ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲೆ ದಾಳಿ ಪ್ರಕರಣ: ಇಬ್ಬರ ಬಂಧನ

|

Updated on: Jan 14, 2024 | 9:13 PM

ಜನವರಿ 5 ರಂದು ಸಂದೇಶ್‌ಖಾಲಿ ಘಟನೆಯಿಂದ ಪಾರಾದ ನಂತರ ಮೂವರು ಇಡಿ ಅಧಿಕಾರಿಗಳು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಇಡಿ ತಂಡವನ್ನು ಬೆಂಗಾವಲು ಮಾಡುವ ಶಸ್ತ್ರಸಜ್ಜಿತ ಕೇಂದ್ರ ಅರೆಸೇನಾ ಸಿಬ್ಬಂದಿಯ ಉಪಸ್ಥಿತಿಯ ಹೊರತಾಗಿಯೂ ಅವರ ವಾಹನಗಳ ಮೇಲೆ ದಾಳಿ ನಡೆಸಲಾಗಿತ್ತು.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲೆ ದಾಳಿ ಪ್ರಕರಣ: ಇಬ್ಬರ ಬಂಧನ
ಇಡಿ
Follow us on

ಕೋಲ್ಕತ್ತಾ ಜನವರಿ 14: ಪಶ್ಚಿಮ ಬಂಗಾಳದ (West Bengal) ಸಂದೇಶ್‌ಖಾಲಿಯಲ್ಲಿರುವ ತೃಣಮೂಲ ಕಾಂಗ್ರೆಸ್ (TMC) ಮುಖಂಡರೊಬ್ಬರ ನಿವಾಸದ ಮೇಲೆ ನಡೆದ ದಾಳಿಯ ವೇಳೆ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಉತ್ತರ 24 ಪರಗಣ ಜಿಲ್ಲೆಯ ಪೊಲೀಸರು ಭಾನುವಾರ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಇಬ್ಬರು ಶಂಕಿತರನ್ನು ಅಲಿ ಹೊಸೈನ್ ಘರಾಮಿ ಮತ್ತು ಸಂಜಯ್ ಮೊಂಡಲ್ ಎಂದು ಗುರುತಿಸಲಾಗಿದೆ. ಅವರನ್ನು ಕ್ರಮವಾಗಿ ಜಿಲ್ಲೆಯ ಮಿನಾಖಾನ್ ಮತ್ತು ನಜಾತ್ ಪ್ರದೇಶಗಳಿಂದ ಬಂಧಿಸಿ ಬಸಿರ್‌ಹತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಆದಾಗ್ಯೂ, ಪ್ರಮುಖ ಆರೋಪಿ ಟಿಎಂಸಿ ನಾಯಕ ಶೇಖ್ ಷಹಜಹಾನ್, ಇಡಿ ತಂಡದ ಮೇಲೆ ದಾಳಿ ಮಾಡಲು ಗ್ರಾಮಸ್ಥರಿಗೆ ಸೂಚನೆ ನೀಡುವಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದ್ದು, ಇನ್ನೂ ಪರಾರಿಯಾಗಿದ್ದಾನೆ.

ಏನಿದು ಸಂದೇಶ್‌ಖಾಲಿ ಪ್ರಕರಣ?

ಜನವರಿ 5 ರಂದು ಸಂದೇಶ್‌ಖಾಲಿ ಘಟನೆಯಿಂದ ಪಾರಾದ ನಂತರ ಮೂವರು ಇಡಿ ಅಧಿಕಾರಿಗಳು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಇಡಿ ತಂಡವನ್ನು ಬೆಂಗಾವಲು ಮಾಡುವ ಶಸ್ತ್ರಸಜ್ಜಿತ ಕೇಂದ್ರ ಅರೆಸೇನಾ ಸಿಬ್ಬಂದಿಯ ಉಪಸ್ಥಿತಿಯ ಹೊರತಾಗಿಯೂ ಅವರ ವಾಹನಗಳ ಮೇಲೆ ದಾಳಿ ನಡೆಸಲಾಗಿತ್ತು.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಹಗರಣದಲ್ಲಿ ಶೇಖ್ ಷಹಜಹಾನ್ ಭಾಗಿಯಾಗಿದ್ದಾರೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಆಹಾರ ಸಚಿವೆ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಅಕ್ಟೋಬರ್ 27 ರಂದು ಬಂಧಿಸಲಾಯಿತು.
ಉತ್ತರ 24 ಪರಗಣ ಜಿಲ್ಲೆಯ ಪೊಲೀಸರ ತನಿಖೆಗಳು ಗ್ರಾಮಸ್ಥರು ಸಲ್ಲಿಸಿದ ದೂರುಗಳ ಆಧಾರದ ಮೇಲೆ ಇಡಿ ಅಧಿಕಾರಿಗಳಿಗೆ ವಿಸ್ತರಿಸುತ್ತವೆ. ದಾಳಿ ವೇಳೆ 1.35 ಲಕ್ಷ ರೂ. ಹಾಗೂ ದಾಖಲೆಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ ಟಿಎಂಸಿ ಮುಖಂಡನ ಮನೆ ಉಸ್ತುವಾರಿ ದಿದರ್ ಬಕ್ಷ್ ಮೊಲ್ಲಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಇಡಿ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಮೇಲೆ ದೌರ್ಜನ್ಯ), 447 (ಕ್ರಿಮಿನಲ್ ಅತಿಕ್ರಮಣ) ಮತ್ತು 379 (ಕಳ್ಳತನ) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ನಜತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ:  ‘ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆ ತಿರಸ್ಕರಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಇದಕ್ಕೆ ಪ್ರತಿಕ್ರಿಯೆಯಾಗಿ ಇಡಿ ಜನವರಿ 10 ರಂದು ಎಫ್‌ಐಆರ್ ಅನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಜನವರಿ 11 ರಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ರಾಜಶೇಖರ್ ಮಂಥ ಅವರು ಮಾರ್ಚ್ 31 ರವರೆಗೆ ಪೊಲೀಸ್ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದರು.

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ರಾಹುಲ್ ಸಿನ್ಹಾ, ಟಿಎಂಸಿ ಸರ್ಕಾರವನ್ನು ಟೀಕಿಸಿದ್ದು, “ಶೇಖ್ ಷಹಜಹಾನ್ ತಲೆಮರೆಸಿಕೊಂಡಿರುವಾಗ ಪೊಲೀಸರು ಕೆಲವರನ್ನು ಬಂಧಿಸುವ ಮೂಲಕ ಬಂಗಾಳದ ನಾಗರಿಕರನ್ನು ವಂಚಿಸುತ್ತಿದ್ದಾರೆ. ಅವನನ್ನು ರಕ್ಷಿಸಲಾಗುತ್ತಿದೆ ಎಂದಿದ್ದಾರೆ.

ಟಿಎಂಸಿಯ ರಾಜ್ಯ ಉಪಾಧ್ಯಕ್ಷ ಜಯಪ್ರಕಾಶ್ ಮಜುಂದಾರ್ ಮಾತನಾಡಿ, ಇಡಿ ಅಧಿಕಾರಿಗಳ ಮೇಲೆ ದಾಳಿ ಮಾಡಿದವರನ್ನು ಬಂಧಿಸಲು ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ನಾಯಕರು ಶೇಖ್ ಷಹಜಹಾನ್ ಅವರನ್ನು ಗುರಿಯಾಗಿಸಿಕೊಂಡಿದ್ದರೂ, ಫೆಡರಲ್ ಏಜೆನ್ಸಿ ಅವರು ಎದುರಿಸುತ್ತಿರುವ ಆರೋಪಗಳನ್ನು ಅಧಿಕೃತವಾಗಿ ಘೋಷಿಸಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Sun, 14 January 24