ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದನ್ನು ನಾನು ನೋಡಿದ್ದೇನೆ: ರೆಫರಿ ಸಾಕ್ಷ್ಯ

|

Updated on: Jun 10, 2023 | 4:44 PM

ನನ್ನ ಮೈ ಮುಟ್ಟಿ ಕಿರುಕುಳ ಅನುಭವಿಸಿದ ನಂತರ ನಾನು ಅಲ್ಲಿಂದ ದೂರಲ ಹೋಗಲು ಪ್ರಯತ್ನಿಸಿದೆ. ಆಗ ಅವರು ಬಲವಂತವಾಗಿ ತನ್ನ ಭುಜವನ್ನು ಹಿಡಿದಿದ್ದಾರೆ ಎಂದು ಕುಸ್ತಿಪಟು ತನ್ನ ದೂರಿನಲ್ಲಿ ಹೇಳಿದ್ದಾರೆ. ನಾವೆಲ್ಲರೂ ಫೋಟೊಗಾಗಿ ನಿಂತಿದ್ದೆವು. ಆದ್ದರಿಂದ ಎಲ್ಲರೂ ಇದನ್ನು ಗಮನಿಸಿದರು ಎಂದಿದ್ದಾರೆ ಜಗ್ಬೀರ್ ಸಿಂಗ್

ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದನ್ನು ನಾನು ನೋಡಿದ್ದೇನೆ: ರೆಫರಿ ಸಾಕ್ಷ್ಯ
ಬ್ರಿಜ್ ಭೂಷಣ್ ಸಿಂಗ್
Follow us on

ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ (Wrestling Federation of India ) ಹಾಗೂ ಬಿಜೆಪಿ ಸಂಸದ (BJP MP) ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌  (Brij Bhushan Sharan Singh)ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ಮಹಿಳಾ ಕುಸ್ತಿಪಟುವನ್ನು ಮುಟ್ಟಬಾರದ ಜಾಗದಲ್ಲಿ ಮುಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ರೆಸ್ಲಿಂಗ್‌ ರೆಫರಿ ಜಗಬೀರ್‌ ಸಿಂಗ್‌ ಹೇಳಿದ್ದಾರೆ. ಆ ಘಟನೆ ನಡೆದದ್ದು ಲಕ್ನೋದಲ್ಲಿ ಎಂದು ಅವರು ಎನ್​​ಡಿಟಿವಿಗೆ ತಿಳಿಸಿದ್ದಾರೆ. ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ನಂತರ 200 ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿದ ದೆಹಲಿ ಪೊಲೀಸರು, ಮೇ 20, 2023 ರಂದು ಪಟಿಯಾಲದಲ್ಲಿ ಜಗ್ಬೀರ್ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ.

ಕಳೆದ ತಿಂಗಳು ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಮೊದಲ ಮಾಹಿತಿ ವರದಿಗಳು ಅಥವಾ ಎಫ್‌ಐಆರ್‌ಗಳನ್ನು ದಾಖಲಿಸಿದ ಏಳು ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರು, ಮಾರ್ಚ್ 25, 2022 ರಂದು ಲಕ್ನೋದಲ್ಲಿ ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನ ( ಸೀನಿಯರ್) ಫೋಟೋ ಸೆಷನ್‌ನಲ್ಲಿ ಬ್ರಜ್ ಭೂಷಣ್ ಸಿಂಗ್ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಂದ್ಯದ ನಂತರ ಅಥ್ಲೀಟ್‌ಗಳು ಫೆಡರೇಶನ್ ಮುಖ್ಯಸ್ಥ ಮತ್ತು ಮುಖ್ಯ ತರಬೇತುದಾರರೊಂದಿಗೆ ಫೋಟೊಗಾಗಿ ನಿಂತಿದ್ದರು. ಆಗ ಸಿಂಗ್ ಮಹಿಳಾ ಕುಸ್ತಿಪಟುವಿನ ಪೃಷ್ಠ ಮುಟ್ಟಿದ್ದಾರೆ. ನನ್ನ ಒಪ್ಪಿಗೆಯಿಲ್ಲದೆ ಅವರು ನನ್ನ ದೇಹವನ್ನು ಮುಟ್ಟಿರುವುದು ಅತ್ಯಂತ ಅಸಭ್ಯ ಮತ್ತು ಆಕ್ಷೇಪಾರ್ಹ ಎಂದು ಆಕೆ ಹೇಳಿರುವುದಾಗಿ ಎಫ್ಐಆರ್​​ನಲ್ಲಿದೆ. ಬ್ರಿಜ್ ಭೂಷಣ್ ಸಿಂಗ್ ಅವರು ಈ ರೀತಿ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಅಂತಾರಾಷ್ಟ್ರೀಯ ರೆಫರಿ ಹೇಳಿದ್ದಾರೆ. ಸಿಂಗ್ ವರ್ತನೆಯಿಂದ ರೋಸಿ ಹೋದ ಕ್ರೀಡಾಪಟು ನಾನು ಫೋಟೊಗೆ ನಿಲ್ಲುವುದಿಲ್ಲ ಎಂದು ಹೇಳಿ ಕೋಪದಿಂದ ಹೊರನಡೆದಿದ್ದರು ಎಂದು ಜಗಬೀರ್ ಸಿಂಗ್ ಹೇಳಿದ್ದಾರೆ.

ನನ್ನ ಮೈ ಮುಟ್ಟಿ ಕಿರುಕುಳ ಅನುಭವಿಸಿದ ನಂತರ ನಾನು ಅಲ್ಲಿಂದ ದೂರ ಹೋಗಲು ಪ್ರಯತ್ನಿಸಿದೆ. ಆಗ ಅವರು ಬಲವಂತವಾಗಿ ತನ್ನ ಭುಜವನ್ನು ಹಿಡಿದಿದ್ದಾರೆ ಎಂದು ಕುಸ್ತಿಪಟು ತನ್ನ ದೂರಿನಲ್ಲಿ ಹೇಳಿದ್ದಾರೆ. ನಾವೆಲ್ಲರೂ ಫೋಟೊಗಾಗಿ ನಿಂತಿದ್ದೆವು. ಆದ್ದರಿಂದ ಎಲ್ಲರೂ ಇದನ್ನು ಗಮನಿಸಿದರು ಎಂದಿದ್ದಾರೆ ಜಗ್ಬೀರ್ ಸಿಂಗ್.

ದೆಹಲಿ ಪೊಲೀಸರು ಜಗ್ಬೀರ್ ಸಿಂಗ್ ಅವರಲ್ಲಿ ಲಕ್ನೋ ಘಟನೆಯ ಬಗ್ಗೆ ಮಾತ್ರ ಪ್ರಶ್ನಿಸಿದ್ದಾರೆ, ಆದರೆ ಎನ್‌ಡಿಟಿವಿಯೊಂದಿಗಿನ ಸಂಭಾಷಣೆಯಲ್ಲಿ ಅವರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ 2013 ರ ಮತ್ತೊಂದು ಆಪಾದಿತ ಘಟನೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದು, ಇದು ಫೆಡರೇಶನ್ ಮುಖ್ಯಸ್ಥರ ಭೀಕರ ಮುಖವನ್ನು ಬಹಿರಂಗಪಡಿಸಿತು ಎಂದಿದ್ದಾರೆ.

ಇದನ್ನೂ ಓದಿ: Wrestlers Protest: ಬ್ರಿಜ್​ ಭೂಷಣ್ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿಲ್ಲ: ಅಪ್ರಾಪ್ತ ಕುಸ್ತಿಪಟುವಿನ ತಂದೆಯ ಹೇಳಿಕೆ

ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ನಡೆದ ಸ್ಪರ್ಧೆಯ ಭೋಜನ ಕಾರ್ಯಕ್ರಮದ ವೇಳೆ, ಸಿಂಗ್ ಕುಡಿದ ಮತ್ತಿನಲ್ಲಿ ಮಹಿಳಾ ಆಟಗಾರರಿಗೆ ಕಿರುಕುಳ ನೀಡಿದ್ದಾನೆ. ಅವರ ವರ್ತನೆ ಅಸಹನೀಯವಾಗಿತ್ತು, ಬ್ರಿಜ್ ಭೂಷಣ್ ಸಿಂಗ್ ಮತ್ತು ಅವರ ಸಹಚರರು ಕುಡಿದ ಮತ್ತಿನಲ್ಲಿ ಮಹಿಳಾ ಕುಸ್ತಿಪಟುಗಳನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಾರಂಭಿಸಿದರು. ಬಲವಂತವಾಗಿ ಅವರನ್ನು ತಬ್ಬಿಕೊಂಡರು. ಅವರಿಗೆ ತರಬೇತಿಯ ವಸ್ತುಗಳನ್ನು ನೀಡಿದರು ಎಂದು ಎಂದು ಜಗ್ಬೀರ್ ಸಿಂಗ್ ಹೇಳಿದ್ದಾರೆ.

ಇದರಿಂದ ಸಿಟ್ಟುಗೊಂಡು ಕೆಲವು ಮಹಿಳೆಯರು ಊಟ ಬಿಟ್ಟು ಹೋದರು. ನಾವು ಫೆಡರೇಶನ್‌ನ ಅಧ್ಯಕ್ಷ ಸ್ಥಾನವನ್ನು ರಕ್ಕಸನಿಗೆ ನೀಡಿದ್ದೇವೆ ಎಂದು ನಮಗೆ ಅನಿಸುತ್ತದೆ ಎಂದಿದ್ದಾರೆ ರೆಫರಿ.

ಅಂದಹಾಗೆ ನೀವು ಇಷ್ಟು ದಿನ ಮೌನವಾಗಿದ್ದು ಯಾಕೆ ಎಂದು ಕೇಳಿದಾಗ,  ರಕ್ಷಕನೇ ಆಕ್ರಮಣಕಾರಿಯಾದಾಗ, ಎಲ್ಲಿಗೆ ಹೋಗಲಿ?. ಸಿಂಗ್ ಟಾಪ್ ಬಾಸ್ ಆಗಿರುವುದರಿಂದ ಮತ್ತು ಭಾರೀ ಪ್ರಭಾವವನ್ನು ಹೊಂದಿದ್ದರಿಂದ ಮಹಿಳೆಯರು ಮತ್ತು ಇತರರು ತಮ್ಮ ವೃತ್ತಿಜೀವನದ ಬಗ್ಗೆ ಭಯಪಡುತ್ತಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಅಥ್ಲೀಟ್‌ಗಳನ್ನು ಹಿಡಿದುಕೊಂಡಿದ್ದರು. ಅವರಲ್ಲಿ ಅನಗತ್ಯ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರು. ನಿಮ್ಮ ವೃತ್ತಿಜೀವನವನ್ನು ಬೆಂಬಲಿಸುತ್ತೇವೆ,ನಮ್ಮ ಜತೆ ಲೈಂಗಿಕ ರೀತಿಯಲ್ಲಿ ಸಹಕರಿಸಿ ಎಂದು ಅವರು ಹೇಳಿದರು. ಅಪ್ರಾಪ್ತೆಯ ಎದೆಗೆ ಕೈ ಹಾಕಿ, ಆಕೆಯನ್ನು ನಿರಂತರವಾಗಿ ಹಿಂಬಾಲಿಸಿದರು ಎಂದು ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಎರಡು ಎಫ್‌ಐಆರ್‌ಗಳು ಹೇಳುತ್ತವೆ. ಲೈಂಗಿಕವಾಗಿ ಸಹಕರಿಸದವರಿಗೆ ಬಿಜೆಪಿ ಸಂಸದ ಸಮಸ್ಯೆಗಳನ್ನು ಸೃಷ್ಟಿಸಿ, ವೃತ್ತಿಪರ ಅವಕಾಶಗಳನ್ನು ನಿರಾಕರಿಸಿದ್ದಾರೆ ಎಂಬ ಆರೋಪವಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:09 pm, Sat, 10 June 23