Chhota Rajan: ನೆಟ್‌ಫ್ಲಿಕ್ಸ್ ವೆಬ್ ಸೀರೀಸ್ ‘ಸ್ಕೂಪ್’ ತಡೆಗೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಛೋಟಾ ರಾಜನ್
ಗ್ಯಾಂಗ್ಸ್ಟರ್ ರಾಜೇಂದ್ರ ನಿಕಾಲ್ಜೆ ಅಲಿಯಾಸ್ ಛೋಟಾ ರಾಜನ್ ಅವರ ವ್ಯಕ್ತಿ ಚರಿತ್ರೆಗೆ ಸಂಬಂಧಿಸಿದಂತೆ ಜೂನ್ 2 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ವೆಬ್ ಸರಣಿ "ಸ್ಕೂಪ್" ಬಿಡುಗಡೆಗೆ ತಡೆಯಾಜ್ಞೆ ಕೋರಿ ಗುರುವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ದೆಹಲಿ: ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ರಾಜೇಂದ್ರ ನಿಕಾಲ್ಜೆ ಅಲಿಯಾಸ್ ಛೋಟಾ ರಾಜನ್ (Chhota Rajan) ಅವರ ವ್ಯಕ್ತಿ ಚರಿತ್ರೆಗೆ ಸಂಬಂಧಿಸಿದಂತೆ ಜೂನ್ 2 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ವೆಬ್ ಸರಣಿ “ಸ್ಕೂಪ್” ಬಿಡುಗಡೆಗೆ ತಡೆಯಾಜ್ಞೆ ಕೋರಿ ಗುರುವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಟ್ರೇಲರ್ನ್ನು ತೆಗೆದುಹಾಕಲು ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಪ್ರಸ್ತುತ ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್, ತನ್ನ ಪೂರ್ವಾನುಮತಿ ಪಡೆಯದೆ ತನ್ನ ವ್ಯಕ್ತಿತ್ವದ ಬಗ್ಗೆ ಬರೆಯುವುದು ಅಥವಾ ಚಲನಚಿತ್ರ ಮಾಡುವುದು ಅಥವಾ ದುರ್ಬಳಕೆ ಮಾಡುವುದು ತನ್ನ ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆ ಮತ್ತು ಮಾನನಷ್ಟವಾಗಿದೆ ಎಂದು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿರುವ, ಈಗಾಗಲೇ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಛೋಟಾ ರಾಜನ್, ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವೆಬ್ ಸರಣಿಯ ತಯಾರಕರನ್ನು ನಿರ್ಬಂಧಿಸುವಂತೆ ತಡೆಯಾಜ್ಞೆಯನ್ನು ಕೋರಿದ್ದಾನೆ. ಈಗಾಗಲೇ ಟ್ರೇಲರ್ನ್ನು ಪ್ರಸಾರ ಮಾಡುವ ಮೂಲಕ ವೆಬ್ ಸರಣಿಯ ತಯಾರಕರು ಗಳಿಸಿದ ಹಣವನ್ನು ವೆಬ್ ಸರಣಿಯ ತಯಾರಕರು 1 ಕೋಟಿ ರೂ, ನಂತೆ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Chhota Rajan: ಭೂಗತ ಪಾತಕಿ ಛೋಟಾ ರಾಜನ್ ಏಮ್ಸ್ಗೆ ದಾಖಲು; ಜಾಮೀನು ನೀಡಬೇಡಿ ಎಂದು ಸಿಬಿಐನಿಂದ ಅರ್ಜಿ
ಛೋಟಾ ರಾಜನ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ, ಅವರ ಹೆಸರು, ವ್ಯಂಗ್ಯಚಿತ್ರ, ಚಿತ್ರ ಮತ್ತು ಯಾವುದೇ ಇತರ ನೇರ/ಪರೋಕ್ಷ ಉಲ್ಲೇಖಗಳನ್ನು ಒಳಗೊಂಡಂತೆ ಅವರ ವ್ಯಕ್ತಿತ್ವದ ಬಳಕೆಗೆ ಅವರ ಒಪ್ಪಿಗೆಯಿಲ್ಲದೆ ಮಾಡಿರುವುದು ಅವರ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಇದು ಮಾನಹಾನಿ ಎಂದು ಹೇಳಲಾಗಿದೆ.
ಆರು ಸಂಚಿಕೆಗಳ ನೆಟ್‌ಫ್ಲಿಕ್ಸ್ ವೆಬ್ ಸರಣಿ ಸ್ಕೂಪ್ 2019ರಲ್ಲಿ ಬಿಡುಗಡೆಯಾದ ಪತ್ರಕರ್ತೆ ಜಿಗ್ನಾ ವೋರಾ ಅವರ ಜೈಲು ಆತ್ಮಚರಿತ್ರೆ ಬಿಹೈಂಡ್ ಬಾರ್ಸ್ ಇನ್ ಬೈಕುಲ್ಲಾ, ಮೈ ಡೇಸ್ ಇನ್ ಪ್ರಿಸನ್ನಿಂದ ಈ ಚಿತ್ರವು ಪ್ರೇರಿತವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ