ಅಮೆರಿಕ ಕೆಂಗಣ್ಣಿಗೆ ಗುರಿಯಾಗಲಿದೆ ರಷ್ಯಾ-ಭಾರತ ರಕ್ಷಣಾ ಒಪ್ಪಂದ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 04, 2021 | 10:06 PM

ಸಿಆರ್​ಎಸ್​ ವರದಿಗಳು ಅಮೆರಿಕ ಕಾಂಗ್ರೆಸ್​​ನ ಅಧಿಕೃತ ವರದಿಗಳಲ್ಲ ಅಥವಾ ಕಾಂಗ್ರೆಸ್ಸಿಗರ ದೃಷ್ಟಿಕೋನವನ್ನು ಪ್ರತಿಬಿಂಬಿಸುವುದಿಲ್ಲ. ಜನಪ್ರತಿನಿಧಿಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರ ತಜ್ಞರು ಈ ವರದಿ ಸಿದ್ಧಪಡಿಸುತ್ತಾರೆ.

ಅಮೆರಿಕ ಕೆಂಗಣ್ಣಿಗೆ ಗುರಿಯಾಗಲಿದೆ ರಷ್ಯಾ-ಭಾರತ ರಕ್ಷಣಾ ಒಪ್ಪಂದ?
ರಷ್ಯಾ ನಿರ್ಮಿತ ಎಸ್​-400 ವಾಯು ರಕ್ಷಣಾ ವ್ಯವಸ್ಥೆ
Follow us on

ವಾಷಿಂಗ್ಟನ್​: ಎಸ್​​-400 ವಾಯು ರಕ್ಷಣಾ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿ ಮಾಡಲು ಭಾರತ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಅಮೆರಿಕದ ಕೆಂಗಣ್ಣು ಬಿದ್ದಿದೆ. ಇದೇ ಕಾರಣಕ್ಕೆ ಭಾರತದ ಮೇಲೆ ಅಮೆರಿಕ ನಿರ್ಬಂಧ ಹೇರುವ ಸಾಧ್ಯತೆ ಇದೆ. ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಮೆರಿಕದ ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ಸಮಿತಿಯ ವರದಿಯೊಂದರಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಗಮನಿಸಿರುವ ತಜ್ಞರು ನಿರ್ಬಂಧದ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ.

ಅಮೆರಿಕ ಕಾಂಗ್ರೆಸ್​ನ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಸಂಶೋಧನಾ ವಿಭಾಗ ತನ್ನ ಹೊಸ ವರದಿಯಲ್ಲಿ ಈ ವಿಚಾರ ಉಲ್ಲೇಖಿಸಿದೆ. ಭಾರತವು ಉನ್ನತ ತಂತ್ರಜ್ಞಾನ ಮತ್ತು ಸಹ-ಉತ್ಪಾದನಾ ಉಪಕ್ರಮಗಳಿಗಾಗಿ ಉತ್ಸುಕವಾಗಿದೆ. ನಿರ್ಬಂಧಗಳ ಕಾಯ್ದೆ ಅಡಿಯಲ್ಲಿ ಭಾರತದ ಮೇಲೆ ಅಮೆರಿಕ ನಿರ್ಬಂಧ ಹೇರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಸಿಆರ್​ಎಸ್​ ವರದಿಗಳು ಯುಎಸ್ ಕಾಂಗ್ರೆಸ್​​ನ ಅಧಿಕೃತ ವರದಿಗಳಲ್ಲ ಅಥವಾ ಕಾಂಗ್ರೆಸ್ಸಿಗರ ದೃಷ್ಟಿಕೋನವನ್ನು ಪ್ರತಿಬಿಂಬಿಸುವುದಿಲ್ಲ. ಜನಪ್ರತಿನಿಧಿಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗುಂತೆ ಸ್ವತಂತ್ರ ತಜ್ಞರು ಈ ವರದಿ ಸಿದ್ಧಪಡಿಸುತ್ತಾರೆ.

2018ರಲ್ಲಿ ಭಾರತ ರಷ್ಯಾ ಜೊತೆ ರಕ್ಷಣಾ ಒಪ್ಪಂದ ಮಾಡಿಕೊಂಡಿತ್ತು. 36,515 ಕೋಟಿ ಒಪ್ಪಂದ ಇದಾಗಿದ್ದು, ರಷ್ಯಾ ಐದು ಎಸ್​-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ನೀಡುತ್ತಿದೆ. 2019ರಲ್ಲಿ ಭಾರತ ರಷ್ಯಾಗೆ 5,843 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿತ್ತು.

3 ಸಾವಿರ ಕೋಟಿ ವೆಚ್ಚದ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್​ಲೈನ್​ ನಾಳೆ ಲೋಕಾರ್ಪಣೆ