AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wrestlers Protest: ಬ್ರಿಜ್​ ಭೂಷಣ್ ವಿರುದ್ಧ 2 ಎಫ್​ಐಆರ್​, ಕಿರುಕುಳ, ಕೆಟ್ಟ ಸ್ಪರ್ಶ ಸೇರಿದಂತೆ 10 ಆರೋಪಗಳು

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೆಹಲಿ ಪೊಲಿಸರು ಎರಡು ಎಫ್​ಐಆರ್​ ಮತ್ತು 10 ದೂರುಗಳನ್ನು ದಾಖಲಿಸಿದ್ದಾರೆ.

Wrestlers Protest: ಬ್ರಿಜ್​ ಭೂಷಣ್ ವಿರುದ್ಧ 2 ಎಫ್​ಐಆರ್​, ಕಿರುಕುಳ, ಕೆಟ್ಟ ಸ್ಪರ್ಶ ಸೇರಿದಂತೆ 10 ಆರೋಪಗಳು
ಬ್ರಿಜ್ ಭೂಷಣ್
ನಯನಾ ರಾಜೀವ್
|

Updated on: Jun 02, 2023 | 12:28 PM

Share

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೆಹಲಿ ಪೊಲಿಸರು ಎರಡು ಎಫ್​ಐಆರ್​ ಮತ್ತು 10 ದೂರುಗಳನ್ನು ದಾಖಲಿಸಿದ್ದಾರೆ. ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಎರಡು ಎಫ್​ಐಆರ್​ಗಳ​ ಪ್ರಕಾರ, ಲೈಂಗಿಕ ಬಯಕೆ ಈಡೇರಿಸಲು ಮಹಿಳಾ ಕುಸ್ತಿಪಟುಗಳನ್ನು ಒತ್ತಾಯಿಸಿದ ಆರೋಪ ಡಬ್ಲ್ಯುಎಫ್​ಐ ಮುಖ್ಯಸ್ಥರ ಮೇಲಿದೆ. ಇದಲ್ಲದೆ, ಲೈಂಗಿಕ ಶೋಷಣೆ ಸಂಬಂಧ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ 10 ದೂರುಗಳು ದಾಖಲಾಗಿವೆ. ಇದರಲ್ಲಿ ಬ್ರಿಜ್ ಭೂಷಣ್ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ. ಬ್ರಿಜ್ ಭೂಷಣ್ ಅನೇಕ ಬಾರಿ ಕಿರುಕುಳ ನೀಡಿದ್ದಾರೆ ಎಂದು ಆಟಗಾರರು ಆರೋಪಿಸಿದ್ದಾರೆ.

ದೂರಿನಲ್ಲಿ ಅನುಚಿತವಾಗಿ ಸ್ಪರ್ಶಿಸುವುದು, ಬೆದರಿಕೆ, ಲೈಂಗಿಕ ಕಿರುಕುಳ, ಅನುಚಿತ ವರ್ತನೆ, ಯಾವುದೇ ನೆಪದಲ್ಲಿ ಎದೆಯನ್ನು ಮುಟ್ಟುವುದು ಸೇರಿದಂತೆ 10 ಪ್ರಕರಣಗಳು ದಾಖಲಾಗಿವೆ.

ಕುಸ್ತಿಪಟುಗಳು ಏಪ್ರಿಲ್ 21 ರಂದು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ದೂರು ನೀಡಿದ್ದರು. ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದ ನಂತರ, ದೆಹಲಿ ಪೊಲೀಸರು ಏಪ್ರಿಲ್ 28 ರಂದು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಈ ಎರಡೂ ಎಫ್‌ಐಆರ್‌ಗಳ ಪ್ರತಿಗಳು ಮುನ್ನೆಲೆಗೆ ಬಂದಿವೆ.

ಮತ್ತಷ್ಟು ಓದಿ:Wrestlers Protest: ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಿದ ದೆಹಲಿ ಪೊಲೀಸ್

ಈ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಏಪ್ರಿಲ್ 28ರಂದು ಎರಡೂ ಎಫ್‌ಐಆರ್‌ಗಳು 3 ವರ್ಷ ಜೈಲು ಶಿಕ್ಷೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 354, 354 (ಎ), 354 (ಡಿ) ಮತ್ತು 34 ಅಡಿಯಲ್ಲಿ ಎರಡು ಎಫ್​ಐಆರ್​ ದಾಖಲಾಗಿದ್ದು, ಆರೋಪ ಸಾಬೀತಾದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ. ಮೊದಲ ಎಫ್​ಐಆರ್​ನಲ್ಲಿ ಆರು ಒಲಿಂಪಿಯನ್​ಗಳ ದೂರನ್ನು ಉಲ್ಲೇಖಿಸಲಾಗಿದೆ. ಎರಡನೇ ಎಫ್​ಐಆರ್​ ಅಪ್ರಾಪ್ತ ಕುಸ್ತಿಪಟುವಿನ ತಂದೆ ಮಾಡಿರುವ ಆರೋಪದ ಮೇಲೆ ದಾಖಲಾಗಿದೆ.

ಪೋಕ್ಸೋ ಪ್ರಕರಣದಲ್ಲಿ 5 ವರ್ಷ ಜೈಲು ಅಪ್ರಾಪ್ತ ಬಾಲಕಿಯ ತಂದೆಯ ದೂರಿನ ಮೇರೆಗೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಇದು ಪೋಕ್ಸೊ ಕಾಯಿದೆಯ ಸೆಕ್ಷನ್ 10 ರ ಅಡಿಯಲ್ಲಿ, ಇದರಲ್ಲಿ ಐದರಿಂದ ಏಳು ವರ್ಷಗಳವರೆಗೆ ಶಿಕ್ಷೆಯ ಅವಕಾಶವಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಘಟನೆಗಳು 2012 ರಿಂದ 2022 ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ ನಡೆದಿವೆ. ಅಪ್ರಾಪ್ತರ ತಂದೆಯ ಪರವಾಗಿ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಆಟಗಾರ ಪದಕ ಗೆದ್ದಾಗ ಚಿತ್ರ ತೆಗೆಯುವ ನೆಪದಲ್ಲಿ ಆರೋಪಿಗಳು ಅವರನ್ನು ಬಿಗಿಯಾಗಿ ಹಿಡಿದಿದ್ದರು ಎಂದು ಇದರಲ್ಲಿ ಹೇಳಲಾಗಿದೆ.

ಮೊದಲ ಎಫ್ಐಆರ್ – ವಯಸ್ಕ ಕುಸ್ತಿಪಟುಗಳ ದೂರಿನ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದಾಖಲಾಗಿರುವ ಮತ್ತೊಂದು ದೂರಿನಲ್ಲಿ, ಕುಸ್ತಿಪಟುವಿನ ಟೀ ಶರ್ಟ್​ ತೆಗೆದು, ಆಕೆಯ ಎದೆಯ ಮೇಲೆ ಕೈ ಇಟ್ಟ ಆರೋಪವಿದೆ. ಬಲವಂತವಾಗಿ ನನ್ನನ್ನು ಹತ್ತಿರಕ್ಕೆ ಎಳೆದುಕೊಂಡರು ಎಂದು ದೂರಲಾಗಿದೆ. ಎಳೆದು ತಬ್ಬಿಕೊಂಡು ಹಣದ ಆಮಿಷವೊಡ್ಡಿ ಲೈಂಗಿಕ ಬಯಕೆ ಈಡೇರಿಸಲು ಒತ್ತಾಯಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಸಿರಾಟದ ಮಾದರಿಯನ್ನು ಪರೀಕ್ಷಿಸುವುದಾಗಿ ಹೇಳಿ ಹೊಟ್ಟೆಯನ್ನು ಅನುಚಿತವಾಗಿ ಸ್ಪರ್ಶಿಸಿದರು ಎಂದು ಮತ್ತೊಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಲಿನಲ್ಲಿ ನಿಂತಿದ್ದಾಗ ಅನುಚಿತವಾಗಿ ಸ್ಪರ್ಶಿಸಿದರು. ಅಂಗಾಂಗಳನ್ನು ಮುಟ್ಟಿದರು ಎಂದು ಇನ್ನೊಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ