ಸುಶಾಂತ್ ಸಾವು ಪ್ರಕರಣ: ಸುಪ್ರೀಂ ಆದೇಶದ ಬಗ್ಗೆ ಸೇನಾ ಮುಖಂಡ ರಾವುತ್​ ಹೇಳಿದ್ದೇನು?

|

Updated on: Aug 19, 2020 | 7:21 PM

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ಬಿಹಾರ ಸರ್ಕಾರ ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ, ಇಂದು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಅನುಮೋದನೆ ನೀಡಿದೆ. ಈ ವಿಚಾರವಾಗಿ ಶಿವಸೇನೆ ಮುಖಂಡ ಸಂಜಯ್​ ರಾವುತ್​ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ ಕೋರ್ಟ್​ ತನ್ನ ಆದೇಶ ನೀಡಿದ ನಂತರ ಈ ವಿಷಯವನ್ನು ರಾಜಕೀಯವಾಗಿ ಬಳಸುವ ಉದ್ದೇಶವಿಲ್ಲ ಎಂದು ಸೇನಾ ನಾಯಕ ರಾವುತ್ ಹೇಳಿದರು. ಸರ್ವೋಚ್ಛ ನ್ಯಾಯಾಲಯದ ಆದೇಶವು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ದೊಡ್ಡ […]

ಸುಶಾಂತ್ ಸಾವು ಪ್ರಕರಣ: ಸುಪ್ರೀಂ ಆದೇಶದ ಬಗ್ಗೆ ಸೇನಾ ಮುಖಂಡ ರಾವುತ್​ ಹೇಳಿದ್ದೇನು?
ಸುಶಾಂತ್ ಸಿಂಗ್ ರಜಪೂತ್
Follow us on

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ಬಿಹಾರ ಸರ್ಕಾರ ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ, ಇಂದು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಅನುಮೋದನೆ ನೀಡಿದೆ. ಈ ವಿಚಾರವಾಗಿ ಶಿವಸೇನೆ ಮುಖಂಡ ಸಂಜಯ್​ ರಾವುತ್​ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್​ ತನ್ನ ಆದೇಶ ನೀಡಿದ ನಂತರ ಈ ವಿಷಯವನ್ನು ರಾಜಕೀಯವಾಗಿ ಬಳಸುವ ಉದ್ದೇಶವಿಲ್ಲ ಎಂದು ಸೇನಾ ನಾಯಕ ರಾವುತ್ ಹೇಳಿದರು. ಸರ್ವೋಚ್ಛ ನ್ಯಾಯಾಲಯದ ಆದೇಶವು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂಬ ಆರೋಪವನ್ನು ತಿರಸ್ಕರಿಸಿದ ರಾವುತ್​ ಇದು ನಷ್ಟವಲ್ಲ. ಕಾನೂನು ಹೋರಾಟ ನಡೆಸುವಾಗ ಅಂಥ ಸಂಗತಿಗಳು ಎದುರಾಗುತ್ತವೆ ಎಂದಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ನಡೆಸಲು ಮುಂಬೈ ಪೊಲೀಸರ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಪಿತೂರಿ ಎಂದು ರಾವುತ್​ ಹೇಳಿದರು. ನಾವು ಕೋರ್ಟ್​ ಆದೇಶದ ಪ್ರತಿಯನ್ನ ಓದುವವರೆಗೂ ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದೇಶ ಬಂದ ನಂತರ ಅಡ್ವೊಕೇಟ್ ಜನರಲ್ ಅಥವಾ ರಾಜ್ಯ ಡಿಜಿಪಿ ಇದರ ಬಗ್ಗೆ ಮಾತನಾಡುತ್ತಾರೆ. ಮುಂಬೈ ಪೊಲೀಸರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಒಂದು ಪಿತೂರಿಯಾಗಿದೆ ಅಂತಾ ಹೇಳಿದರು.

ನನ್ನ ಪ್ರಕಾರ, ಮುಂಬೈ ಪೊಲೀಸರು ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಿದರು. ಈಗ, ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ತನ್ನ ತೀರ್ಪು ನೀಡಿದೆ. ಸರ್ಕಾರದ ಭಾಗವಾಗಿರದವರು ಅದರ ಬಗ್ಗೆ ಮಾತನಾಡಬಾರದು ಎಂದು ರಾವುತ್ ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ  ಸಂಗ್ರಹಿಸಿದ್ದ ಎಲ್ಲಾ ಸಾಕ್ಷ್ಯಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಮುಂಬೈ ಪೊಲೀಸರಿಗೆ ಸೂಚಿಸಿದೆ. ಸುಶಾಂತ್ ಸಿಂಗ್ ತಂದೆಯವರ ದೂರಿನ ಮೇರೆಗೆ ರಿಯಾ ಚಕ್ರವರ್ತಿ ಮತ್ತು ಇತರ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸುವಲ್ಲಿ ಪಾಟ್ನಾ ಪೊಲೀಸರು ಕಾನೂನುಬಾಹಿರ ಕೃತ್ಯ ಎಸಗಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಪಾಟ್ನಾದಲ್ಲಿ ತನ್ನ ವಿರುದ್ಧ ದಾಖಲಾದ ಎಫ್‌ಐಆರ್​ನ ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಮನವಿಯ ಮೇರೆಗೆ ಈ ತೀರ್ಪು ಹೊರಬಿದ್ದಿದೆ. ಜೊತೆಗೆ ನಟನ ಸಾವಿನ ಬಗ್ಗೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿದರೆ ಅದರ ಬಗ್ಗೆಯೂ ತನಿಖೆ ನಡೆಸಲು ಸಿಬಿಐಗೆ ನಿರ್ದೇಶಿಸಲಾಗಿದೆ.

Published On - 7:19 pm, Wed, 19 August 20