ಚಲಿಸುತ್ತಿರುವ ವಂದೇ ಭಾರತ್ ರೈಲು ಹತ್ತಲು ಹೋಗಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಆರ್​ಪಿಎಫ್ ಸಿಬ್ಬಂದಿ

ಚಲಿಸುತ್ತಿರುವ ವಂದೇ ಭಾರತ್ ರೈಲನ್ನು ಹತ್ತಲು ಹೋಗಿ ಪ್ರಯಾಣಿಕರೊಬ್ಬರು ಆಯತಪ್ಪಿ ಬಿದ್ದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವ ವಂದೇ ಭಾರತ್ ರೈಲನ್ನು ಹತ್ತಲು ಪ್ರಯತ್ನಿಸಿದ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಜವಾನ್ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ.

ಚಲಿಸುತ್ತಿರುವ ವಂದೇ ಭಾರತ್ ರೈಲು ಹತ್ತಲು ಹೋಗಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಆರ್​ಪಿಎಫ್ ಸಿಬ್ಬಂದಿ
ವಂದೇ ಭಾರತ್ ರೈಲು
Image Credit source: Wikipedia

Updated on: Oct 11, 2023 | 11:04 AM

ಚಲಿಸುತ್ತಿರುವ ವಂದೇ ಭಾರತ್ ರೈಲನ್ನು ಹತ್ತಲು ಹೋಗಿ ಪ್ರಯಾಣಿಕರೊಬ್ಬರು ಆಯತಪ್ಪಿ ಬಿದ್ದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವ ವಂದೇ ಭಾರತ್ ರೈಲನ್ನು ಹತ್ತಲು ಪ್ರಯತ್ನಿಸಿದ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಜವಾನ್ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ.

ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇಡೀ ಘಟನೆಯನ್ನು ರೆಕಾರ್ಡ್​ ಮಾಡಿದ್ದಾರೆ. ಅಕ್ಟೋಬರ್ 10ರಂದು ಮಂಗಳವಾರ ಹೌರಾ-ಪುರಿ ವಂದೇ ಭಾರತ್ ಎಕ್ಸ್​ಪ್ರೆಸ್ ಹೌರಾ ನಿಲ್ದಾಣದಿಂದ ಹೊರಡುತ್ತಿರುವಾಗ ಘಟನೆ ಸಂಭವಿಸಿದೆ.

ಪ್ರಯಾಣಿಕರೊಬ್ಬರು ಹೊರಟಿದ್ದ ರೈಲಿನ ಹಿಂದೆ ಓಡಿ ರೈಲು ವ್ಯವಸ್ಥಾಪಕರ ಕ್ಯಾಬಿನ್ ಮೂಲಕ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಆಯ ತಪ್ಪಿ ರೈಲು ಹಾಗೂ ಪ್ಲಾಟ್​ಫಾರ್ಮ್​ ನಡುವೆ ಸಿಲುಕಿಕೊಂಡಿದ್ದರು. ತಕ್ಷಣ ಎಚ್ಚೆತ್ತ ಆರ್​ಪಿಎಫ್ ಸಿಬ್ಬಂದಿ ಅವರತ್ತ ಓಡಿಬಂದು ಅವರನ್ನು ಮೇಲಕ್ಕೆತ್ತಿದ್ದಾರೆ, ಯಾವುದೇ ಗಂಭೀರ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಮದ್ಯದ ಅಮಲು, ಚಲಿಸುತ್ತಿದ್ದ ರೈಲಿನಲ್ಲಿ ವೃದ್ಧ ದಂಪತಿ ಮೇಲೆ ಮೂತ್ರ ವಿಸರ್ಜಿಸಿದ ಪ್ರಯಾಣಿಕ

ಈ ವರ್ಷದ ಜನವರಿಯಲ್ಲಿ, ಇದೇ ರೀತಿಯ ಘಟನೆಯಲ್ಲಿ, ಬಿಹಾರದ ಪುರ್ನಿಯಾದಲ್ಲಿ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಜೀವವನ್ನು ಆರ್‌ಪಿಎಫ್ ಸಿಬ್ಬಂದಿಯೊಬ್ಬರು ಉಳಿಸಿದ್ದರು.

ರೈಲಾಗಿರಬಹುದು, ಬಸ್ ಆಗಿರಬಹುದು ನಾವು ಬರುವುದು ಸ್ವಲ್ಪ ತಡವಾಯಿತು ಎಂದಾಗ ಮತ್ತೊಂದು ಬಸ್​ ಅಥವಾ ರೈಲು ಬರುವವರೆಗೆ ಕಾಯಬೇಕು, ಆದರೆ ತಾಳ್ಮೆಯನ್ನು ಕಳೆದುಕೊಂಡು ಯಾವುದೇ ಸಾಹಸಕ್ಕೆ ಕೈಹಾಕಬಾರದು ಅದರಿಂದ ಜೀವಕ್ಕೆ ಅಪಾಯವಾದೀತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ