ಬೆಂಗಳೂರು: ನಿರಂತರವಾಗಿ ಚಳಿ ಹಾಗೂ ಮಳೆ; ಡೆಂಗ್ಯೂ, ಚಿಕನ್ ಗುನ್ಯಾ ಕೇಸ್ ಹೆಚ್ಚಳ
ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 5185 ಕ್ಕೆ ಏರಿಕೆಯಾಗಿದ್ದರೆ, ಚಿಕನ್ ಗುನ್ಯ ಪ್ರಕರಣಗಳ ಸಂಖ್ಯೆ 1621 ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರು ವಲಯ ಮಟ್ಟದಲ್ಲಿ ಡೆಂಗ್ಯೂ 1048, ಚಿಕನ್ ಗುನ್ಯ 53 ಪ್ರಕರಣಗಳು ಕಂಡುಬಂದಿವೆ.
ಬೆಂಗಳೂರು:ನಗರದಲ್ಲಿ ನಿರಂತರವಾಗಿ ಚಳಿ ಹಾಗೂ ಮಳೆಯಿರುವ ಹಿನ್ನಲೆ ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. 10 ದಿನದ ಅಂತರದಲ್ಲಿ ಡೆಂಗ್ಯೂ(Dengue) ಹಾಗೂ ಚಿಕನ್ ಗುನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 5185 ಕ್ಕೆ ಏರಿಕೆಯಾಗಿದ್ದರೆ, ಚಿಕನ್ ಗುನ್ಯ(Chikungunya) ಪ್ರಕರಣಗಳ ಸಂಖ್ಯೆ 1621 ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರು ವಲಯ ಮಟ್ಟದಲ್ಲಿ ಡೆಂಗ್ಯೂ 1048, ಚಿಕನ್ ಗುನ್ಯ 53 ಪ್ರಕರಣಗಳು ಕಂಡುಬಂದಿವೆ.
ಯಾವ ಯಾವ ವಲಯದಲ್ಲಿ ಎಷ್ಟೇಷ್ಟು ಪ್ರಕರಣಗಳು
ಚಿಕನ್ ಗುನ್ಯ ಪ್ರಕರಣಗಳ ಸಂಖ್ಯೆ ಹೀಗಿದೆ
ಒಟ್ಟು ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಶೇಕಡಾ 20 ರಷ್ಟು ಪ್ರಕರಣಗಳು ಏರಿಕೆಯಾಗಿದ್ದು, ಹೆಚ್ಚಿನದಾಗಿ ಮಕ್ಕಳಲ್ಲಿ ಡೆಂಗ್ಯು ಕೇಸ್ಗಳು ಏರಿಕೆಯಾಗುತ್ತಿವೆ. ಹೀಗಾಗಿ ಬಿಬಿಎಂಪಿಯಿಂದ ಡೋರ್ ಟು ಡೋರ್ ಸರ್ವೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದು, ಲಕ್ಷಣಗಳಿರುವರಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗುತ್ತಿದೆ.
ಇದನ್ನೂ ಓದಿ ದೆಹಲಿಯಲ್ಲಿ ಕೊರೊನಾ ಮಧ್ಯೆ ಮಿತಿಮೀರಿದ ಡೆಂಗ್ಯೂ ಪ್ರಕರಣ; 4 ವರ್ಷಗಳಲ್ಲೇ ಅತಿ ಹೆಚ್ಚು ಕೇಸ್ ದಾಖಲು
Karnataka Rain: ರಾಜ್ಯಾದ್ಯಂತ ನ. 16ರವರೆಗೆ ಭಾರೀ ಮಳೆ; ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ
Published On - 4:11 pm, Sat, 13 November 21