ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂಬುದು ಮಿಲಿಟರಿ ಸಂಘಟನೆಯಲ್ಲ. ಕೌಟುಂಬಿಕ ವಾತಾವರಣ ಇರುವ ಒಂದು ಗುಂಪು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಸಂಘವು ಆಲ್ ಇಂಡಿಯಾ ಸಂಗೀತ ಶಾಲೆಯಲ್ಲ. ಇಲ್ಲಿ ಮಾರ್ಷಲ್ ಆರ್ಟ್ಸ್ಗಳೂ ನಡೆಯುತ್ತವೆ. ಹಾಗಂತ ಇದು ಜಿಮ್ ಅಥವಾ ಮಾರ್ಷಲ್ ಆರ್ಟ್ಸ್ ಕ್ಲಬ್ ಅಲ್ಲ. ಕೆಲವೊಮ್ಮ ಆರ್ಎಸ್ಎಸ್ನ್ನು ಪ್ಯಾರಾಮಿಲಿಟರಿ ಸಂಘಟನೆ ಎನ್ನಲಾಗುತ್ತದೆ. ಆದರೆ ಖಂಡಿತ ಇದು ಮಿಲಿಟರಿ ಆರ್ಗನೈಸೇಶನ್ ಅಲ್ಲ. ನಮ್ಮ ಸಂಘವೆಂದರೆ ಕೌಟುಂಬಿಕ ವಾತಾವರಣವಿರುವ ಒಂದು ಗುಂಪು ಎಂದು ಭಾಗವತ್ ತಿಳಿಸಿದರು.
ಆರ್ಎಸ್ಎಸ್ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್ ಶಿವಿರ್ (ಸಂಗೀತ ಬ್ಯಾಂಡ್ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು. ಪಾಶ್ಚಿಮಾತ್ರ ದೇಶಗಳು ಸಂಗೀತವನ್ನು ಒಂದು ಮನರಂಜನೆಯೆಂದು ಪರಗಣಿಸಿವೆ. ಅವರು ಥ್ರಿಲ್ಗಾಗಿ ಅದನ್ನು ಕೇಳುತ್ತಾರೆ. ಆದರೆ ಭಾರತದಲ್ಲಿ ಸಂಗೀತವೆಂದರೆ ಆತ್ಮಸಂತೋಷದ ಮಾರ್ಗ. ಮನಸನ್ನು ಶಾಂತಗೊಳಿಸುವ ಒಂದು ಕಲೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಭಾರತ ಈ ಬಾರಿ ಸ್ವಾತಂತ್ರ್ಯ ಬಂದ 75ನೇ ವರ್ಷದ ಆಚರಣೆಯಲ್ಲಿದೆ. 1857ರಲ್ಲಿ ಶುರುವಾದ ಸ್ವಾತಂತ್ರ್ಯ ಹೋರಾಟಕ್ಕೆ ಜಯ ಸಿಕ್ಕಿದ್ದು 1947ರ ಆಗಸ್ಟ್ 15ರಂದು. ಅಂದು ಸಂಪೂರ್ಣವಾಗಿ ವಿದೇಶಿ ಶಕ್ತಿ ನಮ್ಮಲ್ಲಿಂದ ತೊಲಗಿತು. ಅದಾದ ಬಳಿಕ ದೇಶವನ್ನು ಕಟ್ಟಲು ಬಹಳಷ್ಟು ಶ್ರಮ ಬೇಕಾಯಿತು. ವಿದೇಶಿಗರು ಮಾಡಿದ ಹಾನಿಗಳು, ಲೂಟಿಗಳನ್ನು ಸರಿದೂಗಿಸಿ, ಒಂದು ಹಂತಕ್ಕೆ ತರಲು ಸುಮಾರು 10-12ವರ್ಷಗಳು ಹಿಡಿದವು ಎಂದು ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Farm Laws Repeal Bill 2021 ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ರಾಜ್ಯಸಭೆ ಅಂಗೀಕಾರ
Published On - 2:46 pm, Mon, 29 November 21