ದೆಹಲಿ: ಆರ್ಎಸ್ಎಸ್ ಹಿನ್ನೆಲೆಯ ರೈತ ಸಂಘಟನೆ ಭಾರತೀಯ ಕಿಸಾನ್ ಸಂಘ ದೆಹಲಿ ಚಲೋ ಚಳವಳಿಯಿಂದ ಅಂತರ ಕಾಯ್ದುಕೊಂಡಿದೆ. 1978ರಲ್ಲಿ ದತ್ತೋಪಂತ್ ಥೆಂಗಡಿ ಅವರಿಂದ ಸ್ಥಾಪನೆಗೊಂಡ ಭಾರತೀಯ ಕಿಸಾನ್ ಯೂನಿಯನ್, ನೂತನ ಕೃಷಿ ಕಾಯ್ದೆಗಳು ರೈತರ ಹಿತ ಕಾಪಾಡಲಿವೆ ಎಂದು ಅಭಿಪ್ರಾಯಪಟ್ಟಿದೆ.
ರೈತರು ಸೂಚಿಸುವ ತಿದ್ದುಪಡಿಗಳನ್ನು ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆ ಕಾರಣ, ನೂತನ ಕೃಷಿ ಕಾಯ್ದೆಗಳನ್ನು ರದ್ದುಗಳಿಸುವ ಅಗತ್ಯವೇ ಇಲ್ಲ ಎಂದು ಭಾರತ ಕಿಸಾನ್ ಸಂಘ ಪ್ರತಿಪಾದಿಸಿದೆ. ಪ್ರತಿಪಕ್ಷಗಳು ಮತ್ತು ವಿದೇಶಿ ಶಕ್ತಿಗಳು ರೈತರ ಸಮಸ್ಯೆಯನ್ನು ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿವೆ ಎಂದು ಭಾರತೀಯ ಕಿಸಾನ್ ಸಂಘ ಆರೋಪಿಸಿವೆ.
ಗುಜರಾತ್ನಲ್ಲೂ ದೆಹಲಿ ಚಲೋಗೆ ಬೆಂಬಲ
ಇಡೀ ದೇಶವೇ, ಪಂಜಾಬ್ ರೈತರ ದೆಹಲಿ ಚಲೋಗೆ ಬೆಂಬಲ ವ್ಯಕ್ತಪಡಿಸುತ್ತಿದೆ. ಬಿಜೆಪಿ ಪ್ರಾಬಲ್ಯವಿರುವ ಗುಜರಾತ್ನನ ರೈತ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಗುಜರಾತ್ ಖೇದತ್ ಸಂಘರ್ಷ ಸಮೀತಿ ಎಂಬ ಸಂಯುಕ್ತ ಒಕ್ಕೂಟವನ್ನು ರಚಿಸಿಕೊಂಡಿರುವ 23 ರೈತ ಸಂಘಟನೆಗಳು ಬಂದ್ಗೆ ಬೆಂಬಲ ಘೋಷಿಸಿವೆ. ಡಿಸೆಂಬರ್ 10ರಂದು ಗಾಂಧೀನಗರದ ಸತ್ಯಾಗ್ರಹ ಚಾವಣಿಯಲ್ಲಿ ಕಿಸಾನ್ ಸಂಸತ್ ಆಯೋಜಿಸಿದೆ. ಅಲ್ಲದೇ ಡಿಸೆಂಬರ್ 12ರಂದು ಗುಜರಾತ್ ದೆಹಲಿಗೆ ರೈತರು ತೆರಳಲಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.
ಜನರಿಗೆ ತೊಂದರೆಯಾಗದಂತೆ ನಾಳೆಯ ಭಾರತ್ ಬಂದ್ಗೆ ಟೈಮ್ ಫಿಕ್ಸ್ ಮಾಡಿದ ಕಿಸಾನ್ ಯೂನಿಯನ್
Published On - 7:00 pm, Mon, 7 December 20