‘ಶಬರಿಮಲೆಗೆ ಮಹಿಳಾ ಪ್ರವೇಶ ತೀರ್ಪು ಅಂತಿಮವಲ್ಲ’ ಹೋರಾಟಗಾರ್ತಿಯರಿಗೆ ಸುಪ್ರೀಂಕೋರ್ಟ್ ಶಾಕ್

|

Updated on: Dec 06, 2019 | 12:28 PM

ದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಅಂತಿಮವಲ್ಲ ಎಂದು ಹೇಳುವ ಮೂಲಕ ಶಬರಿಮಲೆ ಹೋರಾಟಗಾರ್ತಿಯರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಪವಿತ್ರ ಯಾತ್ರಾ ಸ್ಥಳ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು 2018ರಲ್ಲಿ ರಂಜನ್​ ಗೊಗೊಯಿ ನೇತೃತ್ವದ ಪಂಚ ಸದಸ್ಯ ಪೀಠ ತೀರ್ಪು ನೀಡಿತ್ತು. ಆದರೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಅಂತಿಮವಲ್ಲ. ಈ ಕುರಿತ ವಿಚಾರಣೆ ನಡೀತಿದೆ ಎಂದು ಸುಪ್ರೀಂಕೋರ್ಟ್​​​ನ ಮುಖ್ಯ ನ್ಯಾಯಮೂರ್ತಿ ಎಸ್.ಬೋಬ್ಡೆ ಹೇಳಿದ್ದಾರೆ. ಶಬರಿಮಲೆ ದೇಗುಲ ಪ್ರವೇಶಕ್ಕೆ […]

‘ಶಬರಿಮಲೆಗೆ ಮಹಿಳಾ ಪ್ರವೇಶ ತೀರ್ಪು ಅಂತಿಮವಲ್ಲ ಹೋರಾಟಗಾರ್ತಿಯರಿಗೆ ಸುಪ್ರೀಂಕೋರ್ಟ್ ಶಾಕ್
Follow us on

ದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಅಂತಿಮವಲ್ಲ ಎಂದು ಹೇಳುವ ಮೂಲಕ ಶಬರಿಮಲೆ ಹೋರಾಟಗಾರ್ತಿಯರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ.

ಪವಿತ್ರ ಯಾತ್ರಾ ಸ್ಥಳ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು 2018ರಲ್ಲಿ ರಂಜನ್​ ಗೊಗೊಯಿ ನೇತೃತ್ವದ ಪಂಚ ಸದಸ್ಯ ಪೀಠ ತೀರ್ಪು ನೀಡಿತ್ತು. ಆದರೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಅಂತಿಮವಲ್ಲ. ಈ ಕುರಿತ ವಿಚಾರಣೆ ನಡೀತಿದೆ ಎಂದು ಸುಪ್ರೀಂಕೋರ್ಟ್​​​ನ ಮುಖ್ಯ ನ್ಯಾಯಮೂರ್ತಿ ಎಸ್.ಬೋಬ್ಡೆ ಹೇಳಿದ್ದಾರೆ.

ಶಬರಿಮಲೆ ದೇಗುಲ ಪ್ರವೇಶಕ್ಕೆ ಮಹಿಳೆಯರನ್ನು ತಡೆಯೊಡ್ಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿದ್ದ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್.ಬೋಬ್ಡೆ ಇಂತಹ ಅಭಿಪ್ರಾಯಪಟ್ಟಿದ್ದಾರೆ. ಶಬರಿಮಲೆ ವಿವಾದದ ಕುರಿತು ಸುಪ್ರೀಂಕೋರ್ಟ್​ನ ದೊಡ್ಡ ಪೀಠ ವಿಚಾರಣೆ ನಡೆಯುತ್ತಿದೆ ಹೀಗಾಗಿ ಶಬರಿಮಲೆಗೆ ಮಹಿಳಾ ಪ್ರವೇಶ ತೀರ್ಪು ಅಂತಿಮವಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಮುಂದಿನ ವಾರ ಹೋರಾಟಗಾರ್ತಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಲಿದೆ ಎಂದಿದ್ದಾರೆ

Published On - 7:37 am, Fri, 6 December 19