AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಹವಾಲಾ ದಂಧೆ ನಡೆಸ್ತಿದ್ದ ಚೀನಾ ಮೂಲದವನಿಗೆ ED ಗುನ್ನಾ

ದೆಹಲಿ: ದೇಶದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹವಾಲಾ ದಂಧೆ ನಡೆಸುತ್ತಿದ್ದ ಬಂಧಿತ ಚೀನಾ ಸಂಜಾತನಿಗೆ ಇದೀಗ ಜಾರಿ ನಿರ್ದೇಶನಾಲಯ ಮತ್ತೊಂದು ಶಾಕ್​ ನೀಡಿದೆ. ಕಳೆದ ಕೆಲವು ದಿನಗಳ ಹಿಂದೆ ಚೀನಾ ಮೂಲದ ಚಾರ್ಲಿ ಪೆಂಗ್​ ಮೇಲೆ ಐಟಿ ಇಲಾಖೆ ಹಾಗೂ ದೆಹಲಿ ಪೊಲೀಸರು ಹವಾಲಾ ದಂಧೆ ನಡೆಸುತ್ತಿರುವ ಆರೋಪದಡಿ ದಾಳಿ ನಡೆಸಿ ಪೆಂಗ್​ನನ್ನು ಬಂಧಿಸಿದ್ದರು. ಇದೀಗ, ಎರಡೂ ಇಲಾಖೆಯಿಂದ ಮಾಹಿತಿ ಪಡೆದ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಯ ಕೇಸ್​ ದಾಖಲಿಸಿಕೊಂಡಿದೆ. ಸದ್ಯ 42 ವರ್ಷದ ಚಾರ್ಲಿ […]

ಭಾರತದಲ್ಲಿ ಹವಾಲಾ ದಂಧೆ ನಡೆಸ್ತಿದ್ದ ಚೀನಾ ಮೂಲದವನಿಗೆ ED ಗುನ್ನಾ
KUSHAL V
| Edited By: |

Updated on: Aug 18, 2020 | 4:14 PM

Share

ದೆಹಲಿ: ದೇಶದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹವಾಲಾ ದಂಧೆ ನಡೆಸುತ್ತಿದ್ದ ಬಂಧಿತ ಚೀನಾ ಸಂಜಾತನಿಗೆ ಇದೀಗ ಜಾರಿ ನಿರ್ದೇಶನಾಲಯ ಮತ್ತೊಂದು ಶಾಕ್​ ನೀಡಿದೆ.

ಕಳೆದ ಕೆಲವು ದಿನಗಳ ಹಿಂದೆ ಚೀನಾ ಮೂಲದ ಚಾರ್ಲಿ ಪೆಂಗ್​ ಮೇಲೆ ಐಟಿ ಇಲಾಖೆ ಹಾಗೂ ದೆಹಲಿ ಪೊಲೀಸರು ಹವಾಲಾ ದಂಧೆ ನಡೆಸುತ್ತಿರುವ ಆರೋಪದಡಿ ದಾಳಿ ನಡೆಸಿ ಪೆಂಗ್​ನನ್ನು ಬಂಧಿಸಿದ್ದರು. ಇದೀಗ, ಎರಡೂ ಇಲಾಖೆಯಿಂದ ಮಾಹಿತಿ ಪಡೆದ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಯ ಕೇಸ್​ ದಾಖಲಿಸಿಕೊಂಡಿದೆ.

ಸದ್ಯ 42 ವರ್ಷದ ಚಾರ್ಲಿ ಪೆಂಗ್​ನನ್ನು ಐಟಿ ಇಲಾಖೆಯು ದೇಶದೊಳಗೆ ಹವಾಲಾ ಜಾಲದ ಮೂಲಕ ಕೋಟ್ಯಂತರ ರೂಪಾಯಿ ಮೊತ್ತವನ್ನ ದೇಶದೊಳಕ್ಕೆ ತರಲು ವ್ಯವಸ್ಥೆ ಮಾಡಿದ್ದನಂತೆ. ಈತನ ಕೃತ್ಯದಲ್ಲಿ ಕೆಲವು ಖಾಸಗಿ ಬ್ಯಾಂಕ್​ಗಳ ಸಿಬ್ಬಂದಿ ಸಹ ಶಾಮೀಲಾಗಿದ್ದಾರಂತೆ.

ಯಾರು ಈ ಚಾರ್ಲಿ ಪೆಂಗ್​ ? ಚೀನಾ ದೇಶದ ಪ್ರಜೆಯಾದ ಚಾರ್ಲಿ ಪೆಂಗ್​ ಮೂಲ ಹೆಸರು ಲೂ ಸಾಂಗ್​. ಈ ಆಸಾಮಿ ಭಾರತಕ್ಕೆ ಬಂದ ಕೂಡಲೇ ತನ್ನ ಹೆಸರು ಬದಲಿಸುವುದರ ಜೊತೆಗೆ ಇಲ್ಲಿನ ಮಹಿಳೆಯೊಟ್ಟಿಗೆ ಮದುವೆ ಸಹ ಆಗಿದ್ದಾನೆ. ಅಚ್ಚರಿಯೆಂದರೆ, ಈ ಆಸಾಮಿ ಪಾಸ್​ಪೋರ್ಟ್​ ಆಧಾರ್​ ಕಾರ್ಡ್​ ಮತ್ತು ಪ್ಯಾನ್​ ಕಾರ್ಡ್​ ಸಹ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಜೊತೆಗೆ, ನಕಲಿ ಪಾಸ್​ಪೋರ್ಟ್​ ಹೊಂದಿದ್ದ ಆರೋಪದಡಿ 2018ರಲ್ಲಿ ಈತನನ್ನು ಬಂಧಿಸಲಾಗಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರವಿಲ್ಲದೆ ಬಿಡುಗಡೆ ಮಾಡಬೇಕಾಗಿತ್ತು. ಪ್ರತಿ ಬಾರಿ ತನ್ನ ನಿವಾಸ ಬದಲಾಯಿಸುತ್ತಿದ್ದ ಪೆಂಗ್​ ಈವರೆಗೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯಶಸ್ವಿಯಾಗಿದ್ದ.

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ