ಸ್ಯಾಮ್ಸಂಗ್ ತನ್ನ ಉತ್ಪಾದನೆಯ ಬಹುಪಾಲು ಭಾಗವನ್ನು ವಿಯೆಟ್ನಾಂ ಹಾಗೂ ಇತರ ದೇಶಗಳಿಂದ ಭಾರತಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದೆ ಎನ್ನಲಾಗಿದೆ. ದೇಶದಲ್ಲಿ 40 ಬಿಲಿಯನ್ ಮೌಲ್ಯದ ಸಾಧನಗಳನ್ನು ತಯಾರಿಸಲು ಸ್ಯಾಮ್‌ಸಂಗ್ ಯೋಜಿಸಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.
“ಪಿಎಲ್‌ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯಡಿ ಭಾರತಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಸ್ಯಾಮ್‌ಸಂಗ್ ತನ್ನ ಉತ್ಪಾದನಾ ಮಾರ್ಗಗಳನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಸ್ಯಾಮ್‌ಸಂಗ್‌ನ ಈ ಕ್ರಮ ವಿಯೆಟ್ನಾಂನಂತಹ ವಿವಿಧ ದೇಶಗಳಲ್ಲಿರುವ ಉತ್ಪಾದನಾ ಘಟಕಗಳ ಸಾಮರ್ಥ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ.
ಇದು ಕಾರ್ಯಗತವಾದಲ್ಲಿ, ಭಾರತದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು ಸ್ಯಾಮ್‌ಸಂಗ್‌ನ ಬಹು ದೊಡ್ಡ ಯೋಜನೆಯಾಗಿದೆ. ಸ್ಯಾಮ್‌ಸಂಗ್ ಪ್ರಸ್ತುತ ನೋಯ್ಡಾದಲ್ಲಿ ತನ್ನ ಅತಿದೊಡ್ಡ ಉತ್ಪಾದನಾ ಘಟಕವನ್ನು ಹೊಂದಿದ್ದು, ಅಲ್ಲಿ ಅದು ಭಾರತದಲ್ಲಿ ಮಾರಾಟ ಮಾಡುವ ಎಲ್ಲಾ ಫೋನ್‌ಗಳನ್ನು ತಯಾರಿಸುತ್ತಿದೆ.
ಕಂಪನಿಯು ತನ್ನ ಉತ್ಪಾದಕಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಹೇರಳವಾಗಿ ರಫ್ತು ಮಾಡುವ ಗುರಿ ಹೊಂದಿದೆ. ಜೊತೆಗೆ ಭಾರತದಲ್ಲಿ ಕಾರ್ಮಿಕ ವೆಚ್ಚಗಳು ಅತ್ಯಂತ ಕಡಿಮೆ ಇರುವುದರಿಂದ ಸ್ಯಾಮ್‌ಸಂಗ್ ತನ್ನ ಉತ್ಪದನಾ ಘಟಕಗಳನ್ನು ಭಾರತದಲ್ಲಿ ನಿರ್ಮಿಸಲು ಯೋಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:ಚೀನಾಕ್ಕೆ ಮತ್ತೊಂದು ಹೊಡೆತ! 24 ದೈತ್ಯ ಕಂಪನಿಗಳು ಭಾರತಕ್ಕೆ ಬರಲು ರೆಡಿ
Published On - 5:26 pm, Tue, 18 August 20