ಹೈದರಾಬಾದ್: ಆಂಧ್ರದ ವಿಶಾಖಪಟ್ಟಣಂ ಜಿಲ್ಲೆಯ ಎಲ್.ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರವನ್ನು ನೀಡುವುದಾಗಿ ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದರು. ಮಾತಿನಂತೆಯೇ ಸಾವನ್ನಪ್ಪಿದವರ ಕುಟುಂಬ ಸದಸ್ಯರಿಗೆ ತಲಾ 1 ಕೋಟಿ ರೂಪಾಯಿಯ ಚೆಕ್ ನೀಡಿದ್ದಾರೆ.
ಮುತ್ತಮ್ ಶೆಟ್ಟಿ ಶ್ರೀನಿವಾಸ ರಾವ್, ಎಂ. ವಿ.ವಿ ಸತ್ಯನಾರಾಯಣ, ಕುರಸಲ ಕಣ್ಣ ಬಾಬು ಮತ್ತು ಧರ್ಮನಾ ಕೃಷ್ಣ ದಾಸ್ ಸೇರಿದಂತೆ ಮಂತ್ರಿಗಳ ಗುಂಪು ಸೋಮವಾರ ದುರಂತಕ್ಕೀಡಾದ ಕುಟುಂಬ ಸದಸ್ಯರಿಗೆ ಜಾರ್ಜ್ ಆಸ್ಪತ್ರೆಯಲ್ಲಿ ಪರಿಹಾರವನ್ನು ಹಸ್ತಾಂತರಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ 30 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು.