ಫ್ರೆಂಚ್ನ ಸನೋಫಿ ಫಾರ್ಮಾ ಕಂಪನಿ ಯುಕೆಯ ಗ್ಲಾಕ್ಸೋಸ್ಮಿತ್ಕ್ಲೈನ್ (ಜಿಎಸ್ಕೆ) ಕಂಪನಿಯೊಂದಿಗೆ ಸೇರಿ ಅಭಿವೃದ್ಧಿ ಪಡಿಸಿದ ಕೊವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಭಾರತದಲ್ಲಿ ನಡೆಸಲು ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರ (ಡಿಸಿಜಿಐ) ಅನುಮೋದನೆ ನೀಡಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸನೋಫಿ ಕಂಪನಿ, ನಮ್ಮ ಸಹಾಯಕ ಮರುಸಂಯೋಜನೆ-ಪ್ರೋಟೀನ್ ಕೋವಿಡ್ -19 ಲಸಿಕೆಯ ಸುರಕ್ಷತೆ, ಪರಿಣಾಮ ಮತ್ತು ರೋಗನಿರೋಧಕ ಶಕ್ತಿ ಬಗ್ಗೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ನ್ನು ಭಾರತದಲ್ಲಿ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ತಿಳಿಸಿದೆ.
ನಾವು ನಮ್ಮ ಕೊವಿಡ್ 19 ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಜಾಗತಿಕವಾಗಿ ನಡೆಸುತ್ತೇವೆ. ಯುಎಸ್, ಏಷಿಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾಗಳಲ್ಲಿ 18 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಮೇಲೆ ಪ್ರಯೋಗ ಮಾಡಲಾಗುವುದು. ಅದರಲ್ಲಿ 35 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಒಳಗೊಳ್ಳುತ್ತೇವೆ ಎಂದು ಸನೋಫಿ ತಿಳಿಸಿದೆ.
ಸನೋಫಿ ಪಾಶ್ಚರ್ ಕಂಪನಿಯ ಲಸಿಕೆಯ ಮೂರನೇ ಹಂತದ ಅಧ್ಯಯನದಲ್ಲಿ ಭಾರತ ಪಾಲ್ಗೊಳ್ಳುತ್ತಿದೆ. ಈ ಪ್ರಯೋಗದಲ್ಲಿ ಪಾಲ್ಗೊಳ್ಳುವವರ ದಾಖಲಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಶುರು ಮಾಡುತ್ತೇವೆ ಎಂದು ಕಂಪನಿಯ ಭಾರತದ ಮುಖ್ಯಸ್ಥೆ ಅನ್ನಪೂರ್ಣಾ ದಾಸ್ ತಿಳಿಸಿದ್ದಾರೆ. ಕೊರೊನಾ ವೈರಸ್ ನಿರಂತರವಾಗಿ ವಿಕಸನಗೊಳ್ಳುತ್ತಲೇ ಇದೆ. ಹಾಗಾಗಿ ಲಸಿಕೆಗಳು ಅನಿವಾರ್ಯವಾಗುತ್ತಿವೆ. ಅವಶ್ಯಕತೆಗಳಿಗೆ ಅನುಗುಣವಾಗಿ ನಾವೂ ವ್ಯಾಕ್ಸಿನ್ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದೇವೆ. ಖಂಡಿತ ನಮ್ಮ ಲಸಿಕೆಯು ಕೊವಿಡ್ 19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬ ನಂಬಿಕೆಯಿದೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ನಟಿ ನಗ್ಮಾ- ಗಂಗೂಲಿ ನಡುವಿನ ಪ್ರೀತಿ ಮುರಿದು ಬಿದ್ದಿದ್ಯಾಕೆ? ನಗ್ಮಾ ಮದುವೆಯಾಗದಿರಲು ದಾದಾ ಕಾರಣನಾ?
Sanofi GSK Covid 19 Vaccine get DCGI nod for Phase 3 trial In India
Published On - 5:15 pm, Thu, 8 July 21