AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಮ ವರ್ಗದವರಿಗೆ ಆಸರೆಯಾದ ರೇರಾ ಕಾಯ್ದೆ: ನರೇಂದ್ರ ಮೋದಿ

ಬಿಲ್ಡರ್ ಮತ್ತು ಮನೆ ಖರೀದಿಸುವವರ ನಡುವೆ ವಿಶ್ವಾಸ ಹೆಚ್ಚಿಸಲು ರೇರಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ .

ಮಧ್ಯಮ ವರ್ಗದವರಿಗೆ ಆಸರೆಯಾದ ರೇರಾ ಕಾಯ್ದೆ: ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 07, 2020 | 7:47 PM

Share

ಲಖನೌ: ಮನೆ ಖರೀದಿಸುವವರ ಮತ್ತು ಮನೆ ನಿರ್ಮಾಣ ಮಾಡುವ ಬಿಲ್ಡರ್​ಗಳ ನಡುವೆ ವಿಶ್ವಾಸ ಮೂಡಿಸಲು ಮತ್ತು ಸಮಸ್ಯೆಗಳನ್ನು ನಿವಾರಿಸಲು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಕಾಯ್ದೆ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ಆಗ್ರಾ ಮೆಟ್ರೊ ರೈಲು ಕಾಮಕಾರಿಗೆ ಚಾಲನೆ ನೀಡಿದ ಮೋದಿ, ದುರುದ್ದೇಶ ಹೊಂದಿದ ಜನರು ರಿಯಲ್ ಎಸ್ಟೇಟ್ ವಲಯಕ್ಕೆ ಕುಖ್ಯಾತಿ ತರುವ ಮೂಲಕ ಮಧ್ಯಮ ವರ್ಗದವರಿಗೆ ಬೇಸರವನ್ನುಂಟು ಮಾಡಿದ್ದಾರೆ. ರೇರಾ ಕಾಯ್ದೆ ಜಾರಿಗೆ ಬಂದ ಮೇಲೆ ಮಧ್ಯಮ ವರ್ಗದವರ ಮನೆಗಳು ಬೇಗನೆ ನಿರ್ಮಾಣ ಆಗುತ್ತಿದೆ ಎಂದು ಇತ್ತೀಚೆಗೆ ಕೆಲವು ವರದಿಗಳು ಪ್ರಕಟವಾಗಿದ್ದವು ಎಂದಿದ್ದಾರೆ ಮೋದಿ.

ಆಧುನಿಕ ಸಾರ್ವಜನಿಕ ಸಾರಿಗೆ ಸಂಪರ್ಕದಿಂದ ಹಿಡಿದು ಗೃಹ ನಿರ್ಮಾಣದವರಗೆ ಸರ್ವಾಂಗೀಣ ಅಭಿವೃದ್ಧಿ ಆಗಿದ್ದು ಇದು ನಗರಗಳಲ್ಲಿನ ಜೀವನವನ್ನು ಸುಲಭವಾಗಿಸಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಆಗ್ರಾದಲ್ಲಿಯೇ ಉದ್ಧಾಟಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ನಗರದ ಬಡಕುಟುಂಬಗಳಿಗೆ 1 ಕೋಟಿಗಿಂತಲೂ ಹೆಚ್ಚು ಮನೆಗಳನ್ನು ನಿರ್ಮಿಸಲು ಅನುಮತಿ ನೀಡಿದೆ. ನಗರದಲ್ಲಿರುವ ಮಧ್ಯಮ ವರ್ಗ ಕುಟುಂಬಗಳಿಗೆ ಮೊದಲ ಬಾರಿ ಮನೆ ಖರೀದಿಸಲು ಸಹಾಯ ಮಾಡಲಾಗುತ್ತದೆ. ಮನೆ ಖರೀದಿಗಾಗಿ ನಗರದಲ್ಲಿರುವ 12 ಲಕ್ಷ ಕುಟುಂಬಗಳಿಗೆ ₹28,000 ಕೋಟಿಯಷ್ಟು ಸಹಾಯ ನೀಡಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು.

ಅಮೃತ್ ಮಿಷನ್ ಅಡಿಯಲ್ಲಿ ಹಲವಾರು ನಗರಗಳಲ್ಲಿ ಮೂಲ ಸೌಕರ್ಯಗಳಾದ ನೀರು ಮತ್ತು ಚರಂಡಿ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಉತ್ತಮಪಡಿಸಲು ಮತ್ತು ತ್ಯಾಜ್ಯ ನಿರ್ವಹಣೆಗೆ ಆಧುನಿಕ ವ್ಯವಸ್ಥೆ ಅಳವಡಿಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ. ನವ ಭಾರತದ ಕನಸು ದೊಡ್ಡದಾಗಿದೆ. ಕನಸು ಕಂಡರೆ ಮಾತ್ರ ಸಾಲದು ಅದನ್ನು ನನಸಾಗಿಸಲು ಧೈರ್ಯ ಬೇಕು. ನೀವು ಧೈರ್ಯ ಮತ್ತು ಸಮರ್ಪಣಾಭಾವದಿಂದ ಮುನ್ನುಗ್ಗಿದರೆ ಯಾವುದೇ ಶಕ್ತಿಗೆ ನಿಮ್ಮನ್ನು ತಡೆಯಲಾಗುವುದಿಲ್ಲ. ಸಣ್ಣಸಣ್ಣ ನಗರಗಳಲ್ಲಿರುವ ಭಾರತದ ಯುವಜನರು ಧೈರ್ಯ ಮತ್ತು ಸಮರ್ಪಣಾಭಾವವನ್ನು ತೋರಿಸುತ್ತಿದ್ದಾರೆ.

20ನೇ ಶತಮಾನದಲ್ಲಿ ಮೆಟ್ರೊ ನಗರಗಳು ವಹಿಸಿದ ಪಾತ್ರವನ್ನು ಆಗ್ರಾದಂಥ ಸಣ್ಣ ನಗರಗಳು ಈಗ ವಹಿಸುತ್ತಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿಯೇ ಮೆಟ್ರೊ ರೈಲು ಬೋಗಿಗಳನ್ನು ನಿರ್ಮಿಸಲಾಗುವುದು. ಮೆಟ್ರೊ ನೆಟ್​ವರ್ಕ್​ ವಿಷಯಕ್ಕೆ ಬಂದಾಗ ಭಾರತ ಸ್ವಾವಲಂಬಿ ಆಗಿದೆ. ಉತ್ತರ ಪ್ರದೇಶದಲ್ಲಿ ಮೆಟ್ರೊ ರೈಲು ಸಂಪರ್ಕ ಹೊಂದಿರುವ ಏಳನೇ ನಗರ ಆಗಲಿದೆ ಆಗ್ರಾ ಎಂದು ಮೋದಿ ಹೇಳಿದ್ದಾರೆ.

ಆಗ್ರಾ ಮೆಟ್ರೊ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Published On - 7:45 pm, Mon, 7 December 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ