ಮುಂಬೈ: ಒಬ್ಬಳು ಹುಡುಗಿಗೆ ಒಂದು ಬಾರಿ “ಐ ಲವ್ ಯೂ” ಎಂದು ಹೇಳುವುದು ಅವಳ ನಮ್ರತೆಗೆ ಉದ್ದೇಶಪೂರ್ವಕ ಅವಮಾನವಲ್ಲ, ಹೆಚ್ಚೆಂದರೆ ಅದು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದ ವಿಶೇಷ ನ್ಯಾಯಾಲಯವು ಪೋಕ್ಸೊ ಕಾಯಿದೆಯಡಿಯಲ್ಲಿ ಕೇಸು ದಾಖಲಿಸಲಾದ 23 ವರ್ಷದ ಯುವಕನನ್ನು ಖುಲಾಸೆಗೊಳಿಸಿದೆ. ವಿಶೇಷ ನ್ಯಾಯಾಧೀಶೆ ಕಲ್ಪನಾ ಪಾಟೀಲ್ ಅವರು ಮಂಗಳವಾರ ವಿಚಾರಣೆ ಮಾಡಿದ್ದು, ಬುಧವಾರ ವಿವರವಾದ ಆದೇಶ ಲಭ್ಯವಾಗಿದೆ. 17 ವರ್ಷದ ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಪ್ರಕಾರ, ಆರೋಪಿಯು 2016 ರಲ್ಲಿ ತಮ್ಮ ನಿವಾಸದ ಬಳಿ ಹುಡುಗಿಯನ್ನು ಪ್ರೀತಿಸುವುದಾಗಿ ಹೇಳಿದ್ದರು. ಆರೋಪಿ ಬಾಲಕಿಯನ್ನು ಗುರಾಯಿಸಿದ್ದಾನೆ ಮತ್ತು ಕಣ್ಣು ಹೊಡೆದಿದ್ದಾನೆ. ಆಕೆಯ ತಾಯಿಗೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ, ವಡಾಲಾ ಟಿಟಿ ಪೊಲೀಸರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಗೆ ಐ ಲವ್ ಯೂ ಹೇಳುವ ಒಂದೇ ಒಂದು ಘಟನೆಯು ಸಂತ್ರಸ್ತೆಯ ಮೇಲೆ ಆರೋಪಿಯ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಸಂತ್ರಸ್ತೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗದು ಎಂದು ನ್ಯಾಯಾಲಯ ಹೇಳಿದೆ.
ಸಂತ್ರಸ್ತೆಯ ನಮ್ರತೆಗೆ ಅವಮಾನ ಮಾಡುವ ಆರೋಪಿಯ ಬಹಿರಂಗ ಕೃತ್ಯವನ್ನು ಪ್ರಾಸಿಕ್ಯೂಷನ್ ದಾಖಲೆಗೆ ತಂದಿಲ್ಲ ಎಂದು ಅದು ಹೇಳಿದೆ.
ಆರೋಪಿಯು ಲೈಂಗಿಕ ಉದ್ದೇಶದಿಂದ ಸಂತ್ರಸ್ತೆಗೆ ಸಂಬಂಧಿಸಿದಂತೆ ಯಾವುದೇ ಕೃತ್ಯ ಎಸಗಿದ್ದಾನೆ ಅಥವಾ ಸಂತ್ರಸ್ತೆ ಅಥವಾ ಆಕೆಯ ತಾಯಿಗೆ ಯಾವುದೇ ರೀತಿಯ ಬೆದರಿಕೆಯನ್ನು ನೀಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ದಾಖಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಪೋಕ್ಸೊ ಕಾಯ್ದೆಯಡಿಯಲ್ಲಿ ಮುಖ ಮೈಥುನ ಗಂಭೀರ ಲೈಂಗಿಕ ದೌರ್ಜನ್ಯ ವ್ಯಾಪ್ತಿಗೆ ಬರುವುದಿಲ್ಲ: ಅಲಹಾಬಾದ್ ಹೈಕೋರ್ಟ್
Published On - 1:15 pm, Fri, 25 February 22