ಹಿಂದುತ್ವದ ಹೆಸರಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದ ಮೆಹಬೂಬಾ ಮುಫ್ತಿ; ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ಟೀಕೆ

| Updated By: Lakshmi Hegde

Updated on: Nov 13, 2021 | 4:17 PM

ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಎನ್ನಿಸಿರುವ ಆರ್​ಎಸ್​ಎಸ್​ಗಳು ಹಿಂದುತ್ವವನ್ನು ಎತ್ತಿಹಿಡಿಯುತ್ತಿವೆ ಎಂದು ಜನರು ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ಇವೆರಡೂ ಕೂಡ ಹಿಂದುತ್ವವನ್ನು ಪ್ರಚಾರ ಮಾಡುತ್ತಿಲ್ಲ ಎಂದು ಮುಫ್ತಿ ಹೇಳಿದ್ದಾರೆ.

ಹಿಂದುತ್ವದ ಹೆಸರಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದ ಮೆಹಬೂಬಾ ಮುಫ್ತಿ; ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ಟೀಕೆ
ಮೆಹಬೂಬಾ ಮುಫ್ತಿ
Follow us on

ಕಾಂಗ್ರೆಸ್​ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್​ ತಮ್ಮ ಸನ್​ರೈಸ್​ ಓವರ್ ಅಯೋಧ್ಯಾ ಎಂಬ ಪುಸ್ತಕದಲ್ಲಿ ಹಿಂದುತ್ವವನ್ನು ಉಗ್ರಸಂಘಟನೆಗಳಾದ ಐಸಿಸ್​ ಮತ್ತು ಬೋಕೊ ಹರಾಮ್​ಗೆ ಹೋಲಿಸುವ ಮೂಲಕ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮತ್ತು ಅದರ ಮಾರ್ಗದರ್ಶಕವಾಗಿರುವ ಆರ್​ಎಸ್​ಎಸ್​ ಸಂಘಟನೆಗಳು ಹಿಂದುತ್ವ ಮತ್ತು ಹಿಂದೂವಾದವನ್ನು ಅಪಹರಿಸಿವೆ ಎಂದು ಹೇಳಿದ್ದಾರೆ.

ಬಿಜೆಪಿ ತಾನು ಎಲ್ಲರನ್ನೂ ಒಳಗೊಳ್ಳುವುದಾಗಿ ಹೇಳಿಕೊಳ್ಳುತ್ತದೆ. ಆದರೆ ಈ ಪಕ್ಷ ಸನಾತನ ಧರ್ಮಕ್ಕೆ ವಿರೋಧವಾಗಿದೆ.  ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಎನ್ನಿಸಿರುವ ಆರ್​ಎಸ್​ಎಸ್​ಗಳು ಹಿಂದುತ್ವವನ್ನು ಎತ್ತಿಹಿಡಿಯುತ್ತಿವೆ ಎಂದು ಜನರು ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ಇವೆರಡೂ ಕೂಡ ಹಿಂದುತ್ವವನ್ನು ಪ್ರಚಾರ ಮಾಡುತ್ತಿಲ್ಲ ಎಂದು ಮೆಹಬೂಬಾ ಮುಫ್ತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ, ಸನಾತನ ಧರ್ಮ ಎಂದಿಗೂ ಕೋಮುವಾದವನ್ನು ಸಾರುವುದಿಲ್ಲ. ಆದರೆ ಬಿಜೆಪಿ ಮತ್ತು ಆರ್​ಎಸ್​ಎಸ್​ ಕೋಮುವಾದದ ಕೊಳ್ಳಿ ಇಟ್ಟು ಜನರು ಕಚ್ಚಾಡುವಂತೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಕೋಮುವಾದಿ ಪಕ್ಷಗಳನ್ನು ಖಂಡಿತವಾಗಿಯೂ ಐಸಿಸ್​​ನೊಂದಿಗೆ ಹೋಲಿಸಬಹುದು. ಯಾಕೆಂದರೆ ಅವರೆಲ್ಲ ಧರ್ಮದ ಹೆಸರಿನಲ್ಲಿ ಹಿಂದೂ-ಮುಸ್ಲಿಮರು ಜಗಳವಾಡುವಂತೆ ಮಾಡುವವರು. ಐಸಿಸ್​ ಧರ್ಮದ ಹೆಸರಿನಲ್ಲಿ ಜನರನ್ನು ಕೊಲ್ಲುತ್ತದೆ. ಅದರಂತೆ ನಡೆದುಕೊಳ್ಳುವ ಯಾವುದೇ ಪಕ್ಷ, ಸಂಘಟನೆಗಳೂ ಕೂಡ ಐಸಿಸ್​ನಂತೆಯೇ ಎನ್ನುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಿರಂತರವಾಗಿ ಚಳಿ ಹಾಗೂ ಮಳೆ; ಡೆಂಗ್ಯೂ, ಚಿಕನ್ ಗುನ್ಯಾ ಕೇಸ್ ಹೆಚ್ಚಳ