ರೈಲ್ವೆ ಸ್ಟೇಷನ್​ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?

| Updated By:

Updated on: Jul 30, 2020 | 9:06 PM

ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್​ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್​ ಮಾಡಿರುವ ಘಟನೆ ನಗರದ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ. ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್​ ಸ್ಟೇಷನ್​ ಬಂತೆಂದು ಚಲಿಸುತ್ತಿದ್ದ ಟ್ರೈನ್​ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್​ಫಾರ್ಮ್​ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ […]

ರೈಲ್ವೆ ಸ್ಟೇಷನ್​ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?
Follow us on

ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್​ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್​ ಮಾಡಿರುವ ಘಟನೆ ನಗರದ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ.

ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ
ತಾನು ಇಳಿಯಬೇಕಿದ್ದ ಕಲ್ಯಾಣ್​ ಸ್ಟೇಷನ್​ ಬಂತೆಂದು ಚಲಿಸುತ್ತಿದ್ದ ಟ್ರೈನ್​ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್​ಫಾರ್ಮ್​ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ ಸಿಲುಕಿಕೊಂಡುಬಿಟ್ಟ.

ಇದೇ ವೇಳೆ ಅಲ್ಲೇ ನಿಯೋಜನೆಗೊಂಡಿದ್ದ ರೈಲ್ವೆ ಪೊಲೀಸ್​ ಸಿಬ್ಬಂದಿ ಸಾಹೂ ಮತ್ತು ರಾಜ್ಯ ಪೊಲೀಸ್​ ಸಿಬ್ಬಂದಿ ಸೋಮನಾಥ್​ ಮಹಾಜನ್​ ಇದನ್ನ ಗಮನಿಸಿ ಅವನ ರಕ್ಷಣೆಗೆ ಓಡಿಬಂದರು. ರೈಲ್ವೆ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕನನ್ನ ತಮ್ಮ ಸಮಯಪ್ರಜ್ಞೆಯಿಂದ ಕೂಡಲೇ ಪ್ಲಾಟ್​ಫಾರ್ಮ್​ ಮೇಲೆ ಎಳೆತಂದರು.

Published On - 11:45 am, Wed, 29 July 20