AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಗ್-29K ವಿಮಾನ ದುರಂತ: ಕೊನೆಗೂ ಪತ್ತೆಯಾಯ್ತು ಪೈಲಟ್ ನಿಶಾಂತ್ ಸಿಂಗ್ ಮೃತದೇಹ

ನವೆಂಬರ್ 26ರಂದು ಪತನಗೊಂಡಿದ್ದ ನೌಕಾಪಡೆಯ ಮಿಗ್-29K  ತರಬೇತಿ ವಿಮಾನದಿಂದ ನಾಪತ್ತೆಯಾಗಿದ್ದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಗೋವಾ ಸಮುದ್ರ ತೀರದಿಂದ 30 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.

ಮಿಗ್-29K ವಿಮಾನ ದುರಂತ: ಕೊನೆಗೂ ಪತ್ತೆಯಾಯ್ತು ಪೈಲಟ್ ನಿಶಾಂತ್ ಸಿಂಗ್ ಮೃತದೇಹ
ಸ್ನೇಹಜೀವಿಯಾಗಿದ್ದ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್
guruganesh bhat
| Edited By: |

Updated on: Dec 07, 2020 | 5:41 PM

Share

ಪಣಜಿ: ನವೆಂಬರ್ 26ರಂದು ಪತನಗೊಂಡಿದ್ದ ನೌಕಾಪಡೆಯ ಮಿಗ್-29K  ತರಬೇತಿ ವಿಮಾನದಿಂದ ನಾಪತ್ತೆಯಾಗಿದ್ದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಗೋವಾ ಸಮುದ್ರ ತೀರದಿಂದ 30 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.

ಬರೋಬ್ಬರಿ 11 ದಿನಗಳ ದೀರ್ಘ ಶೋಧಕಾರ್ಯದ ನಂತರ 70 ಅಡಿ ಸಮುದ್ರದಾಳದಲ್ಲಿ ನಿಶಾಂತ್ ಮೃತದೇಹವನ್ನು ನೌಕಾಪಡೆ ಪತ್ತೆಹಚ್ಚಿದೆ. ನಿಶಾಂತ್ ಸಿಂಗ್ ಜೊತೆಗಿದ್ದ ಮತ್ತೋರ್ವ ಪೈಲಟ್​ನ್ನು ಭಾರತೀಯ ನೌಕಾಪಡೆ ಅಪಘಾತದ ದಿನವೇ ರಕ್ಷಿಸಿತ್ತು. ಆದರೆ, ಪತನವಾದ ವಿಮಾನದಿಂದ ಪಾರಾಗಿದ್ದ ನಿಶಾಂತ್ ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ, ಪೈಲಟ್​ನ ಮೃತದೇಹ ಪತ್ತೆಯಾಗಿದೆ.

ಕಾರವಾರ: 8 ದಿನವಾದರೂ ಸಿಗಲಿಲ್ಲ ನಿಶಾಂತ್ ಸುಳಿವು.. ಏನಾದರು ಲೆಫ್ಟಿನೆಂಟ್ ಕಮಾಂಡರ್?

ಅರಬ್ಬಿ ಸಮುದ್ರದಲ್ಲಿ ನೌಕಾಪಡೆಯ ಮಿಗ್-29K ತರಬೇತಿ ವಿಮಾನ ಪತನ