ರಾಮನಿಗಿಂತ ರಾವಣ ಹೆಚ್ಚು ಕಲಿತಿದ್ದ; ರಾಮಚರಿತಮಾನಸವನ್ನು ಟೀಕಿಸಿದ ಜಿತನ್ ರಾಮ್ ಮಾಂಝಿ

|

Updated on: Mar 17, 2023 | 10:24 PM

ರಾಮನಿಗಿಂತ ರಾವಣನ ಮೇಲು ಎಂದು ನೀವು ಯಾವ ಆಧಾರದ ಮೇಲೆ ಹೇಳಿದ್ದು ಎಂದು ಕೇಳಿದಾಗ ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥರೂ ಆಗಿರುವ ಮಾಂಝಿ, ಇದು ವೈಯಕ್ತಿಕ ವ್ಯಾಖ್ಯಾನಕ್ಕೆ ಒಳಪಟ್ಟಿದೆ ಎಂದು ಹೇಳಿದರು

ರಾಮನಿಗಿಂತ ರಾವಣ ಹೆಚ್ಚು ಕಲಿತಿದ್ದ; ರಾಮಚರಿತಮಾನಸವನ್ನು ಟೀಕಿಸಿದ ಜಿತನ್ ರಾಮ್ ಮಾಂಝಿ
ಜಿತನ್ ರಾಮ್ ಮಾಂಝಿ
Follow us on

ಬಿಹಾರದ (Bihar) ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ (Jitan Ram Manjhi)ರಾಮಚರಿತಮಾನಸ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ವಿವಾದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಂಝಿ, ರಾಮ ಮತ್ತು ರಾವಣ ಪೌರಾಣಿಕ ಪಾತ್ರಗಳಾಗಿದ್ದರೂ, ರಾವಣನು ರಾಮನಿಗಿಂತ ‘ಕರ್ಮಕಾಂಡ’ (ಆಚರಣೆಗಳು) ನಲ್ಲಿ ಹೆಚ್ಚು ಪಾರಂಗತನಾಗಿದ್ದ ಎಂದಿದ್ದಾರೆ. ತುಳಸಿದಾಸರು ಬರೆದ ರಾಮಾಯಣದ ಜನಪ್ರಿಯ ಆವೃತ್ತಿಯಾದ ರಾಮಚರಿತಮಾನಸದಲ್ಲಿ (Ramcharitmanas) ಕೆಲವು ಪದ್ಯಗಳು ಜಾತಿಯನ್ನು ಅವಹೇಳನ ಮಾಡಿದೆ ಎಂದು ರಾಷ್ಟ್ರೀಯ ಜನತಾ ದಳದ ನಾಯಕ ಟೀಕೆ ಮಾಡಿದ ನಂತರ ವಿವಾದ ಭುಗಿಲೆದ್ದಿದೆ. ರಾಜ್ಯದಲ್ಲಿನ ‘ಮಹಾಘಟಬಂಧನ್’ ಸರ್ಕಾರದ ಭಾಗವಾಗಿರುವ ಮಾಂಝಿ ರಾಮನಿಗೆ ಯಾವುದೇ ತೊಂದರೆಗಳು ಎದುರಾದಾಗ, ಅವನಿಗೆ ಅತೀಂದ್ರಿಯ ಶಕ್ತಿಯ ಬೆಂಬಲವಿತ್ತು ಆದರೆ ಅದು ರಾವಣನಿಗೆ ಇರಲಿಲ್ಲ ಎಂದಿದ್ದಾರೆ.

ರಾಮನಿಗಿಂತ ರಾವಣನ ಮೇಲು ಎಂದು ನೀವು ಯಾವ ಆಧಾರದ ಮೇಲೆ ಹೇಳಿದ್ದು ಎಂದು ಕೇಳಿದಾಗ ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥರೂ ಆಗಿರುವ ಮಾಂಝಿ, ಇದು ವೈಯಕ್ತಿಕ ವ್ಯಾಖ್ಯಾನಕ್ಕೆ ಒಳಪಟ್ಟಿದೆ ಎಂದು ಹೇಳಿದರು. ಅತ್ಯಂತ ಪುರಾತನವಾದ ರಾಮಾಯಣವನ್ನು ಬರೆದ ವಾಲ್ಮೀಕಿಯನ್ನು ತುಳಸಿದಾಸರಂತೆ ಪೂಜಿಸಲಾಗಲಿಲ್ಲ ಏಕೆ ಎಂದು ನಾವು ಯೋಚಿಸಬೇಕು.

ಸಾಮಾಜಿಕ ತಾರತಮ್ಯವನ್ನು ಮನ್ನಿಸುವ ವಿವಾದಾತ್ಮಕ ಭಾಗಗಳನ್ನು ಪುಸ್ತಕದಿಂದ ತೆಗೆದುಹಾಕಬೇಕು ಎಂದು ಮಾಂಝಿ ಹೇಳಿದ್ದಾರೆ. ತಮ್ಮ ‘ಕಾಲ್ಪನಿಕ ವ್ಯಕ್ತಿ’ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಾಂಝಿ, “ರಾಮನು ಕಾಲ್ಪನಿಕ ವ್ಯಕ್ತಿಯೇ ಹೊರತು ಐತಿಹಾಸಿಕ ವ್ಯಕ್ತಿಯಲ್ಲ ಎಂದು ನಾನು ಯಾವಾಗಲೂ ನಂಬಿದ್ದೇನೆ. ಹೀಗೆ . ಹೇಳಿದವರಲ್ಲಿ ನಾನು ಮೊದಲಿಗನಲ್ಲ. ಇದೇ ರೀತಿಯ ಅಭಿಪ್ರಾಯಗಳನ್ನು ರಾಹುಲ್ ಸಾಂಕೃತ್ಯಾಯನ್ ಮತ್ತು ಲೋಕಮಾನ್ಯ ತಿಲಕ್ ಅವರಂತಹ ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಬ್ರಾಹ್ಮಣರಾಗಿದ್ದರಿಂದ ಯಾರೂ ಏನೂ ಅಂದಿಲ್ಲ. ನಾನು ಅದನ್ನು ಹೇಳಿದಾಗ ಜನರಿಗೆ ಹಿಡಿಸಿಲ್ಲ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ