ಕೊರೊನಾ ಎಫೆಕ್ಟ್​: ಮುಂದಿನ ದಿನಗಳಲ್ಲಿ ಎಲ್ಲರಿಗೂ ಇದೇ ಅವಸ್ಥೆ

|

Updated on: May 13, 2020 | 8:40 PM

ಗಾಂಧಿನಗರ: ಹೆಮ್ಮಾರಿ ಕೊರೊನಾ ವೈರಸ್ ಅಬ್ಬರ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳೇ ಕಾಣ್ತಿಲ್ಲ. ಲಾಕ್‌ಡೌನ್‌ ಮಾಡಿದಾಗಿನಿಂದ ಬ್ಯೂಟಿ ಪಾರ್ಲರ್, ಸಲೂನ್ ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿದೆ. ಇದರಿಂದ ಜನರಿಗೂ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಸೆಲೂನ್ ಮಾಲೀಕರಿಗೂ ಸಹ ತೀರಾ ಸಂಕಷ್ಟ ಎದುರಾಗಿದೆ. ಗುಜರಾತ್​ನ ಖೇಡಾ ಜಿಲ್ಲೆಯ ನಾಡಿಯಾನ್​ನಲ್ಲಿ ಸಲೂನ್ ಅಂಗಡಿಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಹೇರ್​ ಕಟ್ ಮಾಡುವ ಮುನ್ನ ಸಲೂನ್ ಸಿಬ್ಬಂದಿಯು PPE ಕಿಟ್​ಗಳನ್ನು ಬಳಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಸೋಂಕು ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು […]

ಕೊರೊನಾ ಎಫೆಕ್ಟ್​: ಮುಂದಿನ ದಿನಗಳಲ್ಲಿ ಎಲ್ಲರಿಗೂ ಇದೇ ಅವಸ್ಥೆ
Follow us on

ಗಾಂಧಿನಗರ: ಹೆಮ್ಮಾರಿ ಕೊರೊನಾ ವೈರಸ್ ಅಬ್ಬರ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳೇ ಕಾಣ್ತಿಲ್ಲ. ಲಾಕ್‌ಡೌನ್‌ ಮಾಡಿದಾಗಿನಿಂದ ಬ್ಯೂಟಿ ಪಾರ್ಲರ್, ಸಲೂನ್ ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿದೆ. ಇದರಿಂದ ಜನರಿಗೂ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಸೆಲೂನ್ ಮಾಲೀಕರಿಗೂ ಸಹ ತೀರಾ ಸಂಕಷ್ಟ ಎದುರಾಗಿದೆ.

ಗುಜರಾತ್​ನ ಖೇಡಾ ಜಿಲ್ಲೆಯ ನಾಡಿಯಾನ್​ನಲ್ಲಿ ಸಲೂನ್ ಅಂಗಡಿಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಹೇರ್​ ಕಟ್ ಮಾಡುವ ಮುನ್ನ ಸಲೂನ್ ಸಿಬ್ಬಂದಿಯು PPE ಕಿಟ್​ಗಳನ್ನು ಬಳಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಸೋಂಕು ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಲೂನ್ ಮಾಲೀಕ ವಿಶಾಲ್ ಲಿಂಬಾಚಿಯಾ ತಿಳಿಸಿದ್ದಾರೆ. ಸದ್ಯ ಗುಜರಾತ್​ನಲ್ಲಿರುವ ಅವಸ್ಥೆ ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೂ ಬರಲಿದೆ.

Published On - 7:12 pm, Wed, 13 May 20