಯಾರಿಸಲು 510 ಅಡಿಯ ಎರಡು ಗ್ರಿಲ್‌ಗಳನ್ನು ದೆಹಲಿಯಿಂದ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ತಾಜ್ ಹೋಟೆಲ್‌ನ ಎಂಟು ಬಾಣಸಿಗರು ಸೇರಿ 20 ಬರ್ನರ್‌ಗಳ ಗ್ಯಾಸ್ ಸ್ಟೌವ್ ಹಾಗೂ 22 ಕೆಜಿಯ ಎರಡು ಸಿಲಿಂಡರ್‌ಗಳನ್ನು ಬಳಸಿ ತಯಾರಿಸಲಾಗಿದೆ. ಏಳು ಕ್ವಿಂಟಾಲ್‌ಗಿಂತ ಹೆಚ್ಚು ಹಿಟ್ಟನ್ನು ಬಳಸಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡ ನಂತರ, ಮೇಳಕ್ಕೆ ಬಂದ ಜನರಿಗೆ ಈ ಪರಾಠವನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಮೃತಸರ ಘನಶ್ಯಾಮ್ ಥೋರಿ ಅವರು ಇಡೀ ತಂಡವನ್ನು ಅಭಿನಂದಿಸಿ, ಸರ್ಕಾರವು ದೇಶ ಮತ್ತು ಪ್ರಪಂಚದಾದ್ಯಂತ ತನ್ನ ಪರಂಪರೆಯನ್ನು ಹರಡಲು ಪ್ರಯತ್ನಗಳನ್ನು ಕೈಗೊಂಡಿದ್ದು, ಈ ಮೂಲಕ ಅರ್ಥಪೂರ್ಣ ಫಲಿತಾಂಶಗಳು ಸಹ ಹೊರಬಂದಿದ್ದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Thu, 29 February 24

ತಾಜಾ ಸುದ್ದಿ